ಓಂ ನಾಗಯಜ್ಞೋಪವೀತಿನೇ ನಮಃ
- ಶುಭಕೃತ್ ಸಂವತ್ಸರ
- ದಕ್ಷಿಣಾಯಣ
- ಶರದ್ ಋತು
- ಕಾರ್ತೀಕ ಮಾಸ
- ಶುಕ್ಲ ಪಕ್ಷ
- ದ್ವಿತೀಯ ತಿಥಿ 12.45 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.
27/10/2022 ಗುರುವಾರ
- ವಿಶಾಖ ನಕ್ಷತ್ರ 12.10 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
- ಯೋಗ:ಆಯುಷ್ಮಾನ್07.25
ಸೌಭಾಗ್ಯ 28.31 - ಕರಣ :ಕೌಳವ 12.45
ತೈತುಲ 23.40 - ಸೂರ್ಯೋದಯ: 06.13
- ಸೂರ್ಯಾಸ್ತ : 17.54
- ರಾಹುಕಾಲ: 13.31-14.59
- ಯಮಘಂಡಕಾಲ: 06.13-07.41
- ಗುಳಿಕಕಾಲ: 09.08-10.36
- ಅಮೃತಘಳಿಗೆ :07.42-07.49
10.37-11.49
16.38-18.13
19.02-22.13
24.38-26.13 - ಮಹೇಂದ್ರಘಳಿಗೆ: 28.38-29.25
ಎಲ್ಲರಿಗೂ ಶುಭವಾಗಲಿ.
“ಕನಸು ಕಂಡವರೆಲ್ಲ ಅದನ್ನು ನನಸಾಗಿಸದೇ ಇರಲು ಮುಖ್ಯ ಕಾರಣ,ಅವರು ಅದರಲ್ಲಿ ನಂಬಿಕೆ ಇಡದಿರುವುದು.ನಿಮ್ಮ ಕನಸಿನಲ್ಲಿ ನಿಮಗೆ ನಂಬಿಕೆಯಿರಬೇಕು.ನಾನು ಅದನ್ನು ಸಾಕಾರಗೊಳಿಸುತ್ತೇನೆ ಎಂಬ ವಿಶ್ವಾಸವಿರಬೇಕು.ಇಲ್ಲದಿದ್ದರೆ ಕನಸು ಕನಸಾಗಿಯೇ ಇರುತ್ತದೆ.!!
ಅರುಹ ಅರಿಯಲೆಂದು ಕುರುಹ ಕೈಯಲ್ಲಿ ಕೊಟ್ಟ!
ಅರುಹನೆ ಮರದು ಕುರುಹನೆ ಹರಿದ! ಈ
ಕುರುಂಬರಿಗಿನ್ನೆತ್ತಣ ಮುಕ್ತಿಯೊ? ರಾಮನಾಥ
– ಜೇಡರ ದಾಸಿಮಯ್ಯ
ಶ್ರೀ ರಮೇಶ.ರ. ಮುಂಜಣ್ಣಿ (ಶಿಕ್ಷಕರು)