ಓಂ ಅವ್ಯಯಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ತ್ರಯೋದಶಿ ತಿಥಿ 15.22 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.
14/05/2022 ಶನಿವಾರ
- ಚಿತ್ತ ನಕ್ಷತ್ರ 17.27 ಕ್ಕೆ ಅಂತ್ಯ ಸ್ವಾತಿ ನಕ್ಷತ್ರ ಆರಂಭ.
- ಯೋಗ: ಸಿದ್ಧಿ 12.57
- ಕರಣ: ತೈತುಲ 15.22
- ಗರಜ 26.07
- ಸೂರ್ಯೋದಯ: 05.56
- ಸೂರ್ಯಾಸ್ತ : 18.36
- ರಾಹುಕಾಲ: 09.06-10.41
- ಯಮಘಂಡಕಾಲ: 13.51-15.26
- ಗುಳಿಕಕಾಲ: 05.56-07.31
- ಅಮೃತಘಳಿಗೆ: 10.45-12.20
20.21-21.56
23.33-25.56
27.33-28.20
ಎಲ್ಲರಿಗೂ ಶುಭವಾಗಲಿ.
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ. ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ. ಶರೀರದೊಳಗಾತ್ಮವನಾರೂಕಾಣದಂತಿರಿಸಿದೆ. ನೀನು ಬೆರೆಸಿದ ಭೇದಕ್ಕೆ ಬೆರೆಗಾದೆನಯ್ಯಾ ರಾಮನಾಥ.
ಶಾಣೆಯಾದರೆ ಸಾಲದು ಶಾಮಕನಾಗಿ (ಸಮಾಧಾನಗೊಳಿಸುವನಾಗಿ) ಶಾಲೀನತೆ (ವಿನಯಶೀಲತೆ) ಹೊಂದಿ ಶಾಸ್ತ್ರಜ್ಞನಾಗು. ಶಾರೀರವಿದು ಶಾಶ್ವತವಲ್ಲ ಶಾನೆಹುಷಾರಾಗಿ ಶಾಪ ತಟ್ಟದಂತಿರು. ಶಾಮೀಲಾಗದೆ ಶಾರ್ದೂಲನಾಗಿ (ಶ್ರೇಷ್ಠನಾಗಿ) ಶಾಲು ಹೊದಿಸಿಕೊ. ಶಾಲೆ ಶಾಸ್ತ್ರ ಶಾಸನವ ಶಾಸ್ತ್ರೀಯವಾಗಿ ಅರಿ.
ಶರಣ ಶಿವಾನಂದ ಕಲ್ಲೂರ