ಸಿಂದಗಿ; ಕೊಪ್ಪಳ ಜಿಲ್ಲೆಯ ದಲಿತ ಯುವಕನ ಹತ್ಯೆ ಮತ್ತು ಕೊಲ್ಕತ್ತಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದಲಿತ. ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಶಿರಸ್ತೆದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಬೂಬ ಸಿಂದಗಿಕರ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗ ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಕೊಲೆ ಸುಲಿಗೆ ಹೆಚ್ಚಾಗಿದ್ದು. ಭಾರತ ಸಂವಿಧಾನದಲ್ಲಿ ಅಸ್ಪೃಶ್ಯತೆಗಾಗಿ ನಿರ್ಮೂಲನೆಗಾಗಿ ಕಾನೂನುಗಳು ಇದ್ದರೂ ಇನ್ನೂ ಸಹ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಇದೆ ಇದಕ್ಕೆ ತಾಜಾ ಉದಾಹರಣೆ ಎಂದರೆ ಮೊನ್ನೆ ಆಗಸ್ಟ್ ೧೮/೮/೨೪ ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕನನ್ನು ಹೇರ್ ಕಟ್ ಮಾಡಲು ನಿರಾಕರಿಸಿ ಕತ್ರಿ ಇರದು ಕೊಲೆ ಮಾಡಿರುವ ಘಟನೆ…
ಕೇಂದ್ರ ಸರ್ಕಾರ ಇವತ್ತು ಭೇಟಿ ಬಚಾವೋ ಬೇಟಿ ಪಢಾವೊ ಎಂಬ ಯೋಜನೆಗಳನ್ನು ಜಾರಿ ಮಾಡಿದ್ದರೂ ಇಂದು ಪ್ರತಿ ೧೫ ನಿಮಿಷಕ್ಕೊಮ್ಮೆ ಭಾರತ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಕೊಲೆಗಳು ಆಗ್ತಾ ಇದೆ ಇದನ್ನು ಖಂಡಿಸಿ ದಲಿತ ಸೇನೆ ಸಿಂದಗಿ ತಾಲೂಕ ಸಮಿತಿ ವತಿಯಿಂದ ಬೃಹತ್ ಮೆರವಣಿಗೆ ಮೂಲಕ ಸಿಂದಗಿ ತಾಲೂಕ ದಂಡಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು
ಈ ವಿಕೃತ ಕೃತ್ಯ ಎಸಗಿರುವ ಆರೋಪಿಗಳನ್ನು ಅತ್ಯಂತ ಕಠಿಣ ಶಿಕ್ಷೆಗೊಳಪಡಿಸಲು ದಲಿತ ಸೇನೆ ವತಿಯಿಂದ ಆಗ್ರಹಿಸಿ ತಾಲೂಕ ದಂಡಾಧಿಕಾರಿಗಳು ಸಿಂದಗಿ ಇವರ ಮುಖಾಂತರ ಘನತೆವೆತ್ತ ರಾಷ್ಟ್ರಪತಿ ಹಾಗೂ ಗೃಹ ಸಚಿವರು ಕರ್ನಾಟಕ ಸರ್ಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು…
ಈ ಹೋರಾಟದಲ್ಲಿ ದಲಿತ ಸೇನೆ ತಾಲೂಕ ಅಧ್ಯಕ್ಷ ಬಾಲಕೃಷ್ಣ ಚಲವಾದಿ ಯುವ ಹೋರಾಟಗಾರ ರವಿ ಹೋಳಿ ದಲಿತ ಸೇನೆ ತಾಲೂಕು ಉಪಾಧ್ಯಕ್ಷ ಸಾಹು ಬುಕ್ಕದ್ ಮಹಿಳಾ ಅಧ್ಯಕ್ಷ ಸಫಿಯಾ ಶೇಕ್ ಜಾಫರ್ ಇನಾಮ್ದಾರ್ ಮೊಹಮ್ಮದ್ ಅಲಂದ್ ಸುಮಿತ್ ಕಕ್ಕಸ್ಕೇರಿ ಅಂಬರೀಶ್ ಕೊಂಡಗುಳಿ ಫಿರೋಜ್ ನಿಂಬರ್ಗಿ ಫಯಾಜ್ ಕರ್ಣಂಚಿ ಇನ್ನೂ ಅನೇಕ ಜನ ಕಾರ್ಯಕರ್ತರು ಉಪಸ್ಥಿತರಿದ್ದರು.