spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ವಚನಕಾರ ಗುಪ್ತ ಮಂಚಣ್ಣ

ಗುಪ್ತ ಮಂಚಣ್ಣ ಬಸವಣ್ಣನವರ ಸಮಕಾಲಿನವರು. ಇವರು ಬಿಜ್ಜಳನ ಆಸ್ಥಾನದ ಭಂಡಾರದ ಕರಣಿಕನಾಗಿದ್ದ ದಾಮೋದರ ಹಾಗೂ ಅವನ ಪತ್ನಿ ಮಾಯಾವಾದಿಯ ಮಗ. ಈ ದಂಪತಿಗಳು ವೈಷ್ಣವರಾಗಿದ್ದರು. ದಂಪತಿಗಳಿಗೆ ಮಕ್ಕಳಿಲ್ಲದಿದ್ದಾಗ ಅವನ ತಾಯಿ ಗುಪ್ತವಾಗಿ ಶಿವನ ಆರಾಧಿಸಿ ಮಂಚಣ್ಣನನ್ನು ಪಡೆಯುತ್ತಾಳೆ. ವೈಷ್ಣವ ಮತದ ಪ್ರಕಾರ ಜಾತಕರ್ಮಾದಿಗಳು 8ನೇ ವಯಸ್ಸಿಗೆ ಉಪನಯನವು ಆದವು. ,”ಬೆಳೆಯುವ ಸಿರಿ ಮೊಳಕೆಯಲ್ಲಿಯಂತೆ” ಇವನು ಅತ್ಯಂತ ಕುಶಾಗ್ರಮತಿಯಾಗಿದ್ದನು. ಇದನ್ನು ಕಂಡ ಬಿಜ್ಜಳನು ಇವನನ್ನು ತನ್ನ ಪತ್ರ ವ್ಯವಹಾರಗಳನ್ನು ನೋಡಿಕೊಳ್ಳುವ ನಿಯೋಗಿಯಾಗಿ ನೇಮಿಸಿದನು.

ವೈಷ್ಣವನಾಗಿದ್ದರು ಕೂಡ ಅವನು ಶಿವ ಭಕ್ತಿಗೆ ಮಾರುಹೋಗಿದ್ದನು, ಅದನ್ನು ಬಹಿರಂಗವಾಗಿ ಹೇಳಿಕೊಳ್ಳದೆ ಮತ್ತು ಒಪ್ಪಿಕೊಳ್ಳದೆ ಗುಪ್ತವಾಗಿ ಲಿಂಗಧಾರಣೆ ಹೊಂದಿ ಶಿವಪೂಜೆಯನ್ನು ಮಾಡುತ್ತಿದ್ದನು. ಹೀಗೆ ಶಿವ ಪೂಜೆ ಮಾಡುತ್ತಿರುವ ವೇಳೆ ಒಬ್ಬ ವೈಷ್ಣವನಿಗೆ ಅನುಮಾನ ಬಂದು ಅವನ ಮನೆಯ ಮೇಲಿನ ಕಿಂಡಿಯಿಂದ ನೋಡಿದಾಗ ದಂಪತಿಗಳಿಬ್ಬರು ಶಿವಪೂಜೆಯಲ್ಲಿ ತೊಡಗಿರುವುದು ಕಂಡಿತು, ಇವರ ಗುಪ್ತ ಭಕ್ತಿ ಬಯಲಾಯಿತು. ಈ ವಿಷಯವನ್ನು ತಿಳಿದ ಸೊಡ್ಡಲ ಬಾಚರಸ, ಮಧುವರಸ, ಚನ್ನಬಸವಣ್ಣ ಮೊದಲಾದವರು ಮಂಚಣ್ಣನ ಮನೆಗೆ ಬಂದು ಬಾಗಿಲು ತೆರೆಯಲು ಪ್ರಾರ್ಥಿಸುವರು, ತೆಗೆಯದಿದ್ದಾಗ ಬಾಗಿಲು ಮುರಿದು ಒಳಗೆ ಪ್ರವೇಶಿಸಿದರು. ತಮ್ಮ ಗುಪ್ತ ಭಕ್ತಿ ಬಯಲಾದ ಕಾರಣ ಮಂಚಣ್ಣ ದಂಪತಿಗಳು ಪ್ರಾಣ ತ್ಯಜಿಸಿದರು. ವೈಷ್ಣವರು ಮಂಚಣ್ಣನ ಶವದಹನಕ್ಕೆ ಒಪ್ಪದಿದ್ದಾಗ ಬಸವಣ್ಣನೇ ಸಂಸ್ಕಾರ ನೆರವೇರಿಸಲು ಮುಂದಾಗುವನು, ಆದರೆ ಬಸವಣ್ಣನ ಹಸ್ತ ಸ್ಪರ್ಶದಿಂದ ದಂಪತಿಗಳು ಮರಳಿ ಜೀವ ಪಡೆಯುವವರು ನಂತರ ಬಹಿರಂಗವಾಗಿಯೇ ಅನುಭವ ಮಂಟಪದ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವರು. ಕಲ್ಯಾಣದಲ್ಲಿಯೇ ಸಮಾಧಿಸ್ಥನಾಗುವನು.

