ಓಂ ಚತುರ್ಬಾಹವೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಷಷ್ಠಿ ತಿಥಿ 06.39 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
06/06/2022 ಸೋಮವಾರ
- ಮಘಾ ನಕ್ಷತ್ರ 26.25 ಕ್ಕೆ ಅಂತ್ಯ ಪೂರ್ವಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ಹರ್ಷಣ 28.51
- ಕರಣ: ತೈತುಲ 06.39
- ಗರಜ 19.21
- ಸೂರ್ಯೋದಯ: 05.54
- ಸೂರ್ಯಾಸ್ತ : 18.43
- ರಾಹುಕಾಲ: 07.30-09.06
- ಯಮಘಂಡಕಾಲ: 10.42-12.18
- ಗುಳಿಕಕಾಲ: 13.55-15.31
- ಅಮೃತಘಳಿಗೆ: 09.07-10.41
22.43-25.54
28.19-29.54 - ಮಹೇಂದ್ರಘಳಿಗೆ: 15.32-17.54
ಎಲ್ಲರಿಗೂ ಶುಭವಾಗಲಿ.
ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದನಯ್ಯ ಭ್ರಾಂತಿನ ಬೇರೊಡೆದು, ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯ, ಬ್ರಹ್ಮಬೀಜವ. ಅಖಂಡ ಮಂಡಲವೆಂಬ ಭಾವಿ, ಪವನವೆ ರಾಟಾಳ, ಸುಷುಮ್ನ ನಾಳದಿಂದವೆ ಉದಕವ ತಿದ್ದಿ, ಬಸವಗಳೈವರು ಹಸಗೆಡಿಸಿಹರೆಂದು, ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ, ಆವಾಗಳೂ ಈ ತೋಟದೊಳಗೆ ಜಾಗರವಿದ್ದು, ಈ ಸಸಿಯ ಸಲಹಿದೆ ಕಾಣಾ, ಗುಹೇಶ್ವರ.
ಜ್ಞಾನವೇ ಜೀವನದ ಸುಖವನ್ನು ಹೆಚ್ಚಿಸುವ ಬೆಳಕು. ಜ್ಞಾನವನು ಯಾರಿಂದಲೂ ಅಪಹರಿಸಲಾಗದು, ಮುಗಿಯದ ಗುಣಗಳಿಂದಾಗಿ ಹೆಚ್ಚು ಬಾಳುವುದು. ಜ್ಞಾನ ಬೆಳಕಾದರೆ ಅಜ್ಞಾನ ಕತ್ತಲು. ಅಜ್ಞಾನ – ಅಶಿಸ್ತು ಮನುಷ್ಯನ ಏಳಿಗೆಗೆ ತಡೆ ಮಾಡುತ್ತವೆ. ಜ್ಞಾನೋದಯ ಮನುಷ್ಯನಿಗೆ ಭ್ರಮೆ ಹರಿದಂತೆಲ್ಲ ಆಗುತ್ತದೆ.
ಶರಣ ಶಿವಾನಂದ ಕಲ್ಲೂರ