spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶರಣೆ ಅಮುಗೆರಾಯಮ್ಮ

ಗುರು ಬಸವಣ್ಣನವರು ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕರು. ಗುರು ಬಸವಣ್ಣನವರು ಒಬ್ಬ ಸಮಾಜವಾದಿ ಪ್ರಜಾವಾದಿ, ಸಾಮಾಜಿಕ ನ್ಯಾಯ ಪರಿಪಾಲಕ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ವಿಶ್ವದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿದ ವಿಶ್ವಚೇತನರಾಗಿ, ಜಾತಿ ವ್ಯವಸ್ಥೆಯ ವಿರುದ್ಧ ಹಾಗೂ ಮೂಢನಂಬಿಕೆ ಸಾಮಾಜಿಕ ತಾರತಮ್ಯದ ವಿರುದ್ಧ ಜನಪರವಾದ ಕಾಯಕ ಸೇವೆ ಮಾಡಿದ್ದ ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಗುರು ಬಸವಣ್ಣನವರು.

ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡಿ, ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹಿಸಿದರು. ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ ಶೋಷಣೆಗಳನ್ನು ಕಂಡು ಶರಣರು, ದೇಹದಿಂದ ಮಾತ್ರ ಸ್ತ್ರೀ ಪುರುಷ ಎಂಬ ಭೇದ ಮಾಡಬಹುದು ಆದರೆ ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಎಂದು ಸಾರಿದರು. ಇದರಿಂದಾಗಿ ಅನೇಕ ಕೆಳ ವರ್ಗದ ಜನರು ಕೂಡ ಶಿಕ್ಷಣ ಪಡೆದು ವಿದ್ಯಾವಂತರಾದರು.

- Advertisement -

ಶರಣೆ ಅಮುಗೆ ರಾಯಮ್ಮ ನವರು ಒಬ್ಬ ಮಹಿಳೆಯಾಗಿ ಶಿಕ್ಷಣವನ್ನು ಪಡೆದು, ವಚನಗಳನ್ನು ರಚನೆ ಮಾಡಿದ್ದಾರೆ. ಅಮುಗೆರಾಯಮ್ಮ ತಾಯಿ ಯವರ ಸಂಕ್ಷಿಪ್ತ ಜೀವನ ಚರಿತ್ರೆ. ಇವರ ಕಾಲ 12ನೇ ಶತಮಾನ. ಗುರು ಬಸವಣ್ಣನವರ ಸಮಕಾಲೀನರು. ಅಮುಗೆರಾಯಮ್ಮ ನವರು ಸೊನ್ನಲಿಗೆ ಈಗಿನ ಸೊಲ್ಲಾಪುರ ಊರಿನವರು. ಇವರು ನೇಕಾರ ಕುಲದವರು. ಇವರ ಪತಿ ಅಮುಗೆ ದೇವಯ್ಯನವರು. ಇವರ ಮೊದಲ ಹೆಸರು ವರದಾನಿಯಮ್ಮ. ಇವರ ವಚನಗಳ ವಚನಾಂಕಿತ, ಅಮುಗೆಶ್ವರ ಲಿಂಗ.

ರಾಯಮ್ಮನವರು 116 ವಚನಗಳನ್ನು ರಚಿಸಿದ್ದು, ಈ ವಚನಗಳು ಆಚಾರ ಪ್ರಧಾನವಾಗಿವೆ. ಇವರು ಕಲ್ಯಾಣಕ್ಕೆ ಬರಲು ಕಾರಣವೆಂದರೆ ಅಮುಗೆ ರಾಯಮ್ಮ ಮತ್ತು ದೇವಯ್ಯ ದಂಪತಿಗಳು ಸೊನ್ನಲಿಗೆಯಲ್ಲಿ ನೇಕಾರ ಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಸೊನ್ನಲಿಗೆಯ ಅಧಿಪತಿ ಸಿದ್ದರಾಮೇಶ್ವರರು, ಅವರು ಮಲ್ಲಿಕಾರ್ಜುನನಿಗೆ ಮಹಾಪರ್ವ ಮಾಡಬೇಕೆಂದುಕೊಂಡರು. ಅವರು ಕೆಲವು ಸಾಮಗ್ರಿಗಳನ್ನು ತಂದು ಅವುಗಳನ್ನುಕುಟ್ಟುವ, ಹಸನು ಮಾಡುವ ಕಾರ್ಯವನ್ನು ಊರಿನ ಸಮಸ್ತ ಜನರಿಗೆ ಹಂಚಿದರಂತೆ. ಭತ್ತ ಕುಟ್ಟುವ ಕೆಲಸ ಅಮುಗಿ ದೇವಯ್ಯನವರ ಪಾಲಿಗೆ ಬಂತು. ಆದರೆ ಅವರು ಸಿದ್ದರಾಮೇಶ್ವರರು ಇಷ್ಟಲಿಂಗ ಧರಿಸಿ ಲ್ಲದ ಕಾರಣ, ಭತ್ತ ಕುಟ್ಟಲಾರೆ ಎಂದು ಭತ್ತವನ್ನು ಹಿಂತಿರುಗಿಸಿದರು. ಇದರಿಂದ ಸಿದ್ಧರಾಮೇಶ್ವರರು ಕೋಪಗೊಂಡು ಸೊನ್ನಲಿಗೆ ಊರಿನಿಂದ ಬಹಿಷ್ಕಾರ ಹಾಕಿದರು. ಅಮುಗೆ ದೇವಯ್ಯನವರು ಕಲ್ಯಾಣಕ್ಕೆ ಹೋಗುವ ನಿರ್ಧಾರ ಮಾಡಿ ತಮ್ಮ ಸಾಮಾನುಗಳನ್ನೆಲ್ಲ ಕಟ್ಟಿದರು. ಅವು ಮೂರು ಗಂಟು ಆದವು. ರಾಯಮ್ಮನವರು ಕೇಳಿ ದರು, ಇವು ಮೂರು ಗಂಟು ಆಗಿವೆ, ನಾವು ಇರುವುದು ಇಬ್ಬರೇ ಈ ಮೂರನೇ ಗಂಟನ್ನು ಯಾರು ತೆಗೆದುಕೊಂಡು ಬರ್ತಾರೆ. ಎಂದಾಗ ಅಮುಗೆ ದೇವಯ್ಯನವರು ಆ ಗಂಟನ್ನು ಲಿಂಗಯ್ಯ ತಾನೇ ನೋಡಿಕೊಳ್ಳುತ್ತಾನೆ ಎಂದು ದಂಪತಿಗಳು ಕಲ್ಯಾಣಕ್ಕೆ ಬಂದರು. ಇವರು ಬರುವುದಕ್ಕಿಂತ ಮುಂಚೆ ಆ ಗಂಟು ಕಲ್ಯಾಣದಲ್ಲಿ ಇತ್ತಂತೆ. ಇದರಿಂದ ಅಮುಗೆ ರಾಯಮ್ಮ ದಂಪತಿಗಳು ಇಷ್ಟ ಲಿಂಗದಲ್ಲಿ ನಿಷ್ಠೆ, ಭಕ್ತಿ ಮತ್ತು ಅಪಾರವಾದ ನಂಬಿಕೆಯನ್ನು ಇಟ್ಟಿದ್ದರು ಎಂದು ತಿಳಿಯುತ್ತದೆ. ಮುಂದೆ ಕೆಲ ಕಾಲ ಕಲ್ಯಾಣದಲ್ಲಿ ಇದ್ದು ಬಳಿಕ ಪುಳಜೆಯಲ್ಲಿ ಲಿಂಗೈಕ್ಯರಾದರು. ‌.

