ಓಂ ಶ್ರೀಕಂಠಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಶುಕ್ಲ ಪಕ್ಷ
- ತ್ರಯೋದಶಿ ತಿಥಿ 07.46 ಕ್ಕೆ ಅಂತ್ಯ ಚತುರ್ದಶಿ ತಿಥಿ 28.00 ಕ್ಕೆ ಅಂತ್ಯ ಹುಣ್ಣಿಮೆ ಆರಂಭ
12/07/2022 ಮಂಗಳವಾರ
- ಮೂಲ ನಕ್ಷತ್ರ 26.20 ಕ್ಕೆ ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
- ಯೋಗ:ಬ್ರಹ್ಮ 16.57
- ಕರಣ :ತೈತುಲ 07.46
- ಗರಜ 17.55
- ವಾಣಿಜ 28.00
- ಸೂರ್ಯೋದಯ: 06.01
- ಸೂರ್ಯಾಸ್ತ : 18.49
- ರಾಹುಕಾಲ:15.37-17.13
- ಯಮಘಂಡಕಾಲ:09.13-10.49
- ಗುಳಿಕಕಾಲ: 12.25-14.01
- ಅಮೃತಘಳಿಗೆ: 06.01-07.37
17.14-18.01
21.14-23.37
25.14-26.01
29.26.30.01 - ಮಹೇಂದ್ರಘಳಿಗೆ: 14.50-15.36
ಎಲ್ಲರಿಗೂ ಶುಭವಾಗಲಿ.
ಹೊರಗಣ ಭವಿಯ ಕಳೆವೆಂಬರು, ಒಳಗಣ ಭವಿಯ ಕಳೆಯಲರಿಯರು, ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ, ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ, ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ, ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ, ಮಣ್ಣೆಂಬುದೊಂದು ಭವಿ, ಇಂತೀ ಭವಿಯ ಕಲೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.
ದೇವರು ಕೊಟ್ಟ ಅತ್ಯಂತ ಸವಿಯಾದ ವರ ಎಂದರೆ ನಗು. ನೀನು ನಿನ್ನ ದೇಹದ ಮೇಲೆ ಧರಿಸಿರುವ ಆಭರಣಗಳಿಗಿಂತಲೂ ಹೆಚ್ಚಿನದು ಮುಖದಲ್ಲಿ ಧರಿಸಿರುವ ಮಂದಹಾಸ. ನಗುವಿನ ಜೀವಿ ಮನುಷ್ಯ ಮಾತ್ರ. ನಗದ ದಿನವೇ ನಷ್ಟವಾದ ದಿನ. ನಗುವುದು ಸಹಜದ ಧರ್ಮ, ನಗಿಸುವುದು ಪರಧರ್ಮ.
ಶರಣ ಶಿವಾನಂದ ಕಲ್ಲೂರ