ಓಂ ಪುರುಷೋತ್ತಮಾಯ ನಮಃ
- ಶುಭಕೃತ್ ಸಂವತ್ಸರ
- ದಕ್ಷಿಣಾಯಣ
- ಶರದ್ ಋತು
- ಕಾರ್ತೀಕ ಮಾಸ
- ಶುಕ್ಲ ಪಕ್ಷ
- ದಶಮಿ ತಿಥಿ 19.30 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.
03/11/2022 ಗುರುವಾರ
- ಶತಭಿಷ ನಕ್ಷತ್ರ 24.48 ಕ್ಕೆ ಅಂತ್ಯ
- ಪೂರ್ವಾಭಾದ್ರಪದ ನಕ್ಷತ್ರ ಆರಂಭ.
- ಯೋಗ:ವೃದ್ಧಿ 07.48
ಧ್ರುವ 29.23 - ಕರಣ :ತೈತುಲ 08.17
- ಗರಜ 19.30
- ಸೂರ್ಯೋದಯ: 06.15
- ಸೂರ್ಯಾಸ್ತ : 17.51
- ರಾಹುಕಾಲ:13.30-14.57
- ಯಮಘಂಡಕಾಲ:06.15-07.42
- ಗುಳಿಕಕಾಲ:09.09-10.36
- ಅಮೃತಘಳಿಗೆ : 07.43-07.51
10.37-11.51
16.40-18.15
19.04-22.15
24.40-26.15 - ಮಹೇಂದ್ರಘಳಿಗೆ: 28.40-29.27
ಎಲ್ಲರಿಗೂ ಶುಭವಾಗಲಿ.
ನಮ್ಮ ಕೆಲಸ ಮತ್ತು ಸಾಧನೆಗಳಿಂದ ಸುತ್ತಲಿನ ಪರಿಸರದಲ್ಲಿ ಬದಲಾವಣೆಗಳನ್ನು ತರಬಹುದೇ ಹೊರತು, ನಮ್ಮ ಅಭಿಪ್ರಾಯದಿಂದಲ್ಲ. ಮಾತಿಗಿಂತ ನಮ್ಮ ಕೆಲಸಕ್ಕೆ ಹೆಚ್ಚು ಮಹತ್ವ ಕೊಡಬೇಕು. ಸಾಧಕರು ಏನೇ ಹೇಳಿದರೂ ಜಗತ್ತು ಕೇಳುತ್ತದೆ ಮತ್ತು ಅದರಂತೆ ನಡೆಯುತ್ತದೆ. ಸಾಧನೆ ಮಾಡಿ ಮಾತಾಡಬೇಕು. ಮಾತಾಡುವುದೇ ನಮ್ಮ ಸಾಧನೆಯಾಗಬಾರದು.
ನಮ್ಮ ಸಾವಿಗೆ ಹಲವು ದಾರಿಗಳಿರುತ್ತವೆ. ಆದರೆ ನಮ್ಮ ಬದುಕಿಗೆ ಇರುವುದು ಒಂದೇ ದಾರಿ ಅದು ಆತ್ಮವಿಶ್ವಾಸ
ಪಿಂಡವೇ ಆದಿಯಾಗಿ, ಜ್ಞಾನವೇ ಶೂನ್ಯವಾಗಿ,
ಆದಿ ಅಂತ್ಯಗಳೆರಡು ಮಧ್ಯದಲ್ಲಿ ನಿಲ್ಲಲು
ನೂರು ಒಂದರ ಮೇಲೆ ನಿಂದು
ಒಂದೇ ನೂರಾಗಿ ನಿಂದ ಮೇಲೆ
ನೂರೊಂದೆಂಬುದಿಲ್ಲವಾಗಿ ಕೂಡಲಸಂಗಮದೇವನೆಂಬ ಸೊಲ್ಲು ಇಲ್ಲ.
ಶ್ರೀ ರಮೇಶ.ರ. ಮುಂಜಣ್ಣಿ(ಶಿಕ್ಷಕರು)