spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಮೆರೆಮಿಂಡ ದೇವಯ್ಯ

ಕಲ್ಯಾಣದ ಬಸವಾದಿ ಪ್ರಮುಖರ ಹಿರಿಯ
ಸಮಕಾಲೀನನಾಗಿದ್ದ ತಮಿಳುನಾಡಿನ ಚಂಗೋಟೆಯ ಮೆರಮಿಂಡ ದೇವರು 63 ಪುರಾತನರಲ್ಲಿ ಒಬ್ಬರೆoದು ಪರಿಗಣಿತನಾಗಿದ್ದಾರೆ.

ಒಂದು ಕಾಲದಲ್ಲಿ ಸುಂದರ ನಂಬಿಯಣ್ಣ ಮತ್ತು ಗಂಡು ಗಚ್ಚೆಯ ಮೆರೆಮೆಂಡದೇವರು ತಮ್ಮ ತಿರುಪಾಡುಗಳಿಂದ ತಮಿಳು ನಗರಗಳಲ್ಲಿ ಶಿವ ಭಕ್ತಿಯ ಹುಚ್ಚು ಹೊಳೆಯನ್ನು ಹರಿಸಿದವರು. ಅಂತಹ ಕಡು ನಿಷ್ಠೆಯ ಮೆರೆಮಿಂಡ ದೇವರು ಕಲ್ಯಾಣಕ್ಕೂ ಆಗಮಿಸಿ ಅನುಭವ ಮಂಟಪದಲ್ಲಿ ಭಾಗವಹಿಸಿ ಶಿವಶರಣರೊಡನಾಡಿ ಕನ್ನಡದಲ್ಲಿ ಅರ್ಥಪೂರ್ಣ ವಚನಗಳನ್ನು ಬರೆದು ಕುತೂಹಲಕಾರ ಕುತೂಹಲಕರವಾದುದಾದರೂ ಸತ್ಯ ಸಂಗತಿಯಾಗಿದೆ.,

- Advertisement -

ತಮಿಳುನಾಡಿನ ಮಾದಾರ ಚೆನ್ನಯ್ಯ ಶ್ರೇಷ್ಠ ಕನ್ನಡ ವಚನಗಳನ್ನು ಬರೆಯಬಹುದಾಗಿದ್ದರೆ ತಮಿಳುನಾಡಿನ ಮೆರೆಮಿಂಡಯ್ಯ ಕನ್ನಡ ವಚನಗಳನ್ನು ಬರೆದುದರಲ್ಲಿ ಸಂದೇಹವೇನೂ ಇಲ್ಲ.ಅವರ ಅಂಕಿತದಲ್ಲಿ ಈಗಾಗಲೇ 110 ಕನ್ನಡ ವಚನಗಳು ಲಭ್ಯವಾಗಿವೆ. ವಚನ ರಚನೆಯ ಜೊತೆಗೆ ಮೆರಮಿಂಡದೇವರು ನ್ಯಾಯನಿಷ್ಟುರಿ ಮತ್ತು ದಾಕ್ಷಿಣ್ಯ ಪರನಲ್ಲದ ಧೈರ್ಯಶಾಲಿ ಶಿವ ಭಕ್ತನಾಗಿದ್ದರು. ಅವರು ಎಂತಹ ಶಿವ ಭಕ್ತರೆoದರೆ ನಿತ್ಯ ಶಿವರಾತ್ರಿ ಆಚರಿಸುವ ನೇಮ ಕೈಕೊಂಡಿದ್ದರು.

” ಐಗಟ ದೂರ ರಾಮೇಶ್ವರ ಲಿಂಗ ” ಎಂಬುದು ಮೆರೆಮಿಂಡ ದೇವರ ವಚನಾoಕಿತ. ಈ ಘಟ ಪಂಚಭೂತಗಳಿಂದಾಗಿದೆ. ವಾಯು,ನೆಲ, ಜಲ,ಅಗ್ನಿ, ಆಕಾಶಗಳಿಂದ ದೇಹವಾಗಿರುವುದರಿಂದ ಈ ದೇಹ ಐಘಟದ ಊರಾಗಿದೆ . ಈ ಊರಲ್ಲಿ ವಾಸಿಸುವವನೇ ರಾಮೇಶ್ವರ.

ವಚನ ವಿಶ್ಲೇಷಣೆ

- Advertisement -

ಅಸಿಯಾಗಲಿ, ಕೃಷಿಯಾಗಲಿ ಯಾಚಕ,ವಾಣಿಜ್ಯ
ಮಸಿಯಾಗಲಿ,ಕಾಯಕದಳು ಹುಸಿ ಇಲ್ಲದಿರಬೇಕು
ಅದು ಅಸಮಾಕ್ಷನ ಬರವು, ಪಶುಪತಿ ಇರುವು
ಐಘಟ ದೂರ ರಾಮೇಶ್ವರ ಲಿಂಗ ತಾನೇ !

