ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ಷಷ್ಟಿ ತಿಥಿ 14.59 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
21/05/2022 ಶನಿವಾರ
- ಶ್ರವಣ ನಕ್ಷತ್ರ 23.45 ಕ್ಕೆ ಅಂತ್ಯ ಧನಿಷ್ಠ ನಕ್ಷತ್ರ ಆರಂಭ.
- ಯೋಗ:ಶುಕ್ಲ 08.10
- ಬ್ರಹ್ಮ 29.20
- ಕರಣ :ವಾಣಿಜ 14.59
- ಭದ್ರ 25.55
- ಸೂರ್ಯೋದಯ: 05.54
- ಸೂರ್ಯಾಸ್ತ: 18.38
- ರಾಹುಕಾಲ: 09.05-10.41
- ಯಮಘಂಡಕಾಲ: 13.52-15.27
- ಗುಳಿಕಕಾಲ: 05.54-07.30
- ಅಮೃತಘಳಿಗೆ:10.42-11.48
19.49-21.24
23.01-25.24
27.01-27.48
ಎಲ್ಲರಿಗೂ ಶುಭವಾಗಲಿ.
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.
ಸಮಯದ ಸದ್ವಿನಿಯೋಗವೇ ಯಶಸ್ಸಿನ ಗುಟ್ಟು. ಸಮಯವನ್ನು ವೃಥಾ ಹಾಳು ಮಾಡದೆ ಏನನ್ನಾದರೂ ಮಾಡು ಸುಮ್ಮನೆ ಕೂರಬೇಡ. ಸಮಯವು ಬದಲಾಗುವುದಿಲ್ಲ, ಬದಲಾಗುವವರು ನಾವೇ. ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ. ಸಮಯದ ಹಾಳು ಹಣದ ಹಾಳು.
ಶರಣ ಶಿವಾನಂದ ಕಲ್ಲೂರ