ಓಂ ಪಾಪಹಾರಿಣೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ವರ್ಷ ಋತು
- ಶ್ರಾವಣ ಮಾಸ
- ಶುಕ್ಲ ಪಕ್ಷ
- ತೃತೀಯ ತಿಥಿ 28.18 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.
31/07/2022 ರವಿವಾರ
- ಮಘಾ ನಕ್ಷತ್ರ 14.19 ಕ್ಕೆ ಅಂತ್ಯ ಪೂರ್ವ ಫಾಲ್ಗುಣಿ ನಕ್ಷತ್ರ ಆರಂಭ.
- ಯೋಗ: ವರಿಯಾಣ19.09
- ಕರಣ: ತೈತುಲ 15.41
- ಗರಜ 28.18
- ಸೂರ್ಯೋದಯ: 06.06
- ಸೂರ್ಯಾಸ್ತ: 18.46
- ರಾಹುಕಾಲ: 17.11-18.46
- ಯಮಘಂಡಕಾಲ: 12.26-14.01
- ಗುಳಿಕಕಾಲ: 15.36-17.11
- ಅಮೃತಘಳಿಗೆ: 07.43-10.54
22.07-23.42 - ಮಹೇಂದ್ರಘಳಿಗೆ:06.06-06.54
19.43-21.18
29.19-30.06
ಎಲ್ಲರಿಗೂ ಶುಭವಾಗಲಿ.
ಮನಶುದ್ಧವಾಗಿ ಮಜ್ಜನಕ್ಕೆರೆದರೆ ಭಾವ ಮತ್ತೇಕಯ್ಯಾ? ಪತ್ರ ಪುಷ್ಪ ರಂಗವಲ್ಲಿಯನಿಕ್ಕಲೇನು, ಭಿತ್ತಿಯ ಚಿತ್ತಾರವೇ? ಅವರು ಕಾಣಬೇಕು, ಇವರು ಕಾಣಬೇಕೆಂಬ ಭ್ರಮೆಯ ಭ್ರಮಿತರು ಅಂಗಹೀನರು. ಮನದಂಗವನಗಲರು, ಲಿಂಗ ಮತ್ತೆಲ್ಲಿಯದೋ?ಸದಮದವಳಿದು ನಿಜವನರಿದಡೆ ಲಿಂಗಕ್ಕೆ ಪೂಜೆ ಕಂಡಾ. ಕೂಡಲಚೆನ್ನಸಂಗಯ್ಯ ಸಾಹಿತ್ಯನಾಗಿಹನು.
ನಿಮಗೆ ಮನಃಶಾಂತಿಯು ಬೇಕಾದರೆ ಇತರರಲ್ಲಿ ಕುಂದುಕೊರತೆಗಳನ್ನು ಕಾಣಬೇಡಿ. ವಿಶಾಲ ಹೃದಯಿಯಲ್ಲಿ ಸ್ವಾರ್ಥವಿಲ್ಲ. ದಯೆಯುಳ್ಳ ಹೃದಯದಲ್ಲಿ ಮಾತ್ರ ಪ್ರೀತಿ ಹುಟ್ಟುತ್ತದೆ. ಸ್ವಪ್ರತಿಷ್ಠೆಯು ಮಾನವನನ್ನು ದೈವತ್ವದಿಂದ ಬೇರ್ಪಡಿಸುತ್ತದೆ. ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ ಅದೇ ಸುಖ.
ಶರಣ ಶಿವಾನಂದ ಕಲ್ಲೂರ