ಓಂ ಸರ್ವಾತ್ಮಿಕಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ತಿಥಿ 10.45 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.
24/05/2022 ಮಂಗಳವಾರ
- ಪೂರ್ವಭಾದ್ರಪದ ನಕ್ಷತ್ರ 22.32 ಕ್ಕೆ ಅಂತ್ಯ
- ಉತ್ತರಭಾದ್ರಪದ ನಕ್ಷತ್ರ ಆರಂಭ.
- ಯೋಗ:ವಿಷ್ಕುಂಭ 23.39
- ಕರಣ :ಗರಜ 10.45
- ವಾಣಿಜ 22.34
- ಸೂರ್ಯೋದಯ: 05.54
- ಸೂರ್ಯಾಸ್ತ : 18.39
- ರಾಹುಕಾಲ:15.28-17.03
- ಯಮಘಂಡಕಾಲ:09.05-10.41
- ಗುಳಿಕಕಾಲ: 12.17-13.52
- ಅಮೃತಘಳಿಗೆ: 08.19-09.04
17.04-19.30
20.19-21.06
25.07-26.42
27.31-28.18
ಎಲ್ಲರಿಗೂ ಶುಭವಾಗಲಿ.
ಸೀದು ಸೀಕಾಗಿ ಸೀಕರಣೆಯಾಗು. ಸುಕುಮಾರನಾಗಿ ಸುಗಂಧ ಹರಡುತಾ ಸುಗುಣವಂತನಾಗಿ ಸುಖಿಯಾಗುವೆ. ಸೂಚ್ಯ ಸೂಚನೆಗಳನು ಸೂಟಿಯಿಂದಲಿ ಸೂತ್ರಹಿಡಿದು ಸೂರೆಮಾಡಿ ಸೂಸುತಲಿರು. ಸೃಷ್ಟಿಯಿದ ಸೃಜಿಸಿದವನನೆನೆ. ಸೆಟೆಯದೆ ಸೆಣಸಾಡದೆ ಸೆಡುಕಿಂದ ಸೆಳೆಯುತಾ ಸೆಲೆಯಾಗಿ ಸೆಟ್ಟಿಯಾಗ್ವೆ.
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ, ಬಯಲ ಮರೆಯಲಡಗಿದ ಮರೀಚಿಯಂತೆ, ಕಂಗಳ ಮರೆಯಲಡಗಿದ ಬೆಳಗಿನಂತೆ, ಗುಹೇಶ್ವರ ನಿಮ್ಮ ನಿಲುವು.
ಶರಣ ಶಿವಾನಂದ ಕಲ್ಲೂರ