ಓಂ ಶ್ರೀಪ್ರದಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ವರ್ಷ ಋತು
- ಶ್ರಾವಣ ಮಾಸ
- ಶುಕ್ಲ ಪಕ್ಷ
- ಸಪ್ತಮಿ ತಿಥಿ 29.06 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.
04/08/2022 ಗುರುವಾರ
- ಚಿತ್ತ ನಕ್ಷತ್ರ 18.47 ಕ್ಕೆ ಅಂತ್ಯ ಸ್ವಾತಿ ನಕ್ಷತ್ರ ಆರಂಭ.
- ಯೋಗ: ಸಾಧ್ಯ 16.32
- ಕರಣ: ಗರಜ 17.27
- ವಾಣಿಜ 29.06
- ಸೂರ್ಯೋದಯ: 06.07
- ಸೂರ್ಯಾಸ್ತ : 18.44
- ರಾಹುಕಾಲ: 14.00-15.35
- ಯಮಘಂಡಕಾಲ: 06.07-07.42
- ಗುಳಿಕಕಾಲ: 09.16-10.51
- ಅಮೃತಘಳಿಗೆ: 07.43-08.31
11.44-13.59
16.32-18.07
21.20-22.07
25.20-26.55
28.32-30.07 - ಮಹೇಂದ್ರಘಳಿಗೆ: 19.44-21.19
ಎಲ್ಲರಿಗೂ ಶುಭವಾಗಲಿ.
ಶೀಲ ಶೀಲವೆಂದು ನುಡಿವ ಉದ್ದೇಶ ಪ್ರಾಣಿಗಳು ಎಲ್ಲರೂ ಅನಂತಶೀಲರು. ಅರಿವಿನ ನಿರ್ಣಯವನರಿಯರು. ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು. ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು.
ನಮ್ರತೆ ಇದ್ದವನೇ ನಿಜಮನುಷ್ಯ. ಏನೇ ಸಂಭವಿಸಿದರೂ, ಏನೂ ಸಂಭವಿಸಲಿಲ್ಲ ಎನ್ನುವುದರಲ್ಲೇ ಮನುಷ್ಯನ ಶ್ರೇಷ್ಠತೆ ಇದೆ. ತಪ್ಪು ಮಾಡದಿರುವ ಮನುಷ್ಯನು ಜೀವನದಲ್ಲಿ ಏನನ್ನೂ ಮಾಡಲು ಸಮರ್ಥನಾಗುವುದಿಲ್ಲ. ಮನುಷ್ಯನು ಅಲ್ಪಕಾಲ ಜೀವಿಸಿದರೂ ಅವನ ಚಿಂತನೆ, ಯೋಜನೆ, ಕ್ರಿಯೆಗಳು ಸರ್ವಕಾಲಕ್ಕೂ ಉಳಿಯುತ್ತದೆ.
ಶರಣ ಶಿವಾನಂದ ಕಲ್ಲೂರ