ಬೀದರ – ಗಡಿ ಜಿಲ್ಲೆ ಬೀದರನಲ್ಲಿ ಲೋಕ ನೃತ್ಯ ಭಾರತ ಭಾರತಿ ಕಾರ್ಯಕ್ರಮ ಹುಲಸೂರ ಪಟ್ಟಣದ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಆಯೋಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯ ಚೆಲುವೆಯರಿಂದ ಹಾಗೂ ಯುವಕರಿಂದ ಆಕರ್ಷಕ ಕಾಶ್ಮೀರಿ ನೃತ್ಯ ಮತ್ತು ದಾಂಡಿಯಾ ಸೇರಿದಂತೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು.
ಕಾಶ್ಮೀರ ಕಣಿವೆ ಹೆಣ್ಣು ಮಕ್ಕಳ ಕುಣಿತಕ್ಕೆ ಮನಸೋತು ಖುಷಿ ಸಂತೋಷದಿಂದ ಚಪ್ಪಾಳೆ ತಟ್ಟಿದರು.
ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ,ಬೀದರ ಜಿಲ್ಲೆ ಹುಲಸೂರ ತಾಲ್ಲುಕಾ ಘಟಕ ಹಾಗು ಕ.ಜಾ.ಪ ಹುಲಸೂರ ತಾಲ್ಲುಕಾ ಘಟಕದ ಕಾರ್ಯಚಟುವಟಿಕೆ ಉದ್ಗಾಟನಾ ಸಮಾರಂಭ ವನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗು ಮಠಾಧಿಶರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.
ಲೋಕ ನೃತ್ಯ ಭಾರತ ಭಾರತಿ ಕಾರ್ಯಕ್ರಮ ದಲ್ಲಿ ಹೊರ ರಾಜ್ಯಗಳಾದ, ಜಮ್ಮುಕಾಶ್ಮಿರ,ಓಡಿಸ್ಸಾ,ಛತ್ತಿಸಗಡ,ಪಂಜಾಬ, ಮಧ್ಯಪ್ರದೇಶ,ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಕಲಾ ತಂಡಗಳು ತಮ್ಮ ತಮ್ಮ ಜನಪದ ನೃತ್ಯಗಳ ಪ್ರದರ್ಶನ ನೀಡಿದವು.
ವರದಿ: ನಂದಕುಮಾರ ಕರಂಜೆ, ಬೀದರ