ಗೌರಿಪುತ್ರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ದಶಮಿ ತಿಥಿ 19.31 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.
11/5/2022 ಬುಧವಾರ
- ಪೂರ್ವಫಾಲ್ಗುಣಿ ನಕ್ಷತ್ರ 19.37 ಕ್ಕೆ ಅಂತ್ಯ ಉತ್ತರಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ವ್ಯಾಘಾತ 19.23
- ಕರಣ: ತೈತುಲ 07.33
- ಗರಜ 19.31
- ಸೂರ್ಯೋದಯ: 05.57
- ಸೂರ್ಯಾಸ್ತ : 18.36
- ರಾಹುಕಾಲ:12.16-13.51
- ಯಮಘಂಡಕಾಲ:07.31-09.06
- ಗುಳಿಕಕಾಲ: 10.41-12.16
- ಅಮೃತಘಳಿಗೆ: 15.34-17.09
18.46-21.09
27.46-30.57
ಎಲ್ಲರಿಗೂ ಶುಭವಾಗಲಿ.
ಕೆರೆಹಳ್ಳ ಬಾವಿಗಳು ಮೈದೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು. ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು. ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವ ಕಾಣಬಹುದು.
ವಿಕರ್ಮ ವಿಕಾರತಂದು ವಿಘಟಿಸುವುದು. ವಿಚಕ್ಷಣತೆ ವಿನಯಶೀಲತೆಯಲ್ಲಿದ್ದಲ್ಲಿ ವಿಚ್ಛಿನ್ನವಾಗದೆ ವಿಜಯ ತರುವುದು. ವಿಘ್ನಗಳನು ವಿವೇಚನೆಯಿಂದಲಿ ವಿಚಲಿಸಿ ವಿಜೃಂಭಿಸು. ವಿದ್ಯೆ ವಿದ್ವಾನ್ಮಾಡುವುದು ವಿನೀತನಾಗಿದ್ದಲ್ಲಿ ವಿಪುಲ ವಿಪತ್ತುಗಳ ವಿಫಲ ಮಾಡೀತು.
ಶರಣ ಶಿವಾನಂದ ಕಲ್ಲೂರ