spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಅಕ್ಕ ನಾಗಮ್ಮ

ಜನ್ಮಸ್ಥಳ – ಬಾಗೆವಾಡಿಯ ಇಂಗಳೇಶ್ವರ.
ಕಾಲ–ಕ್ರಿ ಶ ೧೧೧೯.
ತಂದೆ ತಾಯಿ -ಮಾದಲಾಂಬಿಕೆ ಮಾದರಸ.
ವಚನಗಳು – ೧೪
ವಚನಾಂಕಿತ – ಬಸವಣ್ಣ ಪ್ರಿಯ ಚನ್ನಸಂಗಯ್ಯ.

12ನೇ ಶತಮಾನ ಒಂದು ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟ ಶತಮಾನವು. ಅಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ವರ್ಣ, ವರ್ಗ, ಲಿಂಗಭೇದವಿಲ್ಲದ ನೈತಿಕ
ಜ್ಞಾನಮಾರ್ಗದಲ್ಲಿ ಸಾಗಿದ 33 ಶರಣೆಯರು ಅನುಭವ ಮಂಟಪದಲ್ಲಿ ರೂಪಿಸಲ್ಪಟ್ಟರು. ಅವರಲ್ಲಿ ಅಕ್ಕನಾಗಮ್ಮಳು ಒಬ್ಬಳು.

- Advertisement -

ಬಸವಣ್ಣನವರು ವಿಶ್ವಗುರು ಎನಿಸಲು
ಇಚ್ಚಾಶಕ್ತಿ, ಜ್ಞಾನಶಕ್ತಿ ಕ್ರಿಯಾಶಕ್ತಿಯಾಗಿರುವ ಅಕ್ಕ ನಾಗಮ್ಮ, ನೀಲಾಂಬಿಕೆ ಗಂಗಾಂಬಿಕೆ ಯರೆ ಕಾರಣಕರ್ತರು.
ಅಕ್ಕನಾಗಮ್ಮ ಬಾಗೆವಾಡಿಯ ಇಂಗಳೇಶ್ವರ ಗ್ರಾಮ ದಲ್ಲಿ ೧೧೧೯ರಲ್ಲಿ ಜನಿಸಿದರು . ಅಕ್ಕನಾಗಮ್ಮಳು ಬಸವಣ್ಣನವರ ಹಿರಿಯ ಸಹೋದರಿ. ಶಿವ ಸ್ವಾಮಿಯ( ಶಿವ ದೇವ) ಜೊತೆ ಲಗ್ನವಾಗಿ ಕೂಡಲಸಂಗಮದ ಬ್ರಹ್ಮಪುರಿ ಯಲ್ಲಿ ನೆಲೆಸಿದ್ದಳು.
ಬಸವಣ್ಣನವರು ಉಪನಯನದ ವೇಳೆ ಅಕ್ಕಳಿಗೂ ಆ ಸಂಸ್ಕಾರ ಕೊಡಬೇಕೆಂದು ಕೇಳಿದಾಗ ತಂದೆ-ತಾಯಿ ಅದಕ್ಕೆ ನಿರಾಕರಿಸಿದಾಗ ಅವರು ಮನೆ ಬಿಟ್ಟು ಕಪ್ಪಡಿ ಸಂಗಮಕ್ಕೆ ಬರುವರು. ಆಗ ಅಕ್ಕನಾಗಮ್ಮ ತಾಯಿಯಂತೆ ಸಲಹಿ ಮಾರ್ಗದರ್ಶಕಳಾಗುವಳು. ಅಲ್ಲಿಯೇ ಚನ್ನಬಸವಣ್ಣನವರ ಜನನವಾಗುವುದು. ನಂತರ ಮಂಗಳವೇಡೆಯಿಂದ ಕಲ್ಯಾಣಕ್ಕೆ ಬಸವಣ್ಣನವರು ಬರುವಾಗ ಅವಳು ಬರುವಳು. ಅಲ್ಲಿಯೇ ದಾಸೋಹದ ವ್ಯವಸ್ಥೆಯ ಮಾಡುತ್ತಾ ಅನುಭವ ಮಂಟಪದ ಮೆಲ್ವಿಚಾರಣೆ ಮಾಡುತ್ತ 14 ವಚನಗಳನ್ನು ರಚಿಸಿದ್ದಾರೆ ಅವೆಲ್ಲವೂ ಮಾತೃ ಪ್ರೇಮ ಸೌಹಾರ್ದತೆಯ ವಚನಗಳಾಗಿವೆ. ಮತ್ತು ಕಲ್ಯಾಣ ಕ್ರಾಂತಿಯ ನಂತರದ ಬಸವಣ್ಣ ಚನ್ನಬಸವಣ್ಣನವರ ಅಗಲಿಕೆಯ ನೋವನ್ನು ಪ್ರತಿಬಿಂಬಿಸುವ ವಚನಗಳನ್ನು ರಚಿಸಿದ್ದಾರೆ. ನೀಲಾಂಬಿಕೆ ಮತ್ತು ಗಂಗಾಂಬಿಕೆ ಯರಿಗೆ ಮಾತೃ ಸ್ವರೂಪಿ ಯಾಗಿದ್ದರು
ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ ಕಲ್ಯಾಣ ತೊರೆದಾಗ ಶರಣ ಸಂಕುಲಗಳ ಮತ್ತು ವಚನಗಳ ಸಂಗ್ರಹ ಗಳ ರಕ್ಷಣೆಗಾಗಿ ಬಿಜ್ಜಳ ನ ಸೈನ್ಯದೊಂದಿಗೆ ಧೈರ್ಯದಿಂದ ಹೋರಾಡಿ ಒಂದು ಶರಣರ ಗುಂಪಿನೊಂದಿಗೆ ಗಂಗಾಂಬಿಕೆ, ಚನ್ನಬಸವಣ್ಣನ ವರೊಂದಿಗೆ ಉಳುವಿಯತ್ತ ಸಾಗುತ್ತಾಳೆ ಕಾದ್ರೋಳ್ಳಿಯಲ್ಲಿ ಗಂಗಾಂಬಿಕೆಯನ್ನು ಕಳೆದುಕೊಳ್ಳುತ್ತಾರೆ
ಉಳುವಿಯಲ್ಲಿ ಚನ್ನಬಸವಣ್ಣನವರನ್ನು ಕಳೆದುಕೊಳ್ಳುತ್ತಾಳೆ. ಬಂಧು ಬಾಂಧವರ ಆತ್ಮೀಯರ ಶರಣರ ಅಗಲಿಕೆಯಿಂದ ನೊಂದ ನಾಗಮ್ಮ ನುಲಿಯ ಚಂದಯ್ಯ ಮತ್ತು ಇತರ ಶರಣರೊಡನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಎಣ್ಣೆ ಹೊಳೆ ಎಂಬಲ್ಲಿಗೆ ಬಂದು ನೆಲೆಸುತ್ತಾರೆ. ಅಲ್ಲಿಯೆ ಮಠವನ್ನು ಸ್ಥಾಪಿಸಿ ಲಿಂಗಾಯತ ಧರ್ಮ ಪ್ರಸಾರ ಮಾಡುತ್ತಾರೆ. ಅಲ್ಲಿಯೇ ಐಕ್ಯಳಾಗುತ್ತಾಳೆ.

