ಓಂ ಶ್ರೀಹೇತವೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಶುಕ್ಲ ಪಕ್ಷ
- ಷಷ್ಠಿ ತಿಥಿ 19.28 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
05/07/2022 ಮಂಗಳವಾರ
- ಪೂರ್ವ ಫಾಲ್ಗುಣಿ ನಕ್ಷತ್ರ 10.29 ಕ್ಕೆ ಅಂತ್ಯ ಉತ್ತರ ಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ವೃತಾಪತಾ 12.14
- ಕರಣ: ಕೌಳವ 07.04
- ತೈತುಲ 19.28
- ಸೂರ್ಯೋದಯ: 05.59
- ಸೂರ್ಯಾಸ್ತ: 18.49
- ರಾಹುಕಾಲ: 15.37-17.13
- ಯಮಘಂಡಕಾಲ: 09.12-10.48
- ಗುಳಿಕಕಾಲ: 12.24-14.00
- ಅಮೃತಘಳಿಗೆ: 05.59-07.35
17.14-17.59
21.12-23.35
25.12-25.59
28.24-29.59 - ಮಹೇಂದ್ರಘಳಿಗೆ: 14.48-15.35
ಎಲ್ಲರಿಗೂ ಶುಭವಾಗಲಿ
ಅರ್ಥದ ಮದ, ಅಹಂಕಾರದ ಮದ, ಕುಲಮದ ಬಿಡದೆ, ಸಮಯಾಚಾರ ಸಮಯಭಕ್ತಿ ಇನ್ನಾರಿಗೆಯೂ ಅಳವಡದು ನೋಡಾ, ಮಾತಿನ ಮಿಂಚಿನ ಢಾಳಕರಿಗೆ ಸಮಯ ಭಕ್ತಿ ಇನ್ನೆಲ್ಲಿಯದೊ
ಕೂಡಲಚೆನ್ನಸಂಗಯ್ಯಾ?
ಜೀವನ ಒಂದು ಸವಾಲು; ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅದು ನಮ್ಮನ್ನು ಓಡಿಸಿಕೊಂಡು ಹೋಗುವುದು, ಜೀವನ ಒಂದು ರಂಗೋಲಿ, ಅದರಲ್ಲಿ ಒಂದು ಚುಕ್ಕೆ ತಪ್ಪಿದರೂ ಅದರ ಅಂದ ಕೆಡುತ್ತದೆ. ಜೀವನವು ಸುಂದರವೂ, ಯಶಸ್ವಿಯೂ ಆಗಬೇಕಾದರೆ ಪ್ರೇಮ, ಜ್ಞಾನ ಮತ್ತು ಬಲ – ಇವು ಮೂರು ಗುಣಗಳು ಅವಶ್ಯಕ.
ಶರಣ ಶಿವಾನಂದ ಕಲ್ಲೂರ