ಓಂ ವಿನಾಯಕಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಅಷ್ಟಮಿ ತಿಥಿ 18.32 ಕ್ಕೆ ಅಂತ್ಯ ನವಮಿ ತಿಥಿ ಆರಂಭ.
09/05/2022 ಸೋಮವಾರ
- ಆಶ್ಲೇಷ ನಕ್ಷತ್ರ 17.07 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
- ಯೋಗ: ವೃದ್ಧಿ 20.41
- ಕರಣ: ಭವ 18.32
- ಸೂರ್ಯೋದಯ: 05.57
- ಸೂರ್ಯಾಸ್ತ: 18.35
- ರಾಹುಕಾಲ: 07.32-09.07
- ಯಮಘಂಡಕಾಲ: 10.41-12.16
- ಗುಳಿಕಕಾಲ: 13.51-15.26
- ಅಮೃತಘಳಿಗೆ: 05.57-07.31
12.17-13.09
15.34-17.09
18.46-21.09
23.34-26.45
ಎಲ್ಲರಿಗೂ ಶುಭವಾಗಲಿ.
ಸಮಸ್ತ ಕತ್ತಲೆಯ ಮಸಕ ಕಳೆದಿಪ್ಪ ಇರುವ ನೋಡಾ, ಬೆಳಗಿಂಗೆ ಬೆಳಕು ಸಿಂಹಾಸನವಾಗಿ ಬೆಳಗು ಬೆಳಗ ಕೂಡಿದ ಕೂಟವ ಕೂಡಲಸಂಗಮ ತಾನೇ ಬಲ್ಲ.
ವಾಗಾಡಂಬರ ವಾಗ್ವಾದ ಹೆಚ್ವಿಸಿ ವಾಗ್ಯುದ್ಧ ತಂದು ವಾಲಿಸುವುದು. ವಾಡಿಕೆ ನಡೆ ವಾಟವ ವಾಸ್ತವ್ಯದತ್ತ ಕೊಂಡೊಯ್ದು ವಾಸಿ ಮಾಡುವುದು. ವಾತ್ಸಲ್ಯದ ವಾಯುವು ವಾರಿಗೆಯವರನೆಲ್ಲಾ ವಾಂಚಲ್ಯದಿ ವಾಸ ಮಾಡುವಂತೆ ಮಾಡುವುದು.
ವಾರ್ಧಿಕ್ಯ ವಾಪಸ್ಸು ಬಾರಲಾಗದ ವಾಸ್ತವವು.
ಶರಣ ಶಿವಾನಂದ ಕಲ್ಲೂರ