spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಶರಣ ಗಜೇಶ ಮಸಣಯ್ಯ

ಗಜೇಶ ಮಸಣಯ್ಯ ಅನ್ನುವ ಶರಣ ಬಸವಾದಿ ಶರಣರ ಸಮಕಾಲೀನರು ಇರಬಹುದು ಎಂದು ತಿಳಿದು ಬರುತ್ತದೆ. ಕರ್ಜಗಿ ಸಂಸ್ಥಾನದ ಗ್ರಾಮಕ್ಕೆ ಸೇರಿರುವ ಶರಣ ಗಜೇಶ ಮಸಣಯ್ಯ ಶರಣ ಸತಿ ಲಿಂಗಪತಿ ಭಾವದ ಶ್ರೇಷ್ಠ ವಚನಕಾರ. ಕಲ್ಯಾಣದ ಶರಣರ ಅನುಭವಗೋಷ್ಠಿಯಲ್ಲಿ ಪಾಲ್ಗೊಂಡು ತನ್ನ ಕೊನೆಗಾಲದಲ್ಲಿ ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಮನಹಳ್ಳಿ ಎನ್ನುವ ಗ್ರಾಮದಲ್ಲಿ ಇದ್ದು ಅಲ್ಲಿಯೇ ಐಕ್ಯವಾದರು ಎಂದು ತಿಳಿದು ಬರುತ್ತದೆ. ಅಲ್ಲಿ ಈತನ ಹೆಸರಿನ ದೇವಾಲಯ ಇದೆ ಎಂದು ಶಿಲಾ ಶಾಸನದಿಂದ ತಿಳಿದು ಬರುತ್ತದೆ.

ಕರ್ಜಗಿಯ ಗಜೇಶ್ವರ ದೇವರು ಇವರ ಇಷ್ಟ ದೇವರು. ಅದನ್ನೇ ಇವರು ತನ್ನ ಅಂಕಿತನಾಮ ಮಾಡಿ ಕೊಂಡಿದ್ದಾರೆ. ಈತನ ಹೆಂಡತಿಯ ಹೆಸರು ಮಸಣಮ್ಮ ಎಂದು ತಿಳಿದು ಬರುತ್ತದೆ. ಇವರ ಕಾಲ1160 ಇದ್ದು ಸುಮಾರು70 ವಚನಗಳು ಲಭ್ಯವಿವೆ. ಭಾಷೆ ಮಧುರ ಭಾವ ಕಾವ್ಯನಾತ್ಮಕ ಶೈಲಿಯಲ್ಲಿ ಸತಿ ಪತಿ ಭಾವದ ಉತ್ಕಟತೆಯು ಆಕರ್ಷಕವಾಗಿ ವಚನಗಳಲ್ಲಿ ಮೂಡಿಬಂದಿದೆ. ಪಾಲ್ಗರಿಗೆ ಸೋಮನಾಥ ಬರೆದ ಗಣ ಸಮಸ್ತ ನಾಮಾವಳಿಯಲ್ಲಿ ಈತನ ಹೆಸರು ಉಲ್ಲೇಖವಿದೆ.