ಮನದೊಡೆಯ ಮಹದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು
ಇದಕ್ಕೆ ಕಳವಳಸದಿರು ಮನವೇ ಕಾತರಿಸದಿರು ತನುವೇ
ನಿಜವ ಮರೆಯದಿರು ಕಂಡಾ ನಿಶ್ಚಿಂತನಾಗಿರು ಮನವೇ
ಬಸವಣ್ಣ ಪ್ರಿಯ ಚೆನ್ನಸಂಗಯ್ಯನು ಬೆಟ್ಟನಿತ ಅಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು.

ಮೇಲಿನ ವಚನದಲ್ಲಿ ಅಕ್ಕ ನಾಗಮ್ಮಳು ತನ್ನ ಮನವನ್ನು ಸಂತೈಸುವ ಪರಿಯನ್ನು ತಿಳಿಸಿದ್ದಾಳೆ.
ಮನದೊಡೆಯ ಮಹಾದೇವ ಮನವ ನೋಡಿಹನೆಂದು ಮನುಜರ ಕೈಯಿಂದ ಒಂದೊಂದು
ನುಡಿಸುವನು
ದೇವರು ಸಕಲಜೀವರಾಶಿಯ ಹೃದಯದಲ್ಲಿರುವನು ಕಲ್ಲು ಮಣ್ಣುಗಳಲ್ಲಿ ಇಲ್ಲ. ಭವದಲ್ಲಿ ಹುಟ್ಟಿದ ಬಳಿಕ ಸತ್ಯ ಶುದ್ಧ ಕಾಯಕ ಮಾಡುತ್ತಾ ಸನ್ಮಾರ್ಗದಲ್ಲಿ ತೊಡಗಿ ಆತ್ಮಸಾಕ್ಷಿಯಾಗಿ ಬದುಕುವಾಗ ಮಹಾದೇವನು ಮನವ ಪರೀಕ್ಷಿಸಲು ವಿಧವಿಧವಾಗಿ ಸಿರಿತನ, ಬಡತನ, ರೋಗರು ಜಿನ, ಅಪಮಾನ, ನಿಂದೆ ಇವೆಲ್ಲವನ್ನು ಕೊಟ್ಟು ಪರೀಕ್ಷಿಸುವನು .

