ಓಂ ಸೃಷ್ಟಿಕರ್ತೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಕೃಷ್ಣ ಪಕ್ಷ
- ದಶಮಿ ತಿಥಿ 10.32 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.
25/05/2022 ಬುಧವಾರ
- ಉತ್ತರಭಾದ್ರಪದ ನಕ್ಷತ್ರ 23.19 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
- ಯೋಗ: ಪ್ರೀತಿ 22.43
- ಕರಣ: ಭದ್ರ 10.32
- ಭವ 22.39
- ಸೂರ್ಯೋದಯ: 05.54
- ಸೂರ್ಯಾಸ್ತ : 18.39
- ರಾಹುಕಾಲ:12.17-13.52
- ಯಮಘಂಡಕಾಲ :07.30-09.05
- ಗುಳಿಕಕಾಲ: 10.41-12.17
- ಅಮೃತಘಳಿಗೆ: 15.31-17.06
18.43-21.06
26.43-29.54
ಎಲ್ಲರಿಗೂ ಶುಭವಾಗಲಿ.
ಕರ್ಪುರದ ಗಿರಿಯ ಉರಿಯು ಹಿಡಿದಡೆ ಇದ್ದಿಲುಂಟೆ? ಮಂಜಿನ ಶಿವಾಲಯಕ್ಕೆ ಬಿಸಿಲ ಕಲಶವುಂಟೆ? ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ ಮರಳಿ ಬಾಣವನರಸಲುಂಟೆ? ಗುಹೇಶ್ವರನೆಂಬ ಲಿಂಗವನರಿದು ಮರಳಿ ನೆನೆಯಲುಂಟೆ?
ಸೇಡನು ಹಚ್ಚಿಕೊಂಡು ಸೇರಿಗೆ ಸವಾಸೇರಾಗದೆ, ಸೈರಣೆಯಿಂದ ಸೈ ಎನಿಸಿಕೊಂಡು, ಸೊಗಸುತನದ ಸೊನೆಯಾಗಿ, ಸೋದರ ಸೋದರಿತನದಿ ಸೋಜಿಗ ಪಡಿಸುತ್ತಾ, ಸೌಮ್ಯ ಸೌಹಾರ್ದತೆಯಿಂದ ಸೌಖ್ಯ ನೀಡುತಾ ಸೌಭಾಗ್ಯ ತಂದು, ಸಂಗಾತಿಗಳಾಗಿ ಸಂಘಟಿಸುತಾ ಸಂಚಲನ ಮೂಡಿಸು ಸಂಪನ್ನನಾಗಿ.
ಶರಣ ಶಿವಾನಂದ ಕಲ್ಲೂರ