- Advertisement -

ವಿಜಯಪುರದಿಂದ 60 ಕಿಲೋಮೀಟರ್ ದೂರದಲ್ಲಿ ಕರ್ಜಗಿ ಗ್ರಾಮದಲ್ಲಿ ಈತನ ಇಷ್ಟ ದೇವರು ಗಜೇಶ್ವರ ದೇವರ ದೇವಾಲಯ ಇದೆ ಎಂದು ತಿಳಿದು ಬರುತ್ತದೆ ಇದರ ಹತ್ತಿರ ಮನಹಳ್ಳಿ ಗ್ರಾಮದಲ್ಲಿ ಶರಣ ಗಜೇಶ ಮಸಣಯ್ಯ ದೇವಾಲಯವಿದೆ ಪ್ರತಿ ವರ್ಷ ಅಲ್ಲಿ ಜಾತ್ರೆ ಜರುಗುತ್ತದೆ. ಮನಹಳ್ಳಿ ಇಂದ ಆರು ಮೈಲು ದೂರದಲ್ಲಿ ಬೆಣ್ಣೆ ತೊರೆ ಎಂಬ ಹಳ್ಳ ಹರಿಯುತ್ತದೆ ಶರಣ ಗಜೇಶ ಮಸಣಯ್ಯ ನವರು
ಪೂಜೆಗೆ ಕೂಡುವ ಸ್ಥಳ ಇದೇ ಆಗಿರಬಹುದು ಎಂದು
ಫ. ಘು. ಹಳಕಟ್ಟಿ ಅವರು ಊಹಿಸುತ್ತಾರೆ. ಕರ್ಜಗಿ ಗ್ರಾಮದಲ್ಲಿ ಜಂಗಮ ದಾಸೋಹ ಮಾಡುತ್ತಾ ಲಿಂಗ ಪೂಜೆ ಮಾಡುವಲ್ಲಿ ಇತರೆ ತರುವ ಮರೆತು ಹುಲಿ, ಕರಡಿ,
ಸರ್ಪ, ಶಂಭ, ಶರಧಿ, ವೃಶ್ಚಿಕ, ಆನೆ, ಭೂತ, ಪ್ರೇತ, ಬೇತಾಳ,
ಬಿರುಗಾಳಿ, ಅನಿಲ, ಸಿಡಿಲು, ಮಿಂಚು, ಮಳೆ, ಇದರ ಭಯ ಬಂದೊಡನೆಯೂ ಲಿಂಗ ಪೂಜೆ ಬಿಟ್ಟು ಹೋಗಬಾರದು ಎಂಬ ಭಾವದಿಂದ ಲಿಂಗ ಪೂಜೆ ಮಾಡುತ್ತಿದ್ದರು. ಒಮ್ಮೆ ಶಿವನು ಮಸಣಯ್ಯನವರು ಪೂಜೆಗೆ ಕುಳಿತಾಗ ಗಗನವು ಇಬ್ಬಾಗ ಆಗುವಷ್ಟು ಮಳೆ ಸುರಿಸಲು
ಮಳೆ ಇಬ್ಬಾಗವಾಗಿ ಹರಿದು ಗಜೇಶ ಮಸಣಯ್ಯನವರ ಲಿಂಗಾವನೋತಿಸುವ ವಿಕಳಾವಸ್ತೆಯಲ್ಲಿ ನಿರ್ವಯಲಾದಾರು ಎಂಬ ಮಾಹಿತಿ ಇದೆ.

1 ವಚನ

ಆತನು ನೋಡಿದೊಂದು
ದೇಶಗಳ ಮರೆದೆ ನಿನ್ನಂತವ್ವ
ಅವ್ವ ಅವ್ವ ಆತನ ನುಡಿದೆಡೆ
ಮೈಯೆಲ್ಲಾ ಬೆವತುದಿನ್ನೆಂತವ್ವಾ                                    ಅವ್ವ ಅವ್ವ ಆತ ಕೈ ಹಿಡಿ ದೆಡೆ ಎನ್ನ ನಿರಿಗೆಗಳನ್ನ
ಸಡಿಲಿಸಿದವಿನ್ನಂತವ್ವ ಇಂದ್ಯಮ್ಮ ಮಹಾಲಿಂಗ ಗಜೇಶ್ವರ ನೆನಪಿನಿಂದೊಡೆ
ನಾನಪ್ಪ ಮರೆತು ನಿಂತೆನವ್ವ.

- Advertisement -

ತಾನು ಸತಿಯಾಗಿ ತನ್ನ ಇಷ್ಟ ದೇವ ಮಹಾಲಿಂಗರು ನೋಡಿದರೆ ದೆಸೆ ದಿಕ್ಕು ಅಂದರೆ
ವಾಸ್ತವದಲ್ಲಿ ನಾವು ಬದುಕುತ್ತಿರುವುದು ಲೋಕವನ್ನು ವರಿಸುವ ಹಾಗೆ ಆತನು ಮಾತನಾಡಿದರೆ ಮೈಯೆಲ್ಲಾ ಬೆವತು ಹೋದಂತೆ ಆತ ಕೈ ಹಿಡಿದರೆ ಸಾಕು ನೆರಿಗೆಗಳು ಸಡಿಲಾದಂತೆ ಗಜೇಶ್ವರ ಅಪ್ಪಿದರೆ ಸಾಕು ನನ್ನ ನಾನು ಮರೆತಂತೆ.
ಹೀಗೆ ಸತಿಪತಿ ಭಾವದ ಭಾವನೆಗಳು ಗಜೇಶ ಮಸಣಯ್ಯನವರ ವಚನಗಳಲ್ಲಿ ಹಾಸು ಹೊಕ್ಕಗಿರುವದು ಕಾಣಬಹುದು.

