ಓಂ ಕುಲಾದ್ರಿಭೃತೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಶುಕ್ಲ ಪಕ್ಷ
- ಅಷ್ಟಮಿ ತಿಥಿ 19.28 ಕ್ಕೆ ಅಂತ್ಯ ನವಮಿ ತಿಥಿ ಆರಂಭ.
- *07/07/2022 ಗುರುವಾರ*
- ಹಸ್ತ ನಕ್ಷತ್ರ 12.19ಕ್ಕೆ ಅಂತ್ಯ ಚಿತ್ತ ನಕ್ಷತ್ರ ಆರಂಭ.
- ಯೋಗ: ಪರಿಘ 10.37
- ಕರಣ: ಭದ್ರ 07.43
- ಭವ 19.28
- ಸೂರ್ಯೋದಯ: 06.00
- ಸೂರ್ಯಾಸ್ತ: 18.49
- ರಾಹುಕಾಲ: 14.01-15.37
- ಯಮಘಂಡಕಾಲ: 05.59-07.36
- ಗುಳಿಕಕಾಲ: 09.12-10.48
- ಅಮೃತಘಳಿಗೆ: 10.49-13.12
15.38-18.00
19.37-21.12
25.13-27.36
ಎಲ್ಲರಿಗೂ ಶುಭವಾಗಲಿ.
ಮರ್ಮವರಿದು ಮಾಡುವಂಗೆ ಕರ್ಮವಿಲ್ಲ, ಹೆಮ್ಮೆಯಲ್ಲಿ ಮಾಡಿದವನ ವಿಧಿಯ ನೋಡಾ, ಸಜ್ಜನ ಸದಾಚಾರವರಿದು ಮಾಡುವನು, ಕೂಡಲಚೆನ್ನಸಂಗಯ್ಯನಲ್ಲಿ ನಮ್ಮ ಬಸವಣ್ಣನು.
ತಾಯಿ ನೂರು ಜನ ಗುರುಗಳಿಗಿಂತಲೂ ಶ್ರೇಷ್ಠಳು. ತಾಯಿ ಪ್ರೇಮಕ್ಕೆ ವೃದ್ಧಾಪ್ಯ ಎಂದಿಗೂ ಬಾರದು. ತಾಯಿಯ ಪ್ರೇಮಕ್ಕೆ ವಸಂತ ಋತುವಿನ ಮೆರಗು ಇರುತ್ತದೆ. ತಾಯಿಯ ಅನವರತ ಶಿಕ್ಷಣ ಶುಶ್ರೂಶೆಯಂತೆ ಮಗುವಿನ ಭವಿಷ್ಯ ಅವಲಂಬಿಸಿದೆ.
ಶರಣ ಶಿವಾನಂದ ಕಲ್ಲೂರ