spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ನಗೆಯ ಮಾರಿತಂದೆ

12ನೇ ಶತಮಾನದ ಶರಣರ ಬದುಕಿನ ಬಹುದೊಡ್ಡ ಆಶಯ ಕಾಯಕ ತತ್ವ. ಕಾಯಕದ ಮೂಲಕ ಸರ್ವ ಶರಣರನ್ನು ಸಮಾನರನ್ನಾಗಿ ನೋಡುವಂತ ಒಂದು ವೇದಿಕೆ ನಿರ್ಮಾಣವಾಗಿದ್ದು ಶರಣರ ಕಾಲದಲ್ಲಿ. ಎಲ್ಲಾ ಕಾಯಕಕ್ಕೆ ಸಮಾನತೆಯ ಮಹತ್ವವನ್ನು ದೊರಕಿಸಿಕೊಟ್ಟ ಏಕೈಕ ಸಮಾಜ ಅದುವೇ ವಚನ ಚಳವಳಿ. ಪ್ರತಿಯೊಂದು ಕಾಯಕವನ್ನು ಸಮಾನ ಗೌರವದಿಂದ ಕಾಣುವ ಚಿಂತನೆ ಮೂಡಿಬಂದದ್ದು ವಚನಕಾರರಲ್ಲಿಮಾತ್ರ ನೋಡಲು ಸಾಧ್ಯ. ಇಂತಹ ಕಾಲಘಟ್ಟಗಳಲ್ಲಿ ಬದುಕಿದ ಬಹಳಷ್ಟು ಪ್ರಮುಖ ವಚನಕಾರರಲ್ಲಿ ನಗೆ ಮಾರಿ ತಂದೆಯು ಒಬ್ಬರು.

ಕಾಯಕದ ಮೂಲಕ ಪ್ರಸಿದ್ಧರಾದವರು ಅನೇಕ ಶರಣರು. ಅವರು ತಮ್ಮ ಕುಲಕಸುಬನ್ನೇ ಕಾಯಕವನ್ನಾಗಿ ನಡೆಸಿಕೊಂಡು ಬಂದವರು.ಆದರೆ ನಗೆ ಮಾರಿತಂದೆ ಇವರು ಬಹಳ ವಿಶೇಷವಾದ ಕಾಯಕವನ್ನು ನಡೆಸುತ್ತಿದ್ದರು. ನಗಿಸುವ ಕಾಯಕವನ್ನೇ ಜೀವಾಳವನ್ನಾಗಿ ಮಾಡಿಕೊಂಡ ಹಾಸ್ಯ ಕಲಾವಿದರು. ಇವರ ಕಾಲ 1160 ಬಸವಣ್ಣನವರ ಸಮಕಾಲೀನರು. ಹಾದರಿಗೆ ಇವರ ಜನ್ಮಸ್ಥಳ.

