ಓಂ ಕಾಂತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ವರ್ಷ ಋತು
- ಶ್ರಾವಣ ಮಾಸ
- ಶುಕ್ಲ ಪಕ್ಷ
- ದ್ವಿತೀಯ ತಿಥಿ 26.59 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.
30/07/2022 ಶನಿವಾರ
- ಆಶ್ಲೇಷ ನಕ್ಷತ್ರ 12.12 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
- ಯೋಗ: ವ್ಯತಾಪತಾ18.59
- ಕರಣ: ಬಾಳವ 14.13
- ಕೌಳವ 26.59
- ಸೂರ್ಯೋದಯ: 06.06
- ಸೂರ್ಯಾಸ್ತ : 18.46
- ರಾಹುಕಾಲ: 09.16-10.51
- ಯಮಘಂಡಕಾಲ: 14.01-15.36
- ಗುಳಿಕಕಾಲ: 06.06-07.41
- ಅಮೃತಘಳಿಗೆ: 10.52-12.30
13.18-14.00
19.43-21.18
23.43-25.18
28.31-29.18
ಎಲ್ಲರಿಗೂ ಶುಭವಾಗಲಿ
ಮನುಷ್ಯನ ಮನಸ್ಸು ಯಾವಾಗಲೂ ಜೇನುನೊಣದಂತೆ ಸತತೋದ್ಯೋಗಿ, ಗುಣಗ್ರಾಹಿಯೂ ಆಗಿರಬೇಕು, ಗರುಡನ ಮಹತ್ವಾಕಾಂಕ್ಷೆ, ಕೋಗಿಲೆಯ ಕಲಾಭಿರುಚಿ ಅದಕ್ಕಿರಬೇಕು. ಕೈಗಳು, ಹೃದಯ ಮತ್ತು ಮಿದಳು — ಈ ಮೂರರ ಸಮನ್ವಯ ಬೆಳವಣಿಗೆ ಓರ್ವ ಆದರ್ಶ ವ್ಯಕ್ತಿಯ ಪ್ರತೀಕ. ಅತ್ಯುನ್ನತ ಶಕ್ತಿ ಎಂದರೆ ಮಾನಸಿಕ ಶಕ್ತಿ, ಆಶಕ್ತಿಯೇ ಹೃದಯಕ್ಕೆ ಉಸಿರು.
ಅಂಗಸಂಗಿಯಾದವಂಗೆ ಲಿಂಗಸಂಗವಿಲ್ಲ, ಲಿಂಗಸಂಗಿಯಾದವಂಗೆ ಅಂಗಸಂಗವಿಲ್ಲ, ಅಂಗಸಂಗವೆಂಬುದು ಅನಾಚಾರ. ಲಿಂಗಸಂಗವೆಂಬುದು ಸದಾಚಾರ. ಇದು ಕಾರಣ, ಅಂಗಸಂಗವ ಬಿಟ್ಟು ಲಿಂಗಸಂಗಿಯಾಗಿರಬೇಕು, ಕೂಡಲಚೆನ್ನಸಂಗಮದೇವಾ.
ಶರಣ ಶಿವಾನಂದ ಕಲ್ಲೂರ