ಓಂ ಸಮಸ್ತ ಜಗದಾಧಾರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ತೃತೀಯ ತಿಥಿ 07.32 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.
04/05/2022 ಬುಧವಾರ
- ಮೃಗಶಿರ ನಕ್ಷತ್ರ 30.15 ಕ್ಕೆ ಆರಿದ್ರ ನಕ್ಷತ್ರ ಆರಂಭ.
- ಯೋಗ: ಅತಿಗಂಡ 17.05
- ಕರಣ: ಗರಜ 07.32
- ವಾಣಿಜ 20.45
- ಸೂರ್ಯೋದಯ: 05.59
- ಸೂರ್ಯಾಸ್ತ: 18.34
- ರಾಹುಕಾಲ: 12.16-13.51
- ಯಮಘಂಡಕಾಲ: 07.33-09.08
- ಗುಳಿಕಕಾಲ: 10.42-12.16
- ಅಮೃತಘಳಿಗೆ: 13.52-13.59
15.36-17.01
18.48-21.11
26.48-29.59 - ಮಹೇಂದ್ರಘಳಿಗೆ: 12.17-12.23
ಎಲ್ಲರಿಗೂ ಶುಭವಾಗಲಿ.
ಹೊನ್ನ ನೇಗಿಲ ಉತ್ತು ಎಕ್ಕೆಯ ಬೀಜವ ಬಿತ್ತುವರೇ?ಕರ್ಪುರನ ಮರನ ಕಡಿದು ಕಳ್ಳಿಗೆ ಬೇಲಿಯನಿಕ್ಕುವರೇ? ಶ್ರೀಗಂಧದ ಮರನ ಕಡಿದು ಬೇವಿಂಗೆ ಅಡೆಯನಿಕ್ಕುವರೇ? ನಮ್ಮ ಕೂಡಲ ಸಂಗನ ಶರಣರಿಗಲ್ಲದೇ ಬೇರೆ ಇಚ್ಛಾಭೋಜನವಿಕ್ಕಿದರೆ ಕಿಚ್ಚಿನೊಳಗೆ ಉಚ್ಛೆಯ ಹೊಯಿದು ಹವಿಯ ಬೀಳ್ದಂತಾಯಿತ್ತು.
ರಕ್ತಿಯಿಂದ ರಚನಾತ್ಮಕವಾಗಿ ರಮಣೀಯತೆಯಿಂದ ರಥವೆಳೆಯುತಾ ರತ್ನವಾಗಿರಿ. ರಾಗ ದ್ವೇಷಗಳ ರಾಜಿಸಲು ಬಿಟ್ಟು ರಾಡಿ ಮಾಡಿಕೊಳ್ಳದೆ ರಾಜರಾಗಿರಿ. ರಿಪುಗಳನೂ ರಿಕ್ತರನೂ ರಿವಾಜಿನಿಂದಲೇ ನಡೆಸಿಕೊಳ್ಳಿ. ರೀತಿ ಸಮವಾಗಿರಲಿ. ರುದ್ರರಾಗದೆ ರುಚಿರರಾಗಿರಿ. ರೂಡಿ ಮಾತುಗಳಿವು ರೂಡಿಸಿಕೊಳ್ಳಿ.
ಶರಣ ಶಿವಾನಂದ ಕಲ್ಲೂರ