- Advertisement -

ಬೀದರಜಿಲ್ಲೆಯ ಕಲ್ಯಾಣ ಇವರ ಕಾರ್ಯಕ್ಷೇತ್ರ.ಅಂಕಿತನಾಮ”ಆತುರವೈರಿ ಮಾರೇಶ್ವರ.” ಸುಮಾರು 101 ವಚನಗಳನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ಇವರು ಜಾತಿಯಿಂದ ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದರು. ಚತುರ ಮಾತುಗಾರಿಕೆ, ದೃಷ್ಟಾಂತ ಕಥೆಗಳು ಮತ್ತು ಹೋಲಿಕೆಗಳ ಮೂಲಕ ಕೇಳುಗರ ಮನಸ್ಸನ್ನು ರಂಜಿಸುವ ಕಲಿಗಾರಿಕೆ ಇವರು ವಚನಗಳಲ್ಲಿ ಮುಖ್ಯವಾಗಿ ಕಂಡುಬರುವ ಅಂಶಗಳು. ಹಾಸ್ಯದ ಜೊತೆಗೆ ಅಧ್ಯಾತ್ಮ ಅಡಗಿಸಿಕೊಂಡಿರುವುದು ಸರಳತೆ ಸಂಕ್ಷಿಪ್ತತೆಗಳನ್ನು ಮೈಗೂಡಿಸಿಕೊಂಡಿರುವುದು ಇವರ ವಚನಗಳ ವಿಶೇಷತೆ ಎನಿಸಿದೆ. ಕಲ್ಯಾಣದ ಅನುಭವ ಮಂಟಪದಲ್ಲಿ ಪ್ರತಿಯೊಬ್ಬರನ್ನು ನಗಿಸುವ ಮೂಲಕ ನೊಂದ ಮನಸ್ಸುಗಳಿಗೆ ಚೈತನ್ಯ ಸಂತೋಷ ತುಂಬುತ್ತಿದ್ದರು. ನಗದವರನ್ನು ನಗಿಸುವುದು ಇವರ ವೈಶಿಷ್ಟ್ಯವಾಗಿತ್ತು. ಎಲ್ಲರನ್ನು ನಗಿಸುವ ಮೂಲಕ ಆರೋಗ್ಯದಾಯಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಮಹಾದಾಸೆ ಹೊಂದಿದ್ದರು. ಇಂತಹ ವಿಶೇಷ ಮನೋಭಾವನೆ ಹೊಂದಿದ್ದ ಇವರನ್ನು ಕಂಡು ಪರೀಕ್ಷಿಸಲು ಶಿವನೇ ವೃದ್ಧ ಜಂಗಮ ವೇಷದಿಂದ ಪಾರ್ವತಿ ಸಹಿತನಾಗಿ ಭೂಮಿಗೆ ಬಂದಾಗ ನಗೆ ಮಾರಿ ತಂದೆ ನಿಂದಾಸ್ತುತಿಯ ಮೂಲಕ ಶಿವನನ್ನು ಅರ್ಚಿಸಿ ಕುಣಿದು ಕುಪ್ಪಳಿಸಿ ವಿದೂಷಕ ಪ್ರತಿಭೆಯಿಂದ ಶಿವನನ್ನು ನಗಿಸಿದ ಎಂದು “ಗುರು ವಿರುಪಾಕ್ಷಿ “ಅಂಕಿತದ ರಗಳೆಯಿಂದ ತಿಳಿದು ಬರುತ್ತದೆ. ಹಾಸ್ಯದ ಮೂಲಕ ಅಧ್ಯಾತ್ಮವನ್ನು ಕಾಣುವುದು ಇವರ ವಚನಗಳ ವಿಶೇಷತೆ ಎನಿಸಿದೆ. ಪರಿಚಿತ ಉಪಮೇಗಳು, ಸರಳವಾದ ಭಾಷೆ, ನೇರವಾದ ಅಭಿವ್ಯಕ್ತಿಯ ಶೈಲಿ ವೈಶಿಷ್ಟ್ಯಗಳು ವಚನಗಳಲ್ಲಿ ಎದ್ದು ಕಾಣುತ್ತದೆ.

ಭತ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೇ ಕಷ್ಟ ಎನ್ನುವ ನಗೆಯ ಮಾರಿತಂದೆ ಈ ಹೊತ್ತು ದೇಹಕ್ಕೆ ನಗೆದು ಚಿತ್ತದ ಕಾಯಕ ಇದನೊಪ್ಪುಗೊ ಮಾರೇಶ್ವರ ಎಂದು ತನ್ನ ಇಷ್ಟ ದೈವದಲ್ಲಿ ವಿನಂತಿಸುವುದನ್ನು ಕಾಣಬಹುದು “ಎನ್ನ ಚಿತ್ತ್ತದಲ್ಲಿ ಕಲೆದೋರಿ ನೀ ನಾಡಿಸಿದಂತೆ ಆಡಿದೆ ನೀ ಕೊಟ್ಟ ಕಾಯುವ ಹೊತ್ತೆ ನೀ ಹೇಳಿದ ಬಿಟ್ಟಿಯ ಮಾಡಿದೆ ನೀನು ಆಡಿಸಿದಂತೆ ಆಡಿದೆ” ಆತುರವೈರಿ ಮಾರೇಶ್ವರ ಎಂಬ ಇನ್ನೊಂದು ವಚನವನ್ನು ಕೂಡ ನಾವಿಲ್ಲಿ ನೋಡಬಹುದು.

