ಓಂ ಶ್ರೀಪ್ರದಾಯ ನಮಃ
- ಶುಭೋದಯ
- ಪ್ಲವ ಸಂವತ್ಸರ
- ದಕ್ಷಿಣಾಯಣ
- ಹೇಮಂತ ಋತು
- ಮಾರ್ಗಶಿರ ಮಾಸ
- ಕೃಷ್ಣ ಪಕ್ಷ
- ದ್ವಾದಶಿ ತಿಥಿ 10.39 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
31/12/2021 ಶುಕ್ರವಾರ
- ಅನುರಾಧ ನಕ್ಷತ್ರ 22.03 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
- ಯೋಗ: ಶೂಲ 17.59
- ಕರಣ: ತೈತುಲ 10.39
- ಗರಜ 21.00
- ಸೂರ್ಯೋದಯ: 06.43
- ಸೂರ್ಯಾಸ್ತ : 18.03
- ರಾಹುಕಾಲ: 10.58-12.23
- ಯಮಘಂಡಕಾಲ: 15.13-16.38
- ಗುಳಿಕಕಾಲ: 08.08-09.33
- ಅಮೃತಘಳಿಗೆ: 06.43-07.31
09.56-10.57
14.44-15.12
16.39-17.55
20.20-21.55
28.20-30.43 - ಮಹೇಂದ್ರಘಳಿಗೆ: 23.32-24.19
ಎಲ್ಲರಿಗೂ ಶುಭವಾಗಲಿ.
ಮನವಿಲ್ಲದೆ ಮಾಡಿದಡೆ ಲಿಂಗರೂಪಾಯಿತ್ತು, ಧನವಿಲ್ಲದೆ ಮಾಡಿದಡೆ ಜಂಗಮರೂಪಾಯಿತ್ತು, ತನುವಿಲ್ಲದೆ ಮಾಡಿದಡೆ ಪ್ರಸಾದರೂಪಾಯಿತ್ತು, ಈ ತ್ರಿವಿಧ ಸಕೀಲಸಂಬಂಧವ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಬಲ್ಲ.
ಯಾರನ್ನಾದರೂ ಯಾವ ಖರ್ಚೂ ಇಲ್ಲದೆ ಸಂತೋಷಪಡಿಸಲು ಸಾಧ್ಯವಿದ್ದರೆ ಅದು ಮಾತಿನಿಂದ ಮಾತ್ರ. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಗಾದೆಯಿದೆ. ಮಾತನಾಡುವುದು ಒಂದು ಕುಶಲ ಕಲೆ ರೂಡಿಯಿಂದ ಮಾತ್ರ ಇದನ್ನು ಮೈಗೂಡಿಸಿಕೊಳ್ಳಬಹುದು.
ಶರಣ ಶಿವಾನಂದ ಕಲ್ಲೂರ