ಓಂ ಬ್ರಹ್ಮಚಾರಿಣೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಪ್ರಥಮ ತಿಥಿ 19.18 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.
31/05/2022 ಮಂಗಳವಾರ
- ರೋಹಿಣಿ ನಕ್ಷತ್ರ 10.00 ಕ್ಕೆ ಅಂತ್ಯ ಮೃಗಶಿರ ನಕ್ಷತ್ರ ಆರಂಭ.
- ಯೋಗ: ಧೃತಿ 24.32
- ಕರಣ: ಕಿಂಸ್ತುಘ್ನ 06.07
- ಭವ 19.18
- ಸೂರ್ಯೋದಯ: 05.54
- ಸೂರ್ಯಾಸ್ತ: 18.41
- ರಾಹುಕಾಲ: 15.29-17.05
- ಯಮಘಂಡಕಾಲ: 09.05-10.41
- ಗುಳಿಕಕಾಲ: 12.17-13.53
- ಅಮೃತಘಳಿಗೆ: 08.19-09.04
17.06-19.30
20.19-21.06
25.07-26.42
27.31-28.18
ಎಲ್ಲರಿಗೂ ಶುಭವಾಗಲಿ.
ಬುದ್ಧಿಯ ಕಣ್ಣು ಹೃದಯಕ್ಕಿದೆ. ಬುದ್ಧಿ ಜಗತ್ತಿನ ಅಮೂಲ್ಯ ವರದಾನ. ಬುದ್ಧಿವಂತನಾದ ಮನುಷ್ಯನು ಜೀವನದಲ್ಲಿ ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕೋ ಅಷ್ಟು ಮಹತ್ವ ಕೊಟ್ಟು ಆ ರೀತಿ ನಡೆದುಕೊಳ್ಳುತ್ತಾನೆ. ಬುದ್ಧಿವಂತರಾಗಲು ಬಯಸುವಿರಾ ಮೊದಲು ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ.
ಆಸೆಗೆ ಸತ್ತುದು ಕೋಟಿ. ಆಮಿಷಕ್ಕೆ ಸತ್ತುದು ಕೋಟಿ. ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರ, ನಿಮಗಾಗಿ ಸತ್ತವರಾನೂ ಕಾಣೆ.
ಶರಣ ಶಿವಾನಂದ ಕಲ್ಲೂರ