ಓಂ ಚಂದ್ರಚೂಡಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಶುಕ್ಲ ಪಕ್ಷ
- ದಶಮಿ ತಿಥಿ 16.39 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.
- 09/07/2022 ಶನಿವಾರ
- ಸ್ವಾತಿ ನಕ್ಷತ್ರ 11.24 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
- ಯೋಗ: ಸಿದ್ಧಿ 06.47
- ಸಾಧ್ಯ 28.01
- ಕರಣ: ಗರಜ 16.39
- ವಾಣಿಜ 27.31
- ಸೂರ್ಯೋದಯ: 06.01
- ಸೂರ್ಯಾಸ್ತ: 18.49
- ರಾಹುಕಾಲ: 09.13-10.49
- ಯಮಘಂಡಕಾಲ: 14.01-15.37
- ಗುಳಿಕಕಾಲ: 06.01-07.37
- ಅಮೃತಘಳಿಗೆ: 10.50-12.25
13.14-14.00
19.38-21.13
23.38-25.13
28.26-29.13
ಎಲ್ಲರಿಗೂ ಶುಭವಾಗಲಿ.
ದೇವನೊಬ್ಬ ನಾಮ ಹಲವು. ದೇವರು ಜ್ಞಾನ – ಆನಂದಗಳ ಸ್ವರೂಪ. ದೇವರಿಗೆ ಹತ್ತಿರವಾಗ ಬಯಸಿದಲ್ಲಿ ಮೊದಲು ಮಾನವರಿಗೆ ಹತ್ತಿರವಾಗು. ಎಲ್ಲಾ ಪೂಜೆ ಪುನಸ್ಕಾರಗಳ ಸಾರಾಂಶವಿಷ್ಟೆ; ಪವಿತ್ರವಾಗಿರುವುದು, ಇತರರಿಗೆ ಒಳಿತು ಮಾಡುವುದು. ಮನುಷ್ಯರು ದೇವರಿಗಾಗಿ ಎಲ್ಲೂ ಅಲೆಯಬೇಕಿಲ್ಲ, ಮಾಡುವ ತಪ್ಪ ಎಚ್ಚರಿಸುವ ಅಂತರಾತ್ಮವೇ ದೈವವು.
ಭವಿಪಾಕವನುಂಡರೆ ಪ್ರಥಮ ಪಾತಕ. ಪರಧನ ಪರಸತಿಗಳುಪಿದರಡನೆಯ ಪಾತಕ. ಜಂಗಮನಿಂದನೆಯ ಮಾಡಿದರೆ ಮೂರನೆಯ ಪಾತಕ. ಗುರುವಾಜ್ಞೆಯ ಮೀರಿದರೆ ನಾಲ್ಕನೆಯ ಪಾತಕ. ಶಿವನಿಂದೆಯ ಮಾಡಿದಡೈದನೆಯ ಪಾತಕ. ಪಂಚಮಹಾಪಾತಕ ಭಕ್ತಂಗಲ್ಲದೆ ಭವಿಗೆಲ್ಲಿಯದು ಕೂಡಲಚೆನ್ನಸಂಗಮದೇವಾ?
ಶರಣ ಶಿವಾನಂದ ಕಲ್ಲೂರ