ಓಂ ಸ್ಕಂದಾಗ್ರಜಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ದ್ವಾದಶಿ ತಿಥಿ 17.26 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
13/05/2022 ಶುಕ್ರವಾರ
- ಹಸ್ತ ನಕ್ಷತ್ರ 18.47 ಕ್ಕೆ ಅಂತ್ಯ ಚಿತ್ತ ನಕ್ಷತ್ರ ಆರಂಭ.
- ಯೋಗ: ವಜ್ರ 15.40
- ಕರಣ: ಭವ 06.14
- ಬಾಳವ 17.26
- ಕೌಳವ 28.29
- ಸೂರ್ಯೋದಯ: 05.56
- ಸೂರ್ಯಾಸ್ತ: 18.36
- ರಾಹುಕಾಲ: 10.41-12.16
- ಯಮಘಂಡಕಾಲ:15.26-17.01
- ಗುಳಿಕಕಾಲ: 07.31-09.06
- ಅಮೃತಘಳಿಗೆ: 06.45-10.40
12.17-13.08
17.02-17.08
21.21-23.44
25.21-27.44 - ಮಹೇಂದ್ರಘಳಿಗೆ:27.45-28.32
ಎಲ್ಲರಿಗೂ ಶುಭವಾಗಲಿ.
ಹಾಲತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ, ಉಪ್ಪು ನೀರನುಂಬುವನ ವಿಧಿಯಂತೆ ಆಯಿತೆನ್ನ ಮತಿ ಕೂಡಲಸಂಗಮದೇವಾ.
ಶಕುನಿಯಾಗದೆ ಶತ್ರುಘ್ನನಾಗಿ ಶಪಥಗೈಯುತಾ ಸಾಧಿಸು. . ಶಕ್ತನಾಗಿ ಶಕುನಗಳಿಗೆದರದೆ ಶಕ್ಯ ಕೆಲಸಗಳ ಶತಕಾಲ ಮಾಡು. ಶರಣರಂತೆ ಶತಮಾನ ಕಳೆದರೂ ಶಬ್ದ ನಿನ್ನದು ಶಬ್ದಾಲಂಕಾರವಾಗಲಿ. ಶಬರಿಯಂತೆ ಶತದಿನಗಳ ಶಮೆ(ಸಹನೆ)ಯಿಂದ ಕಾದು ಗೆಲ್ಲು. ಶರಪಂಚರವಿದು ಶರೀರವಿದ ಶಲಾಕೆಯಾಗಿಸಿ ಶಪಿಸದೆ ಸಾಗು.
ಶರಣ ಶಿವಾನಂದ ಕಲ್ಲೂರ