ಓಂ ಬ್ರಹ್ಮವಿತ್ತಮಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ತ್ರಯೋದಶಿ ತಿಥಿ 24.26 ಕ್ಕೆ ಅಂತ್ಯ
- ಚತುರ್ದಶಿ ತಿಥಿ ಆರಂಭ.
12/06/2022 ರವಿವಾರ
- ವಿಶಾಖ ನಕ್ಷತ್ರ 23.57 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
- ಯೋಗ:ಶಿವ 17.25
- ಕರಣ: ಕೌಳವ 13.58
- ತೈತುಲ 24.26
- ಸೂರ್ಯೋದಯ: 05.54
- ಸೂರ್ಯಾಸ್ತ : 18.45
- ರಾಹುಕಾಲ:17.08-18.45
- ಯಮಘಂಡಕಾಲ: 12.20-13.56
- ಗುಳಿಕಕಾಲ: 15.32-17.08
- ಅಮೃತಘಳಿಗೆ: 07.31-10.42
17.55-19.30
22.43-25.06
ಎಲ್ಲರಿಗೂ ಶುಭವಾಗಲಿ.
ಭಸ್ಮವ ಪೂಸಿ, ಬತ್ತಲೆ ಇದ್ದಡೇನು? ಬ್ರಹ್ಮಚಾರಿಯೇ? ಆಶನವನುಂಡು, ವ್ಯಸನವ ಮರೆದಡೇನು? ಬ್ರಹ್ಮಚಾರಿಯೆ? ಭಾವ ಬತ್ತಲೆಯಿದ್ದು, ಮನ ದಿಗಂಬರವಾದಡೆ, ಅದು ಸಹಜ ನಿರ್ವಾಣ ಕಾಣಾ, ಗುಹೇಶ್ವರ.
ತನ್ನ ಕಾಲ ಮೇಲೆ ನಿಂತುಕೊಳ್ಳಲು ಯಾರಿಗೆ ಶಕ್ತಿಯಿದೆಯೋ ಅವನೇ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ. ಆದಾಯಕ್ಕಿಂತ ವೆಚ್ಚವನ್ನು ಕಡಿಮೆ ಮಾಡುವುದು, ಮಾತಿಗಿಂತ ಕೃತಿಯನ್ನು ಹೆಚ್ಚಿಸುವುದು ಶಾಂತಿ ಸಾಧನೆಯ ಪ್ರಥಮ ಸೋಪಾನ. ಕೆಲವರು ಘನವಂತರಾಗಿಯೇ ಹುಟ್ಟುತ್ತಾರೆ, ಮತ್ತೆ ಕೆಲವರು ಕಷ್ಟಪಟ್ಟು ಘನವಂತರಾಗುತ್ತಾರೆ
ಶರಣ ಶಿವಾನಂದ ಕಲ್ಲೂರ