ಓಂ ಕಾಲಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಚತುರ್ದಶಿ ತಿಥಿ 21.02 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.
13/06/2022 ಸೋಮವಾರ
- ಅನುರಾಧ ನಕ್ಷತ್ರ 21.23 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
- ಯೋಗ: ಸಿದ್ಧಿ 13.41
- ಕರಣ: ಗರಜ 10.47
- ವಾಣಿಜ 21.02
- ಸೂರ್ಯೋದಯ: 05.54
- ಸೂರ್ಯಾಸ್ತ: 18.45
- ರಾಹುಕಾಲ: 07.31-09.07
- ಯಮಘಂಡಕಾಲ: 10.43-12.20
- ಗುಳಿಕಕಾಲ: 13.56-15.32
- ಅಮೃತಘಳಿಗೆ: 09.08-10.42
22.43-25.54
28.19-29.54 - ಮಹೇಂದ್ರಘಳಿಗೆ: 15.33-17.54
ಎಲ್ಲರಿಗೂ ಶುಭವಾಗಲಿ.
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ ತನ್ನ ತಾಮರೆದಡೆ ನುಡಿಯೆಲ್ಲ ಮಾಯೆ ನೋಡಾ ಅರಿದು ಮರೆದ ಶಿವಯೋಗಿಯ ಶಬುದವೆಲ್ಲ ಉಪದೇಶವಲ್ಲದೆ ಭಿನ್ನವುಂಟೆ? ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ಕಂದುಕಲೆಯೆಂಬುದಿಲ್ಲ ನೋಡಾ! ನಮ್ಮ ಗುಹೇಶ್ವರ ಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ, ಬಾಯ್ದೆಗೆದನಲ್ಲದೆ, ಭಿನ್ನ ಉಂಟೆ ಹೇಳಾ ಮರುಳೆ!
ಚಟಗಳು ಬಹುಬೇಗ ಅಂಟಿಕೊಳ್ಳುತ್ತವೆ, ಅವುಗಳನ್ನು ತ್ಯಜಿಸುವಾಗ ಮಾತ್ರ ಮೈಚರ್ಮ ಸುಲಿದಂತಾಗುತ್ತದೆ. ನಮ್ಮ ಹಿತಚಿಂತಕರು ಬಹು ಮಂದಿ ಇರಬೇಕು. ಆದರೆ ಸ್ನೇಹಿತರು ಕೆಲವೇ ಮಂದಿ ಸಾಕು. ಒಂದು ತಾಸು ಓದಿದರೆ, ಎರಡು ತಾಸು ದುಡಿಯಿರಿ, ಮೂರು ತಾಸು ವಿಚಾರ ಮಾಡಿ
ಶರಣ ಶಿವಾನಂದ ಕಲ್ಲೂರ