ಓಂ ವರಮೂಷಕವಾಹನಾಯೈ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಚತುರ್ಥಿ ತಿಥಿ 10.00 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.
05/05/2022 ಗುರುವಾರ
- ಮೃಗಶಿರ ನಕ್ಷತ್ರ 06.15 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
- ಯೋಗ: ಸುಕರ್ಮ 18.05
- ಕರಣ: ಭದ್ರ 10.00
- ಭವ 23.17
- ಸೂರ್ಯೋದಯ: 05.59
- ಸೂರ್ಯಾಸ್ತ: 18.34
- ರಾಹುಕಾಲ: 13.51-15.25
- ಯಮಘಂಡಕಾಲ: 05.59-07.33
- ಗುಳಿಕಕಾಲ: 09.07-10.42
- ಅಮೃತಘಳಿಗೆ: 07.34-08.23
11.36-13.50
16.24-17.59
21.12-21.59
25.12-26.47
28.24-29.59 - ಮಹೇಂದ್ರಘಳಿಗೆ: 19.36-21.11
ಎಲ್ಲರಿಗೂ ಶುಭವಾಗಲಿ.
ಋಣ ತಪ್ಪಿದ ಹೆಂಡಿರಲ್ಲಿ, ಗುಣ ತಪ್ಪಿದ ನೆಂಟರಲ್ಲಿ, ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದ ಆಳಿನಲ್ಲಿ, ಸಿರಿತೊಲಗಿದ ಅರಸಿನಲ್ಲಿ, ವರವಿಲ್ಲದ ದೈವದಲ್ಲಿ ಫಲವೇನೋ? ಕಳೆದ ಹೂವಿನಲ್ಲಿ ಕಂಪು, ಸುಳಿದ ಸೂಳೆಯಲ್ಲಿ ಹೆಂಪ, ಕೊಳಚೆಯ ನೀರಿನಲ್ಲಿ ಗುಂಪನರಸುವಿರಿ ಮರುಳೇ. ವರಗುರು ವಿಶ್ವಕ್ಕೆಲ್ಲ ಗಿರಿಜಾ ಮನೋವಲ್ಲಭ ಪರಮ ಕಾರಣೀಕ ನಮ್ಮ ಕೂಡಲಸಂಗಮದೇವ.
ರೆಟ್ಟೆ ಮುರಿದು ಕೆಲಸ ಮಾಡದೆ ರೆಕ್ಕಟ ಕಾಲ ಕಳೆಯಬೇಡಿ. ರೇಜಿಗೆ ತಂದು ರೇಗಿಸಿ ರೇಖೆ ಹಾಳು ಮಾಡೀತು. ರೈವತನರಷ್ಟೆ ಅಲ್ಲದೆ ರೈತರನು ಗೌರವಿಸಿ. ರೊಣಕದೆ ರೊಚ್ಚಿಗೇಳದೆ ಇರಿ. ರೋಷಾವೇಶ ರೋಸೀತು. ರೌದ್ರರಾಗಿ ರೌರವ ನರಕ ಕಾಣದಿರಿ. ರಂಜಿಸುತೆಲ್ಲರ ರಂಗಾಗಿರಿ.
ಶರಣ ಶಿವಾನಂದ ಕಲ್ಲೂರ