2 ವಚನ

ಸರ್ವಜ್ಞನ ಸಹಮತವೆಂಬ ಮಾತು ಸಾಮಾನ್ಯವೇ ಅವ್ವ ತಾ ಮೆಚ್ಚಿದ ಕಲಿಯಾಗಿಪ್ಪ ವರ
ಮೆಚ್ಚ ಸಖಿಯಾಗಿದ್ದವರ
ನೊಬ್ಬರಾನಾರುವ ಕಾಣೆ ಅವ್ವ
ಆ ಸತ್ತು ಹೆದರಿ ಕೊಂದವ ಸೈಯಾ ಚಂದದ ಚಂದ್ರಮತಿಯಲ್ಲಿ ಕಂಡೆನು ಇಂದು ಕಂಡೆನು ಮಹಾಲಿಂಗ.

ಗಜೇಶ ಮಸಣ್ಣಯ್ಯನವರ ವಚನಗಳಲ್ಲಿ ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವನು ಸಮ್ಮತ ಸಿದ್ದಾಂತದ ಮಾತುಗಳು ಸಾಮಾನ್ಯ ಅಲ್ಲವೇ ಅಲ್ಲ. ತಾನು ಮೆಚ್ಚದವ ಇನ್ನೊಬ್ಬರನ್ನು ಕೂಡ ಮೆಚ್ಚಲಾರ ಯಾರು ಸುಖವಾಗಿ ಇರುವುದನ್ನು ಕಾಣಲಾರ. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳು ತೊಂದರೆಗಳು ಇರುತ್ತವೆ ಯಾರು ಯಾರನ್ನು ಮೆಚ್ಚಿಸಿ ಬಾಳಲು ಸಾಧ್ಯವಿಲ್ಲ ಎಲ್ಲಾ ಬಲ್ಲವನಿಗೆ ಬಗೆಹರಿಸುವ ದಾರಿ ಇಲ್ಲಿ ಇಲ್ಲ. ಹಾಗೆಯೆ ಹರಿಶ್ಚಂದ್ರ
ಕಾವ್ಯದಲ್ಲಿ ಬರುವ ಚಂದ್ರಮತಿಗೆ ಬಂದೊದಗಿದ ಪರಿಸ್ಥಿತಿಯಲ್ಲಿದ್ದು ಅಂತಹ ರಾಜ ಹರಿಶ್ಚಂದ್ರನ ಪತ್ನಿಯಾದರು ಕೂಡ ಭಗವಂತನ ಪರೀಕ್ಷೆಯಲ್ಲಿ ಕೈಕಟ್ಟಿ ಕೂಡ ಬೇಕಾಯಿತು. ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಕಳೆದುಕೊಂಡು ಪಡಬಾರದ ಕಷ್ಟ ಕೋಟಿಲೆಗಳಲ್ಲಿ ತೊಳಲಿ ಬಳಲಿ ಕೊನೆಗೆ ಶಿವನ ಕಾರುಣ್ಯದಿಂದ ಹೊರಬರುವುದನ್ನು ತಿಳಿಸುವರು. ಹೀಗೆ ಸತಿಪತಿ ಭಾವದ ಭಾವನೆಗಳು ಶರಣ ಗಜೇಶ ಮಸಣಯ್ಯನವರ ವಚನಗಳಲ್ಲಿ ಕಾಣಬಹುದು.

ಬಸಮ್ಮ ಭರಮಶೆಟ್ಟಿ
ರಾಂಪುರ ಪಿ ಎ
*ವಚನ ಅಧ್ಯಯನ  ವೇದಿಕೆ, ಅಕ್ಕನ ಅರಿವು
ಬಸವಾದಿ ಶರಣರ ಚಿಂತನಕೂಟ

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group