ಶರಣ ಮೆರೆಮಿಂಡ ದೇವ ಅವರು ಕಾಯಕದ ಬಗ್ಗೆ ಹೊಸ ವ್ಯಾಖ್ಯಾನವನ್ನೇ ಕೊಡುತ್ತಿದ್ದಾರೆ. ದುಡಿಯುವುದೆಲ್ಲ ಕಾಯಕವಲ್ಲ, ಗಳಿಸುವುದಲ್ಲ ಕಾಯಕವಲ್ಲ ,ಬೆವರು ಸುರಿಸುವುದು ಕಾಯಕವಲ್ಲ, ದುಡಿಯುವುದು ವೃತ್ತಿ ಅನಿಸುತ್ತದೆ.ಗಳಿಸುವುದು ಉಪಜೀವನವೆನಿಸುತ್ತದೆ ಮತ್ತು ಬೆವರು ಸುರಿಸುವುದು ಗೆಯ್ಮೆ ಎನಿಸುತ್ತದೆ.

ಶಿವಶರಣ ನುಲಿಯ ಚಂದಯ್ಯ ನ ಅಭಿಪ್ರಾಯದ ಪ್ರಕಾರ ಗುರುವಾದವನೂ ಕಾಯಕ ಮಾಡಿದಾಗ ಮಾತ್ರ ಜೀವನ್ಮುಖನಾಗುವನು. ಲಿಂಗವಾದರೂ ಕಾಯಕ ಮಾಡಿದಾಗಲೇ ಶಿಲೆಯ ಕುರುಹು ಹರಿಯುವುದು. ಜಂಗಮವಾದರೂ ಕಾಯಕ ಮಾಡಿದಾಗಲೇ ವೇಷದ ಪಾಶ ಹಿಂಗುವುದು..ಈ ರೀತಿ ಕಾಯಕ ಸರ್ವತ್ರ ವ್ಯಾಪಕವಾದುದಾಗಿದೆ. ಕಾಯಕದಿಂದ ಯಾರಿಗೂ ವಿನಾಯಿತಿ ಇಲ್ಲ. ಲಿಂಗವೂ ಕಾಯಕ ಮಾಡಬೇಕು ಎಂದು ಹೇಳಿದುದರಿಂದ ದೇವರಿಗೂ ಕಾಯಕ ಕಡ್ಡಾಯವೆಂಬುದಾಗುತ್ತದೆ. ನಿಜವಾದ ಭಕ್ತರ ಮೊರೆ ಕೇಳಿ ಅವರ ದುಃಖ ದುಮ್ಮಾನಗಳನ್ನು ದೇವರುದೂರ ಮಾಡಬೇಕು. ಇದೇ ಆತನ ಕಾಯಕ.

ಪ್ರಸ್ತುತ ವಚನದಲ್ಲಿ ಶರಣ ಮೆರೆಮಿಂಡದೇವರು ಕಾಯಕವೇ ಸ್ವತ: ದೇವರು ಎಂಬ ಮಾತನ್ನು ಹೇಳುತ್ತಿದ್ದಾರೆ. ಕಾಯಕ ಐಘಟದೂರ ರಾಮೇಶ್ವರ ಲಿಂಗ ತಾನೇ ! ಎಂದು ಹೇಳುತ್ತಿದ್ದಾರೆ.ಇಲ್ಲಿ ಅಸಿ ಎಂದರೆ ಕತ್ತಿ ಅರ್ಥಾತ್ ಸೇನಾ ಹುದ್ದೆ, ಕೃಷಿ ಎಂದರೆ ಒಕ್ಕಲುತನ, ಯಾಚಕ ಎಂದರೆ ಭಿಕ್ಷುಕಾಯಕ. ಇಲ್ಲಿ ವಾಚಕ ಎಂಬ ಪಾಠಾಂತರವೂ ಇದೆ. ಓದುವುದು ಎಂಬುದಾಗುತ್ತದೆ. ಪುರಾಣ ಪ್ರವಚನದಲ್ಲಿ ಕಾವ್ಯವನ್ನು ವಾಚನ ಮಾಡುವುದು, ಹಿಂದಿನ ಕಾಲದಲ್ಲಿ ರಾಜ ಮಹಾರಾಜರಿಗೆ ಬೇರೆ ಕಡೆಯಿಂದ ಬಂದ ನಿರೂಪಗಳನ್ನು ಓದಿ ಹೇಳುವುದು ವಾಚಕ ಹುದ್ದೆ ಎನಿಸುತ್ತದೆ ಇತ್ಯಾದಿ.