- Advertisement -

ಅಕ್ಕಮಹಾದೇವಿ ಹೇಳುವಂತೆ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಕೋಪವ ತಾಳದೆ ಸಮಾಧಾನವಾಗಿರಬೇಕು ಎಂಬಂತೆ, ಜೇಡರ ದಾಸಿಮಯ್ಯ ನವರ ವಚನದಂತೆ ದೇವರು ಭಕ್ತರನ್ನು ಚಿನ್ನದಂತೆ ಒರೆದು, ಕಬ್ಬಿನ ಕೋಲಿನಂತೆ ಅರೆದು, ತಿರಿವಂತೆ ಮಾಡುವ ಇದಕ್ಕೆಲ್ಲ ಬೆದರದೆ ಬೆಚ್ಚದೆ ಇದ್ದೊಡೆ ಕರವಿಡಿದು ಎತ್ತಿಕೊಂಬನು
ಅದರಂತೆ ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸತ್ಯ ಶುದ್ಧವಾಗಿ ಸರ್ವಾಪ೯ಣ ಭಾವದಿಂದ ಬದುಕಿದಾಗ ದೇವರು ಬೆಟ್ಟದಂತ ತಪ್ಪನ್ನು ಸಹ ಮನ್ನಿಸುವನು ಅದಕ್ಕೆ ಕಳವಳಿಸಿದರು ಚಿಂತಿಸದಿರು ನಿಜವನ್ನು ಅರಿತು ನಿಶ್ಚಿಂತವಾಗಿರು ಎಂದು ಅಕ್ಕ ನಾಗಮ್ಮ ನವರು ಹೇಳಿದ್ದಾರೆ.

ಅಯ್ಯ ನಾನಧವೆ, ಅಯ್ಯಯ್ಯ ಕೈಯ ಕೋಲ ಕೊಂಬರೆ?
ಅಯ್ಯ ಎಳೆಗರುವಿನ ಎಳೆಗಂತಿಯ ನೆಳೆದೊಯ್ವರೇ ಭಕ್ತರು?
ಅಯ್ಯಾ ಅಯ್ಯಾ ಎನ್ನಲೊಯ್ವರೇ,
ಬಸವಣ್ಣ ಪ್ರಿಯ ಚೆನ್ನಸಂಗಯ್ಯ.

ಮೇಲಿನ ವಚನದಲ್ಲಿ ಬಸವಣ್ಣನವರು ಐಕ್ಯರಾದ ಸುದ್ದಿ ಕೇಳಿ ರಚಿಸಿದ ವಚನವಿದು
ಅಯ್ಯಾ ನಾನು ಅದವೆ
ಅಯಯ್ಯ ಕೈಯ ಕೋಲ ಕೊಂಬರೆ
ತಾನು ಇಲ್ಲಿ ಅನಾಥೆ, ಅದವೇ (ವಿಧವೆ). ತನಗೆ ಬಸವಣ್ಣ ಕೋಲಿನಂತೆ ಆಸರೆ ಯಾಗಿದ್ದರು ಅವರ ಐಕ್ಯದ ನಂತರ ನಾನು ಸಂಪೂರ್ಣ ಅನಾಥಳಾದೆ. ಬಸವಣ್ಣನವರನ್ನು ಎಳೆಗರುವಿಗೆ ಹೋಲಿಸುತ್ತಾರೆ. ಚೆನ್ನ ಸಂಗಯ್ಯ ನನ್ನ ಎಳೆಗರುವಿನಂತಿದ್ದ ಬಸವಣ್ಣನನ್ನು ನನಗಿಂತ ಮೊದಲೇ ಕರೆದುಕೊಂಡು ಹೊದಿಯಲ್ಲ ಎಂದು ಅತಿ ನೋವಿನಿಂದ ಪ್ರಲಾಪಿಸುತ್ತಾಳೆ.  ( ಚಿತ್ರ ಕೃಪೆ : ಫೇಸ್ ಬುಕ್ )

ಸರಸ್ವತಿ ಬಿರಾದಾರ.
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು
ಬಸವಾದಿ ಶರಣರ ಚಿಂತನ ಕೂಟ.

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group