spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಕೋಲಶಾಂತಯ್ಯ

ಪಶುಪಾಲನೆ ವೃತ್ತಿಯನ್ನು ಕೈಕೋಂಡಿದ್ದ ಕೋಲ ಶಾಂತಯ್ಯನ ಹೆಸರು ವಚನ ಸಾಹಿತ್ಯ ದಲ್ಲಿ ಪ್ರಸಿದ್ಧ ವಾಗಿದೆ
ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರದಲ್ಲಿ ಈತನಿಗೆ ಸಂಬಂಧಿಸಿದ ಕಥೆಗಳು ಇವೆ.
ಕಾಲ.-೧೨ನೆ ಶತಮಾನ
ನಾಮ-ಕೋಲಶಾಂತಯ್ಯ
ಕಸಬು-ಕೋಲನ್ನು ಹಿಡಿದು ಪಶುಗಳನ್ನು ಕಾಯುವ ವೃತ್ತಿಯವನು.ಹಾಗಾಗಿ ಕೋಲಶಾಂತಯ್ಯನೆಂದು ಹೆಸರು ಬಂದಿದೆ. ೧೨ನೇಶತಮಾನದಲ್ಲಿ ಶರಣರ ಕೈಯಲ್ಲಿರುವ ಕೋಲು ಬರಿ ಕೋಲಲ್ಲ ಅದು ಸತ್ಯ ನಿಷ್ಠೆಯ, ಆತ್ಮಸಾಕ್ಷಿಯ ಕೋಲು. ಸತ್ಯ ವನ್ನೆ ನಡೆವೆ ಮತ್ತು ನುಡಿವೆ..ಹಾಗಾಗಿ ಕೋಲು ಇಲ್ಲಿ ಬೆಲೆಯುಳ್ಳದ್ದು.ಅದು ಅವರ ವಚನಗಳ ಆಶಯದಲ್ಲಿ ಮತ್ತೆ ಮತ್ತೆ ಕಾಣಿಸುತ್ತದೆ.

೭೭೦-ಗಣಂಗಳಲ್ಲಿ ಇವನೂಬ್ಬ ಅಪ್ಪಟ ಶಿವಭಕ್ತ.
ವಚನಾಂಕಿತ-ಪುಣ್ಯಾರಣ್ಯದನ ಭೀಮೇಶ್ವರಲಿಂಗ ನಿರಂಗ ಸಂಗ. ಅಂದರೆ ಲೋಕ ವೆಂಬ ಪುಣ್ಯ ಅರಣ್ಯದಲ್ಲಿ ನಮ್ಮನ್ನು ಕಾಡುವ ಮನಚೇಷ್ಟೆಗಳ ಸುಟ್ಟು ಹಾಕಬೇಕಾಗಿದೆ ಭೀಮೇಶ್ವರಲಿಂಗ ಅರಿವಿನ ಸಾಕ್ಷಿಯಾಗಿ ಮೃತ್ಯದಜೀವ ಮರಣದ ಸಂಗ ಹರಿಯಬೇಕಿದೆ.
ಒಟ್ಟು ವಚನಗಳು–೧೦೩
ವಚನಗಳ ವೈಶಿಷ್ಟ್ಯ-
ಬೆಡಗಿನ ವಚನಗಳು ಆಧ್ಯಾತ್ಮಿಕ ಅರುಹಿನ ಕುರುಹು ಹುಡುಕಾಟವಾಗಬೇಕಿದೆ .ಕೃತ್ರಿಮತೆ ಸಲ್ಲವೆಂದು ಹೇಳುತ್ತಾನೆ

- Advertisement -

ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು,
ಉಡುವಿನ ಕುಡಿನಾಲಗೆಯ ಕೊಯಿದು, ಬಳ್ಳುವಿನ ಸೊಲ್ಲನರಿದು
ಇವೆಲ್ಲವ ನಿನ್ನಲ್ಲಿಗೆ ತಂದೆ; ಇವ ಬಲ್ಲವ ನೀನಲ್ಲದಿಲ್ಲ.
ಎನಗೆ ಅಲ್ಲಿಯೊ ಇಲ್ಲಿಯೊ ಮತ್ತೆ ಅಂದು ನೀ ಹೇಳಿದಲ್ಲಿಯೊ
ಎಂಬುದ ನಾನರಿಯೆ, ನೀ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

ಅಂದರೆ ಮನುಷ್ಯ ನ ಬೇಕು ಬೇಡುಗಳ ಚಂಚಲತೆಯೆಂಬ ಕಾಲು ಮುರಿದು ಜೊತೆಗೆ ಕೋಡಗ(ಮಂಗನಂತಿರುವ)ಮನಸ್ಸಿನ ಹಲ್ಲುಕಿತ್ತು, ಲೋಕಸುಖಗಳನ್ಙು ತ್ಯಜಿಸಬೇಕು. ಮುಂದುವರೆದು.
ಉಡದ ಕುಡಿನಾಲಿಗೆಯ ಕೊಯ್ದು ಅಂದರೆ ಮಾನವನ ವಿಷಯವಾಸನೆ ಇಂದ್ರಿಯ ಗೆದ್ದು ಇಂದ್ರಿಯಾತೀತನಾಗಬೇಕು.ಅಲ್ಲದೆ
ಬಳ್ಳ{ನರಿ)ನರಿಯ {ಸೊಲ್ಲ}ದ್ವನಿ ಅರಿದುನಾನೆಂಬ ಅಹಂಕಾರ ಕೂಗಿ ಕೂಗಿ ಹೇಳವವರು ತಮ್ಮ ಸ್ವಾರ್ಥ ಬುದ್ದಿ, ಲಂಪಟತನ ಬಿಡಬಹುದು. (ಅರಿ.)ತಿಳಿದು ಭಕ್ತನಾದವನು ತರುವೆ ಆದರೆ ಇವು ಇಲ್ಲದೆ ನೀನಿಲ್ಲ.ಎಲ್ಲೋ ಇನ್ನೂ ನಿನ್ನೊಳಗಿನ ಅಂತರಂಗದ ಶುದ್ದಿಯ ಕೊರತೆಯಿದೆ.. ನಿನ್ನಲ್ಲಿ ಮನುಷ್ಯ ಲೋಕದ ಲೌಕಿಕ ಆಕಾಂಕ್ಷೆ ಯ ಚಪಲ ಅಷ್ಟು ಸರಳದರಲ್ಲಿ ಬಿಡಲು ಒದ್ದಾಡುವೆ ಎಲೆ ಮನುಜನೆ
ಆ ನೀಚತನಗಳನ್ನು ಸುಟ್ಟು ಹಾಕು ಈ ಬಾಳ ಬುತ್ತಿಯಲಿ ಪುಣ್ಯ ಕಟ್ಟಿಕೊಂಡು ಮುಂದೆ ಉಣಲು ಅಲೌಕಿಕ ಸುಖಪ್ರಾಪ್ತಿಗಾಗಿ ಶರಣಸತಿ ಲಿಂಗ ಪತಿ
ಭಾವವಿರಬೇಕೇಂದು ಈ ವಚನದ ಸಾರ.

ಡಾ. ಕಸ್ತೂರಿ ದಳವಾಯಿ, ಗದಗ.                                ಅಕ್ಕನ ಅರಿವು ವಚನ ಅಧ್ಯಯನ ವೇದಿಕೆ              ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group