ಓಂ ಶಿವಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ದ್ವಾದಶಿ ತಿಥಿ 11.47 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
27/05/2022 ಶುಕ್ರವಾರ
- ಅಶ್ವಿನಿ ನಕ್ಷತ್ರ 26.25 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
- ಯೋಗ: ಸೌಭಾಗ್ಯ 22.07
- ಕರಣ :ತೈತುಲ 11.47
- ಗರಜ 24.25
- ಸೂರ್ಯೋದಯ: 05.54
- ಸೂರ್ಯಾಸ್ತ : 18.40
- ರಾಹುಕಾಲ:10.41-12.17
- ಯಮಘಂಡಕಾಲ:15.28-17.04
- ಗುಳಿಕಕಾಲ:07.29-09.05
- ಅಮೃತಘಳಿಗೆ :06.43-07.28
09.06-10.40
12.18-13.06
20.19-22.42
24.19-26.42 - ಮಹೇಂದ್ರಘಳಿಗೆ:26.43-27.30
ಎಲ್ಲರಿಗೂ ಶುಭವಾಗಲಿ.
ಹಾದಿತಪ್ಪಿ ಹಾನಿಗೊಳಗಾಗಿ ಹಾಹಾಕಾರಕ್ಕೊಳಗಾಗಿ ಹಾಳಾಗದಿರು. ಹಿತೈಷಿಯಾಗಿ ಹಿತವ ಬಯಸುತಾ ಹಿರಣ್ಮಯಿಯಾಗು ಹೀಗೆ ಹಾಗೆಂದು ಹೀಯಾಳಿಸಿ ಹೀನನಾಗದಿರು. ಹುರುಪಿನ ಹುಷಾರಾದ ಹುಲಿಯಾಗು. ಹೂತೋಟವಿದಲ್ಲ ಹೂಳೋಗುವೆ. ಹೃದ್ಗತ ಹೃದಯಂಗಮ ಮಾತಾಡು.
ಬಿರುಗಾಳಿ ಬೀಸಿ ಮರ ಮುರಿಯುವಂತಹ ಸುಳಿಹ ಸುಳಿಯದೆ, ತಂಗಾಳಿ ಪರಿಮಳ ದೊಡಗೂಡಿ ಸುಳಿವಂತೆ ಸುಳಿಯಬೇಕು. ಸುಳಿದಡೆ ನೆಟ್ಟನೆ ಜಂಗಮನಾಗಿ ಸುಳಿಯಬೇಕು; ನಿಂದರೆ ನೆಟ್ಟನೆ ಭಕ್ತನಾಗಿ ನಿಲಬೇಕು, ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ, ಉಭಯಭ್ರಷ್ಟರನೇನೆಂಬೆ ಗುಹೇಶ್ವರ?
ಶರಣ ಶಿವಾನಂದ ಕಲ್ಲೂರ