ಓಂ ಅಕಲ್ಮಶಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ಅಷ್ಠಮಿ ತಿಥಿ 20.30 ಕ್ಕೆ ಅಂತ್ಯ ನವಮಿ ತಿಥಿ ಆರಂಭ.
- 21/06/2022 ಮಂಗಳವಾರ*
- ಉತ್ತರಾಭಾದ್ರ ನಕ್ಷತ್ರ 29.02 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
- ಯೋಗ: ಆಯುಷ್ಮಾನ್06.39
- ಸೌಭಾಗ್ಯ 29.29
- ಕರಣ: ಬಾಳವ 08.40
- ಕೌಳವ 20.30
- ಸೂರ್ಯೋದಯ: 05.56
- ಸೂರ್ಯಾಸ್ತ : 18.47
- ರಾಹುಕಾಲ: 15.34-17.11
- ಯಮಘಂಡಕಾಲ: 09.09-10.45
- ಗುಳಿಕಕಾಲ: 12.21-13.58
- ಅಮೃತಘಳಿಗೆ: 05.56-07.32
17.12-17.56
21.09-23.32
25.09-25.56
28.21-29.56 - ಮಹೇಂದ್ರಘಳಿಗೆ: 14.45-15.32
ಎಲ್ಲರಿಗೂ ಶುಭವಾಗಲಿ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು! ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು! ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು! ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು! ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು! ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು! ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು! ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು! ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ!
ಆರೋಗ್ಯವೇ ಜಯ; ಅನಾರೋಗ್ಯವೇ ಸೋಲು. ಆರೋಗ್ಯಕ್ಕೆ ಆಹಾರವೇ ಕಾರಣ, ಶರೀರ ಚಟುವಟಿಕೆಯೂ ಹೌದು. ಉತ್ತಮ ಆಹಾರವನು ಬೆಳಗಿನ ತಿಂಡಿಯಲ್ಲಿ ಚಕ್ರವರ್ತಿಯಂತೆ ತಿನ್ನು, ಮಧ್ಯಾನ್ಹದ ಊಟವನ್ನು ರಾಜನಂತೆ ಮಾಡು, ರಾತ್ರಿಊಟ ಬಡವನಂತೆ ಇರಲಿ. ಚಟುವಟಿಕೆ ಅನುದಿನ ಇರಲಿ.
ಶರಣ ಶಿವಾನಂದ ಕಲ್ಲೂರ