ಯಾಚಕ ಎಂದರೆ ಭಿಕ್ಷು ಎಂದಾಗುವುದರಿಂದ ಕೆಲವರು ಭಿಕ್ಷೆಯು ಕಾಯಕವಾಗಲಾರದೆಂದು ವಾದಿಸುತ್ತಾರೆ.ಭಿಕ್ಷೆಯಲ್ಲಿ ಉತ್ಪಾದನಾ ಅಂಶ ಇರುವುದಿಲ್ಲವಾದುದರಿಂದ ಕಾಯಕವಾಗಲಾರದೆಂಬುದು ಅವರ ತಿಳುವಳಿಕೆ. ಒಂದು ವೇಳೆ ಭಿಕ್ಷೆಯಲ್ಲಿ ಸ್ವಾರ್ಥವಿರದಿದ್ದರೆ,ಅತ್ಯಾಸೆ ಇರದಿದ್ದರೆ,ಸುಳ್ಳು ವಂಚನೆ ಇರದಿದ್ದರೆ ಮತ್ತು ಅಂತಿಮವಾಗಿ ಭಿಕ್ಷೆಯಿಂದ ಬಂದುದನ್ನು ದಾಸೋಹ ಭಾವದಿಂದ ಹಂಚಿಕೊಂಡು ಉಣ್ಣುತ್ತಿದ್ದರೆ ಭಿಕ್ಷೆಯೂ ಯೋಗ್ಯ ಕಾಯಕವೆನಿಸಿಕೊಳ್ಳುತ್ತದೆ.

ಯಾವುದೇ ಕಾರ್ಯವಾಗಲಿ ಕಾಯಕದ ಅಂಶಗಳಿದ್ದಾಗ ಅದು ಕಾಯಕವೇನಿಸುತ್ತದೆ. ವ್ಯಾಪಾರವೂ ಇದ್ದಲಿ ಮಾರಾಟವೂ ಸಮಾನವಾದವುಗಳು. ಕಾಯಕಗಳಲ್ಲಿ ಮೇಲು ಕೀಳುಗಳಿಲ್ಲ.ನ್ಯಾಯಾಧೀಶನು ತನ್ನ ವೃತ್ತಿಯಲ್ಲಿ ಹುಸಿ,ಮೋಸ ಬಳಸುತ್ತಿದ್ದರೆ ಅವನದು ಕೀಳು ಕಾಯಕ. ಅದೇ ನ್ಯಾಯಾಧೀಶನ ಕೈ ಕೆಳಗಿನ ಸೇವಕ ತನ್ನ ಕಾರ್ಯದಲ್ಲಿ ಸತ್ಯ ಶುದ್ಧ ಪ್ರಾಮಾಣಿಕನಾಗಿದ್ದರೆ ಪರಮಾತ್ಮನ ದೃಷ್ಟಿಯಲ್ಲಿ ಆತ ಕಾಯಕಯೋಗಿ. ಹೀಗೆ ಯಾವುದೇ ಕಾಯಕವನ್ನು ಹೇಗೆ ಕೈಗೊಳ್ಳುತ್ತಿದ್ದೇವೆ ಎಂಬುದು ಮುಖ್ಯವಾಗುವುದೇ ಹೊರತು ಏನು ಕೈಕೊಂಡಿದ್ದೇವೆ ಎಂದು ಮುಖ್ಯವಾಗುವುದಿಲ್ಲ.

ನುಲಿಯ ಚಂದಯ್ಯನವರು ತಮ್ಮ ಮತ್ತೊಂದು ವಚನದಲ್ಲಿ ಕಂದಿಸಿ,ಕುoದಿಸಿ,, ಬಂಧಿಸಿ, ನೋಯಿಸಿ, ಕಂಡ ಕಂಡವರ ಬೇಡಿ ತಂದು ಜಂಗಮಲಿಂಗಕ್ಕೆ ಮಾಡಿಹೆನೆಂಬ ದಂದುಗದ ಮಾಟ ಲಿಂಗನೈವೇ ದ್ಯಕ್ಕೆ ಸಲ್ಲದು… ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಕ್ಕೆ ಅರ್ಪಿತವಲ್ಲದೆ ದುರಾಸೆಯಿಂದ ಬಂದುದು ಅನರ್ಪಿತ – ಎಂದ ರೀತಿಯಲ್ಲಿ ಕಾಯಕವೆಂದು ಅನಿಸಿಕೊಳ್ಳುವುದು ಗಳಿಕೆಯಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇದ್ದಾಗಲೇ ಹೊರತು ಆಡಂಬರದ ವೆಚ್ಚದಿಂದ ಬಯಲಾಡoಬರದ ದಾನದಿಂದ ಯಾವ ಸಾರ್ಥಕತೆಯೂ ಉಂಟಾಗಲಾರದು.ಇಂತಹ ಕಾಯಕ ಪ್ರೇಮಿಗಳಿಗೆ ಮಾತ್ರ ಪರಮಾತ್ಮ ಒಲಿಯುವನು.

ಸುಧಾ ಪಾಟೀಲ.                                                 ವಿಶ್ವಸ್ಥರು,                                                              ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group