ಓಂ ಗಣಪಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಕೃಷ್ಣ ಪಕ್ಷ
- ನವಮಿ ತಿಥಿ 09.32 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.
22/07/2022 ಶುಕ್ರವಾರ
- ಭರಣಿ ನಕ್ಷತ್ರ 16.24 ಕ್ಕೆ ಕೃತ್ತಿಕಾ ನಕ್ಷತ್ರ ಆರಂಭ.
- ಯೋಗ: ಶೂಲ 12.29
- ಕರಣ: ಗರಜ 09.32
- ವಾಣಿಜ 22.26
- ಸೂರ್ಯೋದಯ: 06.04
- ಸೂರ್ಯಾಸ್ತ : 18.48
- ರಾಹುಕಾಲ: 10.51-12.26
- ಯಮಘಂಡಕಾಲ: 15.37-17.13
- ಗುಳಿಕಕಾಲ: 07.40-09.15
- ಅಮೃತಘಳಿಗೆ: 09.16-10.50
12.27-13.16
16.29-17.46
18.05-19.40
20.29-22.52
25.17-28.28 - ಮಹೇಂದ್ರಘಳಿಗೆ: 28.29-29.16
ಎಲ್ಲರಿಗೂ ಶುಭವಾಗಲಿ.
ಲಿಂಗದಲ್ಲಿ ಸೂತಕವ ಹಿಡಿವನ್ನಕ್ಕ ಪ್ರಾಣಲಿಂಗ ಸಂಬಂಧಿಯೆಂತೆಂಬೆ? ಜಂಗಮದಲ್ಲಿ ಸೂತಕವ ಹಿಡಿವನ್ನಕ್ಕ ಅನುಭಾವಿಯೆಂತೆಂಬೆ? ಪ್ರಸಾದದಲ್ಲಿ ಸೂತಕವ ಹಿಡಿವನ್ನಕ್ಕ ಸ್ವಾಮಿಭೃತ್ಯ ಸಂಬಂಧಿಯೆಂತೆಂಬೆ? ಭಕ್ತನೆಂತೆಂಬೆ, ಪ್ರಸಾದಿಯೆಂತೆಂಬೆ, ಕೂಡಲಚೆನ್ನಸಂಗನಲ್ಲಿ ಶರಣನೆಂತೆಂಬೆ?
ಬದಲಾವಣೆಯು ಬದುಕಿನ ನಿಯಮ. ಸ್ಪಷ್ಟವಾಗಿ ವಿವರಿಸಲ್ಪಟ್ಟ ಗುರಿಗಳು ಯಶಸ್ವಿಗೆ ಕೀಲಿ ಕೈ ಇದ್ದಂತೆ. ನೀವು ಅಪಾಯಗಳಿಗೆ ಹೆದರಿ ಸಮಯ ಕಳೆಯುತ್ತಿದ್ದೀರಾದಲ್ಲಿ ವೈಫಲ್ಯವೆಂಬ ಅತಿದೊಡ್ಡ ಅಪಾಯವನ್ನು ಆಹ್ವಾನಿಸುತ್ತಿದ್ದೀರಿ. ಎಲ್ಲಿಯವರೆವಿಗೆ ನಿಮಗೆ ಆಸೆ ಇರುತ್ತದೆಯೋ ಅಲ್ಲಿಯವರೆವಿಗೆ ಬದುಕಲು ಒಂದು ಕಾರಣವಿರುತ್ತದೆ.
ಶರಣ ಶಿವಾನಂದ ಕಲ್ಲೂರ