ಓಂ ಇಂದ್ರಶ್ರೀಪ್ರದಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ಚತುರ್ಥಿ ತಿಥಿ 20.23 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.
19/05/2022 ಗುರುವಾರ
- ಪೂರ್ವಾಷಾಡ ನಕ್ಷತ್ರ 27.16 ಕ್ಕೆ ಅಂತ್ಯ ಉತ್ತರಾಷಾಡ
- ನಕ್ಷತ್ರ ಆರಂಭ.
- ಯೋಗ: ಸಾಧ್ಯ 14.56
- ಕರಣ: ಭವ 09.58
- ಬಾಳವ 20.23
- ಸೂರ್ಯೋದಯ: 05.55
- ಸೂರ್ಯಾಸ್ತ : 18.38
- ರಾಹುಕಾಲ:13.52-15.27
- ಯಮಘಂಡಕಾಲ: 05.55-07.30
- ಗುಳಿಕಕಾಲ: 09.05-10.41
- ಅಮೃತಘಳಿಗೆ: 07.31-08.19
11.32-13.51
16.20-17.55
21.08-21.55
25.08-26.43
28.20-29.55 - ಮಹೇಂದ್ರಘಳಿಗೆ: 19.32-21.07
ಎಲ್ಲರಿಗೂ ಶುಭವಾಗಲಿ.
ಸತ್ಯವೇ ಸರ್ವ ಶ್ರೇಷ್ಠ ಧರ್ಮ, ಸತ್ಯಕ್ಕಿಂತ ದೊಡ್ಡದಾದ ಧರ್ಮವಿಲ್ಲ. ಸತ್ಯಸಂಧನನ್ನು ನಾಶ ಮಾಡುವ ಶಕ್ತಿ ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ. ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗಮಾಡಿ, ಆದರೆ ಯಾವುದಕ್ಕೂ ಸತ್ಯ ತ್ಯಾಗ ಮಾಡಬೇಡಿ. ಸತ್ಯವೇ ತಾಯಿತಂದೆ, ಸತ್ಯವೇ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು.
ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲಾ ನಡೆದನಾ ಸುಂಕಕ್ಕಂಜಿ ಕಳವೆಯೆಲ್ಲ ಹೋಗಿ ಬರಿಗೋಣಿ ಉಳಿಯಿತ್ತು. ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ.
ಶರಣ ಶಿವಾನಂದ ಕಲ್ಲೂರ