ಓಂ ಶಕ್ತಿಸಂಯುತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಸಪ್ತಮಿ ತಿಥಿ 07.54 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.
07/06/2022 ಮಂಗಳವಾರ
- ಪೂರ್ವಫಾಲ್ಗುಣಿ ನಕ್ಷತ್ರ 27.48 ಕ್ಕೆ ಅಂತ್ಯ ಉತ್ತರಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ವಜ್ರ 28.25
- ಕರಣ: ವಾಣಿಜ 07.54
- ಭದ್ರ 20.17
- ಸೂರ್ಯೋದಯ: 05.54
- ಸೂರ್ಯಾಸ್ತ: 18.43
- ರಾಹುಕಾಲ: 15.31-17.07
- ಯಮಘಂಡಕಾಲ: 09.06-10.42
- ಗುಳಿಕಕಾಲ: 12.19-13.55
- ಅಮೃತಘಳಿಗೆ: 05.54-07.30
17.08-17.54
21.07-23.30
25.07-25.54
28.19-29.54 - ಮಹೇಂದ್ರಘಳಿಗೆ: 14.43-15.30
ಎಲ್ಲರಿಗೂ ಶುಭವಾಗಲಿ.
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆ ಮನೆದಪ್ಪದೆ ತಿರುಗುವ ತುಡುಗುಣಿಯಂತೆ ಕಾಡಲಾಗದು ಭಕ್ತನ, ಬೇಡಲಾಗದು ಭವಿಯ, ಕಾಡಿ ಬೇಡಿ,ಒಡಲ ಹೊರೆದಡೆ, ಬೇಂಟೆಯ ಶ್ವಾನ ಮೊಲಕ್ಕೆ ಬಾಯ್ದೆಗೆದಂತೆ ಗುಹೇಶ್ವರ.
ಹೃದಯ ವೈಶಾಲ್ಯವೇ ಉನ್ನತಿಯ ಮಾರ್ಗ. ಹೃದಯದಿಂದ ಬರುವ ಮಾತಿನಲ್ಲಿ ಅರ್ಥವಿದ್ದೇ ಇರುತ್ತದೆ. ಹೃದಯಕ್ಕಿರುವ ನೆನಪೇ ಕೃತಜ್ಞತೆ ಎಂಬುದು. ಹೃದಯಸ್ಥನೇ ತನ್ನ ಅಂತರಾತ್ಮವನು ತಿಳಿಯಬಲ್ಲನು. ಹೃದಯ ಹಗುರಾದಷ್ಟು ಆಯಸ್ಸು ಹೆಚ್ಚು.
ಶರಣ ಶಿವಾನಂದ ಕಲ್ಲೂರ