ಓಂ ಬುದ್ಧಿಪ್ರಿಯಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ಚತುರ್ದಶಿ ತಿಥಿ 14.54 ಕ್ಕೆ ಅಂತ್ಯ ಅಮಾವಾಸ್ಯೆ ಆರಂಭ.
29/05/2022 ರವಿವಾರ
- ಕೃತ್ತಿಕಾ ನಕ್ಷತ್ರ 31.11ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
- ಯೋಗ: ಅತಿಗಂಡ 22.52
- ಕರಣ: ಶಕುನಿ 14.54
- ಚತುಷ್ಪಾದ27.55
- ಸೂರ್ಯೋದಯ: 05.54
- ಸೂರ್ಯಾಸ್ತ: 18.41
- ರಾಹುಕಾಲ: 17.05-18.41
- ಯಮಘಂಡಕಾಲ: 12.17-13.53
- ಗುಳಿಕಕಾಲ: 15.29-17.05
- ಅಮೃತಘಳಿಗೆ: 07.31-10.42
- 21.55-23.30
- ಮಹೇಂದ್ರಘಳಿಗೆ:05.54-06.42
19.31-21.06
29.07-29.54
ಎಲ್ಲರಿಗೂ ಶುಭವಾಗಲಿ.
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ಬೇಟದ ಮರುಳಿಗೆ ಲಜ್ಜೆ ಮುನ್ನುಂಟೆ? ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ ದಂದುಗವೇಕೆ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ? ಗುಹೇಶ್ವರ ಲಿಂಗಕ್ಕೆ ಕುರುಹು ಮುನ್ನುಂಟೆ?
ಮೌನ ಮಾನವನ ನೈಸರ್ಗಿಕ ಸ್ವಭಾವಕ್ಕೆ ವಿರುದ್ಧವಾದದ್ದು. ಮೌನ ಬುದ್ಧಿವಂತನ ಉತ್ತರ. ಮೌನ ಎಲ್ಲವನ್ನೂ ಸುಧಾರಿಸುತ್ತದೆ. ಮೌನ ಸತ್ಯದ ತಾಯಿ. ಮೌನದಿಂದ ಜಗಳವೇ ಇಲ್ಲ.
ಶರಣ ಶಿವಾನಂದ ಕಲ್ಲೂರ