ಜ್ಞಾನವನ್ನು ಸಾರುವ ಪುಸ್ತಕ ಓದಿ ಕಟ್ಟುಗಳನ್ನು ವಿರಕ್ತರು ಊರಿಂದ ಊರಿಗೆ ಎತ್ತುಗಳ ಮೇಲೆ ಹೇರಿಕೊಂಡು ಸಾಗುತ್ತಿದ್ದ ಚಿತ್ರವನ್ನು ಇವರು ಒಂದು ವಚನದಲ್ಲಿ ಕೊಟ್ಟಿರುವರು ಹಾಗೆ ತಾಳ್ಮೆ ಸಮಾಧಾನ ಇಲ್ಲದ ವಿರಕ್ತರು ಮಾತಿನಲ್ಲಿ ಆಗಮವನ್ನು ಮನದಲ್ಲಿ ಆಸೆಯನ್ನು ಹೊಂದಿರುತ್ತಿತ್ತು ಇದನ್ನು ಕಂಡು ಇದು ನೀತಿ ಇಲ್ಲವೆಂದು ಎಚ್ಚರಿಸುವರು ಹೇಳಬೇಕಾದನ್ನ ನೇರವಾಗಿ ಹೇಳಲು ಇಚ್ಚಿಸುವವರು ಭತ್ತನಾದವನಿಗೆ ಗುಂಡ,ವಿದೇಶಿ, ದಾಸಿ, ಜೂಜು, ,ಸಂಪತ್ತಿನ ಮೇಲಿನ ಸಂಬಂಧ ಹೊಂದುತ್ತಲೇ ಲಿಂಗಾಂಗ ಸಾಮರಸ್ಯ ಬಯಸುವ ಶರಣರ ಬದುಕನ್ನು ನೇರವಾಗಿ ಪ್ರಶ್ನಿಸುತ್ತಾರೆ. ಇಂತಹ ಮತ್ತೊಂದು ವಚನವನ್ನು ನಾನಿಲ್ಲಿ ವಿಶ್ಲೇಷಣೆ ಮಾಡಬಯಸುವೆ.

- Advertisement -

“ ಎಲ್ಲರಂತೆ ಮಾಡಿ ಮನನ ಗೊಂದಲಾರೆ ಅರಿತು ಮರೆಯಲಾರೆ, ಕಂಡು ಕಾಣದಂತಿರಲಾರೆ, ಹೇಳಿದರೆ ಭಕ್ತರ ತೊಡಕು, ಹೇಳದಿದ್ದರೆ ನಿನ್ನ ತೊಡಕು, ಇಂತಿ ಎರಡರ ನೀರಿನಲ್ಲಿ ಗುರಿಯಾಗಲಾರೆ ಆತುರ ವೈರಿ ಮಾರೇಶ್ವರ”

