ಓಂ ಶಾಶ್ವತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ಚತುರ್ದಶಿ ತಿಥಿ 29.51 ಕ್ಕೆ ಅಂತ್ಯ ಅಮಾವಾಸ್ಯೆ ಆರಂಭ.
27/06/2022 ಸೋಮವಾರ
- ರೋಹಿಣಿ ನಕ್ಷತ್ರ 16.01 ಕ್ಕೆ ಅಂತ್ಯ ಮೃಗಶಿರ ನಕ್ಷತ್ರ ಆರಂಭ.
- ಯೋಗ: ಶೂಲ 06.45
- ಕರಣ: ಭದ್ರ 16.38
- ಶಕುನಿ 29.51
- ಸೂರ್ಯೋದಯ: 05.57
- ಸೂರ್ಯಾಸ್ತ: 18.48
- ರಾಹುಕಾಲ: 07.34-09.10
- ಯಮಘಂಡಕಾಲ: 10.46-12.23
- ಗುಳಿಕಕಾಲ: 13.59-15.35
- ಅಮೃತಘಳಿಗೆ: 09.11-10.45
22.46-25.57
28.22-29.57
ಎಲ್ಲರಿಗೂ ಶುಭವಾಗಲಿ.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ, ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ, ಶಿವನ ನೆನೆಯಿರೋ! ಶಿವನ ನೆನೆಯಿರೇ! ಈ ಜನ್ಮ ಬಳಿಕಿಲ್ಲ! ಚೆನ್ನಮಲ್ಲಿಕಾರ್ಜುನ ದೇವರ ದೇವ, ಪಂಚಮಹಾಪಾತಕರೆಲ್ಲ ಮುಕ್ತಿಪಡೆದರು!
ಕಾಯಕವೇ ಕೈಲಾಸ. ಯಶಸ್ಸಿಗೆ ಕಷ್ಟದ ದುಡಿಮೆಯ ಹೊರತು ಬೇರೆ ಯಾವುದೇ ಸಮೀಪದ ಅಡ್ಡ ಹಾದಿಗಳಿಲ್ಲ. ಪ್ರಾಮಾಣಿಕವಾದ ಕೆಲಸ ಮಾಡುವವನ ಮುಖದಲ್ಲಿ ಪ್ರಸನ್ನತೆ ಇರುತ್ತದೆ. ಕೆಲಸವನ್ನು ಪ್ರೀತಿಸುವವನು ಜೀವನದ ಬಗ್ಗೆ ಎಂದೂ ನಿರಾಶೆ ಪಟ್ಟುಕೊಳ್ಳುವುದಿಲ್ಲ.
ಶರಣ ಶಿವಾನಂದ ಕಲ್ಲೂರ