ಓಂ ಲಂಬೋದರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ನವಮಿ ತಿಥಿ 08.21 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.
09/06/2022 ಗುರುವಾರ
- ಹಸ್ತ ನಕ್ಷತ್ರ 28.25 ಕ್ಕೆ ಅಂತ್ಯ ಚಿತ್ತ ನಕ್ಷತ್ರ ಆರಂಭ.
- ಯೋಗ: ವ್ಯತಾಪತಾ25.48
- ಕರಣ: ಕೌಳವ 08.21
- ತೈತುಲ 19.59
- ಸೂರ್ಯೋದಯ: 05.54
- ಸೂರ್ಯಾಸ್ತ: 18.44
- ರಾಹುಕಾಲ: 13.55-15.31
- ಯಮಘಂಡಕಾಲ: 05.54-07.30
- ಗುಳಿಕಕಾಲ: 09.06-10.43
- ಅಮೃತಘಳಿಗೆ: 10.44-13.06
15.32-17.54
19.31-21.06
25.07-27.30
ಎಲ್ಲರಿಗೂ ಶುಭವಾಗಲಿ.
ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ, ತುಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲ, ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಲಿಲ್ಲ, ನಿಚ್ಚಕ್ಕೆ ನಿಚ್ಚ ನೆನೆವ ಮನವ, ಅಂದಂದಿಗೆ ಅತ್ತಲಿತ್ತ ಹರಿವ ಮನವ, ಚಿತ್ತದಲ್ಲಿ ನಿಲ್ಲಿಸಬಲ್ಲಡೆ, ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು.
ನೋವನ್ನು ತಪ್ಪಿಸುವುದೇ ಜೀವನದ ಕಲೆ. ತುಂಬ ಜಾಗರೂಕ ಜನ ಜೀವನದಲ್ಲಿ ಕಡಿಮೆ ಸಾಧಿಸುತ್ತಾರೆ. ಸರ್ವ ತ್ಯಾಗಿಯಾದವನಿಗೆ ಈ ಸೃಷ್ಟಿಯಲ್ಲಿ ಎಲ್ಲಿ ಸಂಚರಿಸಿದರೂ ಆಸೆ ಅಂಜಿಕೆಗಳ ಕಾಟವಿಲ್ಲ. ವಿಚಾರದಲ್ಲಿ ಉದಾರತನ, ಕೃತಿಯಲ್ಲಿ ಮಾನವೀಯತೆ, ವಿಜಯದಲ್ಲಿ ಸಂಯಮ ಉಳ್ಳವನೇ ದೊಡ್ಡವನು.
ಶರಣ ಶಿವಾನಂದ ಕಲ್ಲೂರ