ಓಂ ಅಬ್ಜೋತ್ಫಲಕರಾಯ ನಮಃ
- ಶುಭೋದಯ
- ಪ್ಲವ ಸಂವತ್ಸರ
- ಉತ್ತರಾಯಣ
- ಶಿಶಿರ ಋತು
- ಫಾಲ್ಗುಣ ಮಾಸ
- ಶುಕ್ಲ ಪಕ್ಷ
- ಚತುರ್ದಶಿ ತಿಥಿ 13.29 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.
17/03/2022 ಗುರುವಾರ
- ಪೂರ್ವ ಫಾಲ್ಗುಣಿ ನಕ್ಷತ್ರ 24.33 ಕ್ಕೆ ಅಂತ್ಯ ಉತ್ತರ ಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ಶೂಲ 25.06
- ಕರಣ: ವಾಣಿಜ 13.29
- ಭದ್ರ 25.12
- ಸೂರ್ಯೋದಯ: 06.27
- ಸೂರ್ಯಾಸ್ತ : 18.29
- ರಾಹುಕಾಲ: 13.58-15.29
- ಯಮಘಂಡಕಾಲ: 06.27-07.57
- ಗುಳಿಕಕಾಲ: 09.28-10.58
- ಅಮೃತಘಳಿಗೆ: 07.58-08.51
12.04-13.57
16.52-18.27
21.41-22.28
25.41-27.16
28.53-30.26 - ಮಹೇಂದ್ರಘಳಿಗೆ:20.05-21.49
ಎಲ್ಲರಿಗೂ ಶುಭವಾಗಲಿ.
ತಟಸ್ಥನಾಗ್ದೆ ತಾಜಾತನದಿ ತಿತಿಕ್ಷುವಾಗಿ ತೀವ್ರ ತುರ್ತು ತೂಕದಿ ತೃಪ್ತಿಯಲಿ ತೆತ್ತಿಗನಾಗಿ ತೇಜೋಮಯ ತೈಲವಾಗಿ ತೊಡಕುಗಳ ತೋಡಿ ತೌಡು ಮಾಡಲು ತಂತುವಾಗಿ ನಿಲ್ಲು.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನ ಉದಯದ ಚಿಂತೆ, ಭ್ರಮರಂಗೆ ಪರಿಮಳದ ಬಡುಂಬುವುದೆ ಚಿಂತೆ, ಎನಗೆ ನಮ್ಮ ಕೂಡಲಸಂಗಮದೇವನ ನೆನೆವ ಚಿಂತೆ.
ಶರಣ ಶಿವಾನಂದ ಕಲ್ಲೂರ