ಓಂ ಶಾಂತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ಅಮಾವಾಸ್ಯೆ 16.59 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.
30/05/2022 ಸೋಮವಾರ
- ಕೃತ್ತಿಕಾ ನಕ್ಷತ್ರ 07.11 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
- ಯೋಗ: ಸುಕರ್ಮ 23.37
- ಕರಣ: ನಾಗವ 16.59
- ಸೂರ್ಯೋದಯ: 05.54
- ಸೂರ್ಯಾಸ್ತ : 18.41
- ರಾಹುಕಾಲ: 07.29-09.05
- ಯಮಘಂಡಕಾಲ: 10.41-12.17
- ಗುಳಿಕಕಾಲ: 13.53-15.29
- ಅಮೃತಘಳಿಗೆ:05.54-07.28
12.18-13.06
15.31-17.06
18.43-21.06
23.31-26.42
ಎಲ್ಲರಿಗೂ ಶುಭವಾಗಲಿ.
ಎಸೆಯದಿರು, ಎಸೆಯದಿರು, ಕಾಮಾ; ನಿನ್ನ ಬಾಣ ಹುಸಿಯಲೇಕೋ?
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇದು ಸಾಲದೆ – ನಿನಗೆ? ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ? ಮರುಳು ಕಾಮ.
ಭಾಷೆಯು ಮನುಷ್ಯನ ನಿರ್ಮಾಣದಲ್ಲಿ ಅತ್ಯಂತ ಅಮೃತವಾದದ್ದು. ಭಾಷೆಯು ವಿಚಾರಗಳನ್ನು ಬಹಿರಂಗಗೊಳಿಸುವ ಶ್ರೇಷ್ಠಸಾಧನ. ಭಾಷೆಯು ಭಾವನೆಯ ಪ್ರತಿಬಿಂಬ. ಭಾಷಾಬಂಧನವೇ ಚಿರಕಾಲ ರಾಷ್ಟ್ರವನ್ನು ಒಂದು ಸೂತ್ರದಲ್ಲಿ ಕಟ್ಟುವುದು. ಭಾಷೆ ನಮ್ನ ಪಾಲಿಗೆ ಬಂದ ವರ.
ಶರಣ ಶಿವಾನಂದ ಕಲ್ಲೂರ