ಓಂ ಚಂಡಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ಪಂಚಮಿ ತಿಥಿ 24.19 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.
18/06/2022 ಶನಿವಾರ
- ಶ್ರವಣ ನಕ್ಷತ್ರ 07.38 ಕ್ಕೆ ಅಂತ್ಯ ಧನಿಷ್ಠ ನಕ್ಷತ್ರ 29.55 ಕ್ಕೆ ಅಂತ್ಯ ಶತಭಿಷ ನಕ್ಷತ್ರ ಆರಂಭ.
- ಯೋಗ: ವೈಧೃತಿ 13.49
- ಕರಣ: ಕೌಳವ 13.34
- ತೈತುಲ 24.19
- ಸೂರ್ಯೋದಯ: 05.55
- ಸೂರ್ಯಾಸ್ತ: 18.46
- ರಾಹುಕಾಲ: 09.08-10.44
- ಯಮಘಂಡಕಾಲ: 13.57-15.34
- ಗುಳಿಕಕಾಲ: 05.55-07.32
- ಅಮೃತಘಳಿಗೆ: 10.45-12.19
- 13.08-13.55
19.32-21.07
23.32-25.07
28.20-29.07
ಎಲ್ಲರಿಗೂ ಶುಭವಾಗಲಿ.
ಕೋಲ ತುದಿಯ ಕೋಡಗನಂತೆ, ನೇಣ ತುದಿಯ ಬೊಂಬೆಯೆಂತಂತೆ, ಆಡಿದೆನಯ್ಯ ನೀನಾಡಿಸಿದಂತೆ! ನಾನಾಡಿದೆನಯ್ಯ ನೀನುಡಿಸಿದಂತೆ! ನಾನಿದ್ದೆನಯ್ಯ ನೀನಿರಿಸಿದಂತೆ ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ!
ಜಗತ್ತಿನಲ್ಲಿ ಆದ ಎಲ್ಲ ಅನಾಹುತಗಳು ವ್ಯಾಮೋಹದಿಂದಲೇ. ಸಮಾಧಾನವಿಲ್ಲದ ಜೀವನದಲ್ಲಿ ಯಶಸ್ಸಿಲ್ಲ. ಸಂಚಾರವು ಜ್ಞಾನಾರ್ಜನೆಯ ಶ್ರೇಷ್ಠ ಸಾಧನ. ಪರಿಸ್ಥಿತಿಗಳು ಚೆನ್ನಾಗಿದ್ದರೆ ಬುದ್ಧಿಯೂ ಚೆನ್ನಾಗಿರುತ್ತದೆ. ಮರಣದ ನಂತರವೇ ನಿಮ್ಮ ನಿಜವಾದ ಶ್ರೇಷ್ಠತೆ ಗೊತ್ತಾಗುವುದು.
ಶರಣ ಶಿವಾನಂದ ಕಲ್ಲೂರ