- Advertisement -

ಇವನು ಬರೆದ ವಚನಗಳು 104. ಇವರ ಅಂಕಿತನಾಮ ನಾರಾಯಣ ಪ್ರಿಯರಾಮನಾಥ.
ವೈಷ್ಣವನಾಗಿದ್ದ ಮಂಚಣ್ಣ ಶಿವಭಕ್ತನಾಗಿ ಪರಿವರ್ತಿತನಾದ ಘಟ್ಟದ ಅವನ ಮಾನಸಿಕ ಸ್ಥಿತಿ ಅವನ ವಚನಗಳ ಮೂಲಕ ನಮಗೆ ಪರಿಚಯವಾಗುತ್ತದೆ. ಅವರ ಭಕ್ತಿಯ ವೈವಿಧ್ಯಮಯವಾದ ಮುಖಗಳು ಅವರ ವಚನಗಳಲ್ಲಿ ಹೃದ್ಯವಾಗಿ ಮೂಡಿಬಂದಿದೆ. ಅಲ್ಲಿ ಭಗವಂತನಿಗಾಗಿ ಹಂಬಲಿಸುವ ಭಕ್ತನ ಮೊರೆಯಿದೆ. ಮಂಚಣ್ಣ ದಂಪತಿಗಳು ಸತಿಪತಿಗಳೊಂದಾದ ಭಕ್ತಿ ಹಿತವಾಗಿತ್ತು ಶಿವಂಗೆ ಎನ್ನುವಂತೆ ಬದುಕಿದ್ದರು. ಇವರ ವಚನಗಳಲ್ಲಿ ತ್ರಿವಿಧ ದಾಸೋಹದ ಭಾವವನ್ನು ಕಾಣಬಹುದು.

“ಗುರುವಿಂಗೆ ತನು ಲಿಂಗಕ್ಕೆ ಮನ ಜಂಗಮಕ್ಕೆ ಧನ ಇಂತಿ ತ್ರಿವಿಧವ ಕೊಟ್ಟು ಕೃತಾರ್ಥoಗೆ ನಮೋ ನಮ ಎಂದು ಬದುಕಿದೆ ನಾರಾಯಣ ಪ್ರಿಯ ರಾಮನಾಥ”.

ಈ ವಚನದಲ್ಲಿ ಗುರು,ಲಿಂಗ ಮತ್ತು ಜಂಗಮಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ರೀತಿಯನ್ನು ಹೇಳಿದ್ದಾನೆ.
“ವಚನದಲ್ಲಿ ನಾಮಾಮೃತ ತುಂಬಿ” ಎಂಬುವ ಬಸವಣ್ಣನವರ ವಚನದಲ್ಲಿ ನಾಲಿಗೆ, ಕಣ್ಣು, ಕಿವಿ ಮನಸುಗಳೆಲ್ಲರಲ್ಲಿಯೂ ಶಿವನನ್ನೇ ತುಂಬಿಕೊಂಡ ಬಸವಣ್ಣನವರ ಈ ಬಗೆ ಅವನ ಭಕ್ತಿ ತನ್ಮಯತೆಯ ದ್ಯೋತಕವಾಗಿದೆ, ಅಂತಹ ಮಹಾನುಭಾವರಾದ ಬಸವಣ್ಣನ ಭಕ್ತಿಗೆ ಬೆರಗಾಗಿ ಅವರನ್ನು ಗುರುವಾಗಿಸಿಕೊಂಡು ಗುಪ್ತಮಂಚಣ್ಣ ತನ್ನ ತನುವನ್ನು ಬಸವಣ್ಣನಿಗೆ ಅರ್ಪಿಸಿಕೊಂಡಿದ್ದಾನೆ. ಇನ್ನು ಲಿಂಗದ ಬಗ್ಗೆ ಹೇಳುವುದಾದರೆ ಸ್ವತಃ ವೈಷ್ಣವನಾಗಿ ಜನಿಸಿ ಶಿವ ಭಕ್ತಿಗೆ ಮಾರುಹೋಗಿ ಮಂಚಣ್ಣ ತನ್ನ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸು ಎಂದು ಶಿವನಲ್ಲಿ ಕೇಳಿಕೊಳ್ಳುತ್ತಾನೆ.

