ಓಂ ಪೂತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಚತುರ್ಥಿ ತಿಥಿ 12.45 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.
- *15/05/2022 ರವಿವಾರ*
- ಸ್ವಾತಿ ನಕ್ಷತ್ರ 15.34 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
- ಯೋಗ: ವೃತಾಪತಾ 09.47
- ಕರಣ: ವಾಣಿಜ 12.45
- ಭದ್ರ 23.17
- ಸೂರ್ಯೋದಯ: 05.56
- ಸೂರ್ಯಾಸ್ತ: 18.37
- ರಾಹುಕಾಲ: 17.01-18.37
- ಯಮಘಂಡಕಾಲ: 12.16-13.51
- ಗುಳಿಕಕಾಲ: 15.26-17.01
- ಅಮೃತಘಳಿಗೆ: 07.33-10.44
21.57-23.52 - ಮಹೇಂದ್ರಘಳಿಗೆ: 05.56-06.44
17.09-17.56
19.33-21.08
29.09-29.56
ಎಲ್ಲರಿಗೂ ಶುಭವಾಗಲಿ.
ಎಣ್ಣೆ ಇದ್ದು ಎಳ್ಳು ನೆನೆಯದ ಭೇದವ, ಕಿಚ್ಚಿದ್ದು ಕಲ್ಲು ಸಿಡಿಯದ ಭೇದವ, ಕಾಮವಿರ್ದು ಕನ್ನೆಯನನುಭವಿಸದ ಭೇದವ, ಪರನಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವ, ನರರೆತ್ತ ಬಲ್ಲರೈ ರಾಮನಾಥ.
ಶಿಕ್ಷಣದ ಉದ್ದೇಶವೇನೆಂದರೆ ಕೇವಲ ಕಲಿಸುವುದಲ್ಲ, ಕಲಿಸುವ ಆಸೆಯನ್ನು ಹುಟ್ಟಿಸುವುದು. ಶಿಕ್ಷಣ ನಡತೆ ಬೋಧಿಸದಿದ್ದಲ್ಲಿ, ಅಪಾಯಕಾರಿ. ಶಿಕ್ಷಣದ ರಹಸ್ಯವು ಗುಣವನ್ನು ಗೌರವಿಸುವುದರಲ್ಲಿದೆ. ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ, ಜೀವನದಲ್ಲಿ ಸಾಮರಸ್ಯ ಕಂಡುಕೊಳ್ಳುವುದು.
ಶರಣ ಶಿವಾನಂದ ಕಲ್ಲೂರ