ಅಂಗದ ಅಪ್ಯಾಯನ ‌ಕ್ಕೆ ಲಿಂಗವ ಮರೆತು ತಿರುಗುವ ಭಂಡ ಭವಿಗಳ ನೀ ಏನೆಂಬೇನಯ್ಯ,? ಲಿಂಗದಲ್ಲಿ ನಿತ್ಯರಲ್ಲ, ಜಂಗಮದಲ್ಲಿ ಪ್ರೇಮಿಗಳಲ್ಲ,!

- Advertisement -

ಹಿಡಿದ ಛಲದಲ್ಲಿ ಕಡುಗಲಿಗಳಲ್ಲ ಮೃಡನ ಕಂಡೆನೆಂಬ ಮೂರ್ಖರ ಮುಖವ ನೋಡಲಾಗದು. ಅವರಡಿಯ ಮೆಟ್ಟಲಾಗದು ಅಮುಗೇಶ್ವರ.

ಅಂಗದ ಸುಖ, ತೃಪ್ತಿಗಾಗಿ ಲಿಂಗವನ್ನು ಮರೆತು ತಿರುಗುವವರು ಬಂಡ ಭವಿಗಳು, ಅವರನ್ನು ಭಕ್ತರೆನ್ನಲು ಆಗುವುದಿಲ್ಲ. ನಿತ್ಯಲಿಂಗ ಅರ್ಚನೆ ಮಾಡುವವರಲ್ಲ, ಜಂಗಮ ಎಂದರೆ ಈ ಸಮಾಜ ಸೇವೆಯಲ್ಲಿ ತೊಡಗುವವರಲ್ಲ. ಲಿಂಗ ಜಂಗಮದಲ್ಲಿ ನಿಷ್ಠೆ ಇಲ್ಲದ ಕಾರಣವಾಗಿ ಇವರಲ್ಲಿ ಛಲ ಹುಟ್ಟುವುದಿಲ್ಲ. ಛಲವೆ ಇಲ್ಲವೆಂದ ಮೇಲೆ ಸಾಧಿಸುವ ಪಡೆಯುವ ಧೈರ್ಯ ಇರುವುದಿಲ್ಲ. ಇಂತಹವರು ನಾನು ಆ ಪರಮಾತ್ಮನನ್ನು ಕಂಡೆ, ಅನುಭವಿಸಿದೆ ಎಂದು ಬೂಟಾಟಿಕೆಯ ಮಾತುಗಳನ್ನಾಡುವವರ ಮುಖವನ್ನು ನೋಡುವುದೇ ಮೂರ್ಖತನವಾಗುತ್ತದೆ. ಅವರು ನಡೆದ ಮಾರ್ಗದಲ್ಲಿ ಕೂಡ ನಡೆಯಬಾರದು ಎಂದು ಅಮುಗೆ ರಾಯಮ್ಮ ತಾಯಿಯವರು ಈ ವಚನದಲ್ಲಿ ಹೇಳುತ್ತಾರೆ .

ಸವಿತಾ ಎಸ್. ಬಿ , ಬೆಂಗಳೂರು                                 ವಚನ ಅಧ್ಯಯನ ವೇದಿಕೆ,                                      ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group