- Advertisement -

ಜಂಗಮರು ಸಾಕ್ಷಾತ್ ಶಿವನ ಸ್ವರೂಪಿಗಳು, ಇವರು ಗುರುವಿನಷ್ಟೇ ಪ್ರಾಮುಖ್ಯರೆಂದು ವಚನಕಾರರಲ್ಲಿ ಭಾವಿಸಲಾಗಿತ್ತು. ಇದರ ಬಗ್ಗೆ ಎಂ.ಎಂ.ಕಲಬುರ್ಗಿಯವರು ಬಸವಣ್ಣನವರ ವಚನವಾದ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!ಎಂಬ ವಚನವನ್ನು ವಿಶ್ಲೇಷಿಸುವಾಗ ಮರಕ್ಕೆ ಆಹಾರ ದೊರೆಯುವುದು ಬೇರಿನ ಮೂಲಕ ಆ ಬೇರು ನೆಲದಡಿಯಲ್ಲಿ ಮರೆಯಾಗಿದ್ದರು ತಳಕ್ಕೆ ನೀರಿರೆದರೆ ಮೇಲೆ ಚಿಗುರಿದ್ದು ಕಾಣಿಸುವುದು, ಜಂಗಮರು ಕೂಡ ಬೇರಿನಂತೆ ಲಿಂಗದಬಾಯಿ ಜಂಗಮರಿಗೆ ಆಹಾರವನ್ನು ನೀಡಿದರೆ ಅದನ್ನು ಶಿವನು ಸ್ವೀಕರಿಸಿ ನೀಡಿದವರಿಗೆ ಈಯುವನು ಹರನಂತೆ ಕಾಣಿಸುವ ಜಂಗಮನನ್ನು ಕೇವಲ ಮನುಷ್ಯನೆಂದು ಕೀಳುಗಳೆದವನಿಗೆ ನರಕ ತಪ್ಪದು. ಬಸವಣ್ಣನವರ ಸಮಕಾಲೀನನಾದ ಗುಪ್ತಮಂಚಣ್ಣ ಅವರ ಗುರುಲಿಂಗ ಜಂಗಮ ಭಕ್ತಿಯಿಂದ ಪ್ರಭಾವಿತರಾಗಿ ತಾವು ಕೂಡ ಅಷ್ಟೇ ನಿಷ್ಠೆಯಿಂದ ಶಿವಭಕ್ತಿಯನ್ನು ಪಾಲಿಸುತ್ತಿದ್ದರು. ಇಂತಹ ತ್ರಿವಿಧ ದಾಸೋಹ ನೀಡಿದ ಶರಣರಿಗೆ ನಮೋ ನಮೋ ಹೇಳುತ್ತಾ ಬದುಕುವೆ ಎಂದು ಈ ವಚನದ ಮೂಲಕ ಹೇಳಿದ್ದಾರೆ. ಶಿವನನ್ನು ಒಲಿಸಿಕೊಳ್ಳಬೇಕಾದರೆ ಮೊದಲು ನಮ್ಮನ್ನು ನಾವು ತನು ಮನ ಧನದಿಂದ ಲಿಂಗಕ್ಕೆ ಅರ್ಪಿತವಾಗಬೇಕು ಎಂದು ತಮ್ಮ ಪ್ರತಿಯೊಂದು ವಚನದಲ್ಲಿ ಶಿವನ ಕುರಿತಾದ ಭಕ್ತಿಯನ್ನು ಸಾರಿದ್ದಾರೆ.
ಆತ್ಮಪರಮಾತ್ಮನೊಂದಿಗೆ ಲೀನವಾದಾಗ ಮಾತ್ರ ಮುಕ್ತಿ ಹೊಂದುವುದಕ್ಕೆ ಸಾಧ್ಯವೆಂದು ಪ್ರತಿಯೊಂದು ವಚನದಲ್ಲಿ ಪ್ರತಿಪಾದಿಸಿದ್ದಾರೆ.
ಆಕರ ಗ್ರಂಥ: ಸಮಗ್ರ ವಚನ ಸಂಪುಟ.

ವಿಜಯಲಕ್ಷ್ಮಿ ಕಲಬುರ್ಗಿ.
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟ.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group