ಓಂ ಸ್ಥಿರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಕೃಷ್ಣ ಪಕ್ಷ
- ದಶಮಿ ತಿಥಿ 11.27 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.
23/07/2022 ಶನಿವಾರ
- ಕೃತ್ತಿಕಾ ನಕ್ಷತ್ರ 19.02 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
- ಯೋಗ: ಗಂಡ 13.05
- ಕರಣ: ಭದ್ರ 11.27
- ಭವ 24.34
- ಸೂರ್ಯೋದಯ: 06.04
- ಸೂರ್ಯಾಸ್ತ : 18.48
- ರಾಹುಕಾಲ: 09.15-10.51
- ಯಮಘಂಡಕಾಲ:14.02-15.37
- ಗುಳಿಕಕಾಲ: 06.04-07.40
- ಅಮೃತಘಳಿಗೆ: 10.52-12.28
13.17-14.01
19.41-21.16
23.41-25.16
28.29-29.16
ಎಲ್ಲರಿಗೂ ಶುಭವಾಗಲಿ.
ಭಾಷೆಯು ಆಲೋಚನೆಯ ಉಡುಗೆ. ಭಾಷೆಯು ಅದ್ಭುತವಾದದ್ದು, ಅದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಅಡಗಿಸಿಕೊಳ್ಳಲು ಮತ್ತು ಆಲೋಚನೆಯನ್ನು ಹಂಚಲು ಉಪಯುಕ್ತ. ಚಿರಕಾಲ ರಾಷ್ಟ್ರವನ್ನು ಒಂದು ಸೂತ್ರದಲ್ಲಿ ಬಂಧಿಸುವುದು ಭಾಷೆ. ಭಾಷೆ ಮತ್ತು ಭಾಷಣದ ಸಾಮರ್ಥ್ಯ ನಾವು ಗಳಿಸಿಕೊಂಡಂತೆ ಸರ್ವರನ್ನೂ ಆಕರ್ಷಿಸಿ ಸರಿ ದಾರಿಲಿ ಒಯ್ಯುವುದು.
ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಭಾವ ನೆಲೆಗೊಳ್ಳದೆ ಪ್ರಸಾದವನೇಸು ಕಾಲಕೊಂಡಲ್ಲಿ ಫಲವೇನು ಅಭ್ಯಾಸವಾಯಿತ್ತಲ್ಲದೆ, ಒಬ್ಬರೊಬ್ಬರ ಕಂಡು ಮಾಡುವರಲ್ಲದೆ ಸಹಜವಿಲ್ಲ, ಸಮ್ಯಕ್ಕಿಲ್ಲ, ನಿಜವಲ್ಲ. ಇದು ಕಾರಣ, ಇಂತಪ್ಪವರ ಭಕ್ತರೆಂದೆನಲಾಗದು, ಕೂಡಲಚೆನ್ನಸಂಗಯ್ಯಾ ನೀ ಸಾಕ್ಷಿಯಾಗಿ ಛೀಯೆಂಬೆನು.
ಶರಣ ಶಿವಾನಂದ ಕಲ್ಲೂರ