ಇಲ್ಲಿ ವಚನಕಾರರು ಸಾಮಾನ್ಯ ಭಕ್ತರ ಮನಸ್ಥಿತಿಯನ್ನು ನೇರವಾದ ಮಾತುಗಳಲ್ಲಿ ಸ್ಪಷ್ಟಪಡಿಸುತ್ತಾರೆ. ಏನೆಂದರೆ ನಾನು ಮಾಡಿದೆನು ಎನ್ನುವವರ ಅಹಂಕೆಮಿಕೆಯನ್ನು ಹಾಗೂ ನಾನೇ ಸರ್ವಕ್ಕೂ ಕಾರಣ ಎಂಬ ವಿಚಾರವನ್ನು ಇಲ್ಲಿ ನೇರವಾಗಿ ಟೀಕಿಸುವಂಥ ಒಂದು ಅಂಶವನ್ನು ಕಾಣಬಹುದು. ಅದನ್ನೇ ಈ ರೀತಿಯ ಮಾತುಗಳಲ್ಲಿ ತಿಳಿಸಿದ್ದಾರೆ. ಎಲ್ಲರಂತೆ ಮಾಡಿ ಮನನ ಗೊಂದಲಾರೆ ಎಂಬುದು ನಾನು ಮಾಡಿದೆ ನಾನು ಮಾಡಿದೆ ಎಂದು ಹೇಳುತ್ತಾ ಮನಸ್ಸಿನಲ್ಲಿ ಕುದಿಯಲಾರೆ ಎಲ್ಲಕ್ಕೂ ಸರ್ವ ಕಾರ್ಯಕ್ಕೂ ಸೃಷ್ಟಿಕರ್ತನೆ ಕಾರಣ ಎಂಬ ಇವರ ಶಿವತತ್ವ ಪ್ರತಿಪಾದನೆ ಈ ವಚನದ ಸಾಲಗಳಲ್ಲಿ ವ್ಯಕ್ತವಾಗುವುದನ್ನು ನಾವಿಲ್ಲಿ ಕಾಣಬಹುದು. ಇದಕ್ಕೆ ಮತ್ತೊಂದು ಒಂದು ವಚನದ ಸಾಲನ್ನ ನಾವು ಇಲ್ಲಿ ಉದಾಹರಣೆಯಾಗಿ ನೀಡಬಹುದು “ನಾ ಮಾಡಿದನೆಂಬುದು ಮನದಲ್ಲಿ ಹೊಳೆ ದೊರೆ ಏಡಿಸಿ ಕಾಡಿತ್ತು ಶಿವನ ಡಂಗುರವ ಎನ್ನುವಂತೆ ನಾನೇ ಮಾಡಿದೆ ನಾನೇ ಮಾಡಿದೆ ಎನ್ನುವಲ್ಲಿ ಶಿವನ ಸಾನಿಧ್ಯವನ್ನು ಬಯಸುವ ಶರಣರು ಶಿವನ ಮಾರ್ಗವನ್ನು ಬದುಕಿನ ಸನ್ಮಾರ್ಗವನ್ನು ತಿಳಿದು ತಿಳಿಯದೆ ಇರಲಾರೆ ಅದನ್ನು ಇತರ ಶರಣರ ಜೊತೆಗೆ ಸನ್ಮಾರ್ಗವನ್ನು ಕಾಣುವ ಆಶಾ ಮನೋಭಾವನೆ ಹೊಂದಿರಬೇಕು ಎನ್ನುತ್ತಾರೆ ಅದರಂತೆ ಶಿವನ ಸಂಗವನ್ನು ಶಿವತತ್ವವನ್ನ ಸಾರುವ ಮೂಲಕ ಶಿವನ ಸ್ವರೂಪವನ್ನು ಅರ್ಥೈಸಿಕೊಂಡು ಕಾಣದಂತೆ ನಾನು ಇರಲಾರೆ ಎಂಬ ಅವರ ಅನುಭವವನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು ಜೊತೆಗೆ ಸಮಾಜದ ಜನರಲ್ಲಿ ಇರುವಂತಹ ಈ ಒಂದು ಲೋಪ ದೋಷಗಳನ್ನು ಭಕ್ತರಿಗೆ ನೇರವಾಗಿ ಹೇಳಿದರು ಕಷ್ಟ ಹೇಳದಿದ್ದರೆ ಕಷ್ಟ ಎನ್ನುವ ತಮ್ಮ ಒಂದು ಇಕ್ಕಟ್ಟಿನ ಪರಿಸ್ಥಿತಿಯನ್ನು ಕೂಡ ಇಲ್ಲೇ ಈ ಮಾತುಗಳಲ್ಲಿ ಹೇಳಿರುವಂತದ್ದನ್ನ ನಾವಿಲ್ಲಿ ಗಮನಿಸಬಹುದು ಅದನ್ನೇ ಇಂತಿ ಎರಡರ ಏರಿನಲ್ಲಿ ಗುರಿಯಾಗಲಾರೆ, ಆತುರವೇರಿ ಮಾರೇಶ್ವರ ಎಂಬ ಇಷ್ಟದೈವದೊಂದಿಗೆ ತಮಗೆ ಇರುವಂತಹ ಒಂದು ಪರಿಸ್ಥಿತಿಯನ್ನು ಈ ವಚನದ ಸಾಲುಗಳಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.

