ಓಂ ನಿರಂಜನಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ಸಪ್ತಮಿ ತಿಥಿ 21.01 ಕ್ಕೆ ಅಂತ್ಯ ಅಷ್ಠಮಿ ತಿಥಿ ಆರಂಭ.
- *20/06/2022 ಸೋಮವಾರ*
- ಪೂರ್ವಾಭಾದ್ರಪದ ನಕ್ಷತ್ರ 28.34 ಕ್ಕೆ ಅಂತ್ಯ ಉತ್ತರಾಭಾದ್ರಪದ ನಕ್ಷತ್ರ ಆರಂಭ.
- ಯೋಗ: ಪ್ರೀತಿ 08.26
- ಕರಣ: ಭದ್ರ 09.34
- ಭವ 21.01
- ಸೂರ್ಯೋದಯ: 05.56
- ಸೂರ್ಯಾಸ್ತ: 18.47
- ರಾಹುಕಾಲ: 07.32-09.08
- ಯಮಘಂಡಕಾಲ: 10.45-12.21
- ಗುಳಿಕಕಾಲ: 13.58-15.34
- ಅಮೃತಘಳಿಗೆ: 09.09-10.44
22.45-25.56
28.21-29.56 - ಮಹೇಂದ್ರಘಳಿಗೆ: 15.35-17.56
ಎಲ್ಲರಿಗೂ ಶುಭವಾಗಲಿ.
ತರಣಿಯ ಹುಳು ತನ್ನ ಸ್ನೇಹದಿಂದ ಮನೆಯಮಾಡಿ ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರೆನಂತೆ! ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ! ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನ.
ಅನುಭವ ಕಾಲಕಳೆದಂತೆ ಪಡೆಯುವ ಕ್ರಿಯೆಯ ಕೂಸು; ಬರಿ ಪುಸ್ತಕಗಳಿಂದ ನಾವು ಏನನ್ನೂ ಕಲಿಯಲಾರೆವು. ಅನುಭವವೊಂದು ಅಮೂಲ್ಯ ವಜ್ರ ಅದರಿಂದ ಸಾಕಷ್ಟು ಕಲಿಯಬಹುದು. ಅನುಭವವಿರುವಲ್ಲಿ ಅಮೃತವಿದೆ. ಅರಿತು ಆ ಅನುಭವವ ಸೂಕ್ತ ಅಳವಡಿಕೆ ಮಾಡೋದು ಅನುಭವಿಯ ಲಕ್ಷಣ.
ಶರಣ ಶಿವಾನಂದ ಕಲ್ಲೂರ