ಓಂ ಕಾಮಿನೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ಪ್ರಥಮ ತಿಥಿ 13.31 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.
15/06/2022 ಬುಧವಾರ
- ಮೂಲ ನಕ್ಷತ್ರ 15.32 ಕ್ಕೆ ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
- ಯೋಗ: ಶುಕ್ಲ 25.13
- ಕರಣ: ಕೌಳವ 13.31
- ತೈತುಲ 23.37
- ಸೂರ್ಯೋದಯ: 05.55
- ಸೂರ್ಯಾಸ್ತ: 18.46
- ರಾಹುಕಾಲ: 12.20-13.56
- ಯಮಘಂಡಕಾಲ: 07.31-09.07
- ಗುಳಿಕಕಾಲ: 10.44-12.20
- ಅಮೃತಘಳಿಗೆ: 09.08-10.43
13.57-17.07
17.56-21.55
24.20-25.55
ಎಲ್ಲರಿಗೂ ಶುಭವಾಗಲಿ.
ಕಳವಳದ ಮನವು ತಲೆಕೆಳಗಾದುದವ್ವ! ಸುಳಿದು ಬೀಸುವ ಗಾಳಿ ಉರಿಯಾಯಿತವ್ವ!ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ! ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ! ತಿಳುಹೌ ಬುದ್ಧಿಯ! ಹೇಳಿ ಕರೆತಾರೆಲೆಗವ್ವ!! ಚೆನ್ನಮಲ್ಲಿಕಾರ್ಜುನಂಗೆ ಎರಡರ ಮನಿಸವ್ವ!
ಕರ್ತವ್ಯ ಮಾಡದಿರುವುದರಿಂದಲೇ ಮನುಷ್ಯ ಮಾನಸಿಕ ರೋಗಕ್ಕೆ ತುತ್ತಾಗುತ್ತಾನೆ. ಬೇಟೆ, ಜೂಜು, ಕುಡಿತ ಹಾಗೂ ರತಿಗಳೆಂಬ ನಾಲ್ಕು ಚಟಗಳಿಂದ ಮನುಷ್ಯ ಸಂಪತ್ತು ಕಳೆದುಕೊಳ್ಳುತ್ತಾನೆ.
ಸಂಪತ್ತನ್ನು ಸಂಪಾದಿಸದೆ ಅದನ್ನು ಅನುಭವಿಸುವ ಹಕ್ಕು ಯಾರಿಗೂ ಇಲ್ಲ.
ಶರಣ ಶಿವಾನಂದ ಕಲ್ಲೂರ