“ಕಂಗಳ ಮುಂದಣ ಕಾಮ ಕೊಂದು ಮನದ ಮುಂದಣ ಆಸೆಯ ತಿಂದು ಆತನ ನರಿ ಆತುರವೈರಿ ಮಾರೇಶ್ವರ” ಇಲ್ಲಿ

ಈ ವಚನವು ಅತ್ಯಂತ ಸರಳವಾಗಿ ನೇರ ನುಡಿಯಲ್ಲಿ ಮನಸ್ಸಿನ ಆಸೆಗಳನ್ನು ಲೋಭಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳದಿದ್ದರೆ ಬದುಕು ದುಸ್ತರ ಎನ್ನುವ ಮಾತನ್ನು ಈ ರೀತಿಯಲ್ಲಿ ತಿಳಿಸಿರುವಂತದ್ದನ್ನ ನಾವು ಕಾಣಬಹುದು ಕಣ್ಣಿನ ಮುಂದೆ ಇರುವ ಕಾಮವನ್ನು ತ್ಯಜಿಸಬೇಕು ಮನಸ್ಸು ಬಯಸುವಂತಹ ಒಂದು ಪ್ರೀತಿಯನ್ನು ನಾವು ಅಲ್ಲಗಳಿಯಬೇಕು ಮನಸ್ಸು ಪ್ರತಿಯೊಂದು ಕೂಡ ಅಪೇಕ್ಷಪಡುತ್ತದೆ ಇಲ್ಲ ಆಸೆಯನ್ನು ಈಡೇರಿಸಲು ಅಸಾಧ್ಯ ಹಾಗೆ ಆಸೆ ದುಃಖಕ್ಕೆ ಮೂಲ ಎನ್ನುವ ಹಾಗೆ ಆಸೆಗಳನ್ನು ಈಡೇರಿಸುತ್ತಾ ಹೋದರೆ ಬದುಕು ಯತ್ವಾತದ್ವ ಆಗುವುದು ಖಚಿತ. ಆದ್ದರಿಂದ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ಆಸೆ ಲೋಭ ಪ್ರೀತಿ ಇವುಗಳನ್ನ ತ್ಯಜಿಸಿ ಬದುಕಿನಲ್ಲಿ ಶಿವನ ಪರತತ್ವವನ್ನು ಕಾಣುವುದು ಸರಿಯಾದ ಮಾರ್ಗ ಎಂದು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಅನ್ವಯವಾಗುವ
ಅವರ ಒಂದು ವಚನದ ಸಾಲನ್ನು ನಾವಿಲ್ಲಿ ಅನ್ವಯ ಮಾಡಿಕೊಳ್ಳಬಹುದು. ಮನದ ಮುಂದಣ ಆಸೆಯೇ ಕಾಣಾ ರಾಮನಾಥ ಎನ್ನುವ ವಚನವು ಇದೇ ಅರ್ಥವನ್ನು ತಿಳಿಸುತ್ತದೆ. ಪ್ರಪಂಚಿಕ ಸುಖದ ಬಯಕೆಯನ್ನು ತೊರೆಯಬೇಕೆಂದು ಹೇಳಿದ್ದಾರೆ. ಪ್ರೀತಿ ಕಾಮ ಮೋಹ ಇವುಗಳನ್ನು ತ್ಯಜಿಸಬೇಕು ಹೆಣ್ಣು ಹೊನ್ನು ಮಣ್ಣು ತ್ರಿವಿಧ ತತ್ವದ ಮೇಲಿನ ವ್ಯಾಮೋಹವನ್ನು ಕಳೆಯಲು ಗುರುಲಿಂಗ ಜಂಗಮವನ್ನು ಅನುಸರಿಸಬೇಕು ಎಂಬ ನುಡಿಯು ಈ ಸಾಲುಗಳ ಮೂಲಕ ವ್ಯಕ್ತವಾಗುತ್ತದೆ. ಹೀಗೆ ನಗೆ ಮಾರಿ ತಂದೆಯವರು ಬಹಳ ಸರಳವಾಗಿ ನೇರ ನುಡಿಯಲ್ಲಿ ತಾವು ಕಂಡಂತಹ ಜೀವನದ ಸರಳ ಬದುಕಿನ ಸೂತ್ರಗಳನ್ನು ಬಹಳ ಮನಸ್ಸಿಗೆ ಮುಟ್ಟುವ ಹಾಗೆ ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ ತಮ್ಮ ಸರಳ ವಿಶೇಷ ಕಾರ್ಯಕ್ರಮದ ಮೂಲಕ ಶಿವ ತತ್ವವನ್ನು ಸಾರುವ ಅಂತಹ ಅದ್ಭುತವಾದ ಕಾಯಕವನ್ನು ನಡೆಸುವ ಮೂಲಕ ಸಮಕಾಲೀನರಾಗಿ ಇವರು ನಮಗೆ ಕಂಡುಬರುತ್ತದೆ..

ಡಾ. ವೀರಾಕ್ಷಿ ಎಲ್ ವಿವೇಕಿ,   ಉಪನ್ಯಾಸಕರು, ಬಾದಾಮಿ     ವಚನ ಅಧ್ಯಯನ ವೇದಿಕೆ, ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ

ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group