ಓಂ ಶೂರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಕೃಷ್ಣ ಪಕ್ಷ
- ತ್ರಯೋದಶಿ ತಿಥಿ 18.46 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.
26/07/2022 ಮಂಗಳವಾರ
- ಆರಿದ್ರಾ ನಕ್ಷತ್ರ 28.08 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
- ಯೋಗ: ವ್ಯಾಘಾತ 16.05
- ಕರಣ: ವಾಣಿಜ 18.46
- ಸೂರ್ಯೋದಯ: 06.05
- ಸೂರ್ಯಾಸ್ತ : 18.47
- ರಾಹುಕಾಲ: 15.37-17.12
- ಯಮಘಂಡಕಾಲ: 09.16-10.51
- ಗುಳಿಕಕಾಲ: 12.26-14.01
- ಅಮೃತಘಳಿಗೆ: 14.02-15.36
22.54-26.05
28.30-30.05 - ಮಹೇಂದ್ರಘಳಿಗೆ: 17.13-18.05
ಎಲ್ಲರಿಗೂ ಶುಭವಾಗಲಿ.
ಸರ್ವಾರ್ಪಿತವ ಮಾಡಬೇಕೆಂಬರು. ಸರ್ವೇಂದ್ರಿಯ ಸನುಮತವಾದುದನರಿಯರುಶೋತ್ರ ನೇತ್ರ ಘ್ರಾಮ ಜಿಹ್ವೆತ್ವಕ್ಕು ಸಹಿತರ್ಪಿತವ ಮಾಡಬೇಕು. ಪ್ರಾಣಪ್ರಯಾಣಕಾಲೇಪಿ ಸರ್ವಭೋಗೇಷು ಯಸ್ಸದಾ|ಅರ್ಪಣೇ ಚಾವಧಾನೀ ಚ ಸ ಲಿಂಗೀಪ್ರಾಣನಾಯಕಃ|| (ಎಂಬುದಾಗಿ) ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ.
ಮದುವೆ ಒಂದು ಅದೃಷ್ಟ. ಪೂರ್ಣವಾಗಿ ಮನಸ್ಸು ಮತ್ತು ಬುದ್ಧಿಗಳನ್ನು ಬಳಸಿ ಮಾಡಿಕೊಳ್ಳಬೇಕಾದ ವಿಚಾರ ಮದುವೆ. ಜೀವನದ ಸೋಜಿಗವೆಂದರೆ ಇಬ್ಬರು ಅಪರಿಚಿತರು ಎಲ್ಲಿಂದಲೋ ಬಂದು ಮದುವೆ ಮಾಡಿಕೊಳ್ಳುವುದು. ಗಂಡ ಹೆಂಡತಿ ಆಯ್ಕೆ ಮಾಡಿಕೊಳ್ಳುವಲ್ಲಿ ಒಮ್ಮೆ ತಪ್ಪಿದರೆ ಆ ತಪ್ಪ ಸರಿಪಡಿಸಿಕೊಳ್ಳಲಿಕ್ಕೆ ಕಷ್ಟಸಾಧ್ಯ.
ಶರಣ ಶಿವಾನಂದ ಕಲ್ಲೂರ