spot_img
spot_img

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಾಂಕ್ರೀಟ್ ಕಂಬ

Must Read

spot_img
       ಮೂಡಲಗಿ: -ಪಟ್ಟಣದ ಕಾಯಿಪಲ್ಯ ಬಜಾರನಲ್ಲಿ ಇದ್ದ  ಹಳೆಯ ಕಟ್ಟಡ ನೆಲ ಸಮ ಮಾಡಿ ಎರಡ್ಮೂರು ವರ್ಷ ಮುಗಿದಿರ ಬಹುದು ಇನ್ನೂ ಅದರ ಉಳಿಕೆಯನ್ನು ಪರಭಾರೆ ಮಾಡುವ ಕೆಲಸ ಪುರಸಭೆಯಿಂದ ಆಗಿಲ್ಲ. ಇದೇ ಹಳೆಯ ಕಟ್ಟಡಕ್ಕೆ ಆಧಾರವಾಗಿ ನಿಂತಿರುವ ಕಾಂಕ್ರೀಟ್ ಕಂಬವೊಂದು ಯಾವಾಗ ಯಾರ ಮೇಲೆ ಬಿದ್ದು ಆಹುತಿ ತೆಗೆದುಕೊಳ್ಳುವುದೋ ಏನೋ ಎಂಬ ಆತಂಕವಿದೆ.
   ಸುಮಾರು ವರ್ಷದ ಹಳೆಯ ಕಟ್ಟಡವನ್ನು ಪುರಸಭೆ ಕೆಡವಿದೆ,ನಾಶವಾದ ಕಟ್ಟಡದ ಕಲ್ಲು,ಮಣ್ಣು ಹಾಗೆ ಇದೆ.ಸ್ವಲ್ಪ ಮಟ್ಟಿಗೆ ಸಳಿ ಹಿಡಿದು ಕೊಂಡು ಇರುವ ಸಿಮೆಂಟಿನ ಕಂಬ ನಿಂತಿರುವುದು ಪುರಸಭೆ ಅಧಿಕಾರಿಗಳಿಗೆ ಕಂಡಿಲ್ಲವಾ…?ಎಂದು ಸಾರ್ವಜನಿಕರ ಪರವಾಗಿ ಹೋರಾಟಗಾರ ಮಹಾಲಿಂಗಯ್ಯ ನಂದಗಾವಮಠ ಕೇಳುತ್ತಿದ್ದಾರೆ.
      ಈಗಾಗಲೇ ಹಲವಾರು ಬಾರಿ ಮೂಡಲಗಿ ಪುರಸಭೆಗೆ ಕೆಲ ಸಮಸ್ಯೆಗಳ ಬಗ್ಗೆ ಹೇಳಲಾಗಿದೆ. ಆದರೂ ಪುರಸಭೆ ಕಿವುಡಾಗಿದೆ. ಯಾವುದೇ ಸುಧಾರಣೆ ಕಾರ್ಯಗಳು ಆಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
  ಸಿಮೆಂಟಿನ ಕಂಬವನ್ನು ಚಿಕ್ಕದಾದ ಕಬ್ಬಿಣದ ಸಳಿ ಹಿಡಿದುಕೊಂಡಿದೆ,ಅದು  ಜನಸಂದಣಿ ಇರುವ ರಸ್ತೆ ಅದು ಯಾರ ಮೇಲೆಯಾದ್ರು ಬಿದ್ದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ.ಇದನ್ನು ಕೂಡಲೇ ನಿವಾರಿಸಬೇಕು. ಮೂಡಲಗಿ ಪಟ್ಟಣವು ಈಗ ತಾಲೂಕು ಕೇಂದ್ರವಾಗಿದೆ,ಪರಸ್ಥಳದಿಂದ ಬಂದವರಿಗೆ ಸ್ವಚ್ಛ ಸುಂದರ ನಗರದಂತೆ ಕಾಣಬೇಕು. ಒಳಚರಂಡಿ ಇರಲಿ,ದೇವಸ್ಥಾನದ ದಾರಿ ಇರಲಿ ಹಾಗೂ ಮುಖ್ಯ ರಸ್ತೆ ಇರಲಿ ಬರಿ ಗಲೀಜು ಕಾಣುತ್ತಿದೆ. ಪುರಸಭೆ ಸ್ವಚ್ಛತೆಗೆ ಗಮನ ಕೊಡಬೇಕು
     ಚರಂಡಿಯ ಮೇಲಿನ ಕಾಂಕ್ರೀಟ್ ಸಳಿಗಳಿಂದ ಈಗಾಗಲೇ ಅನಾಹುತ ಸಂಭವಿಸಿವೆ, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಪಾಲಕರು ಹಾನಿ ಅನುಭವಿಸುವಂತಾಗಿದೆ ಅನಾಹುತಕ್ಕೆ ಹೊಣೆ ಯಾರು?.ಬಡವರ ಮಕ್ಕಳ ಗೋಳು ಕೇಳುವವರು ಯಾರು ಎಂದು ಕೇಳಿರುವ  ನಂದಗಾಂವಮಠ ಅವರು ಪುರಸಭೆಯವರು ಆದಷ್ಟು ಬೇಗ ಇದನ್ನು ನಿವಾರಿಸಿ ಮುಂದಿನ ಅಪಾಯಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
- Advertisement -
- Advertisement -

Latest News

ಫೆ. 8ರಂದು ಸಿಲಿಕಾನ್ ಸಿಟಿಯಲ್ಲಿ ಕುಂದಾಪುರದ ಯಶಸ್ವಿ ಕಲಾ ವೃಂದ (ಕೊಮೆ, ತೆಕ್ಕಟ್ಟೆ) ಸಂಸ್ಥೆ ಗೆ 25 ರ ಸಂಭ್ರಮ !

ಫೆಬ್ರವರಿ, 8 ರಂದು ರಾಜ್ಯ ರಾಜಧಾನಿಯಲ್ಲಿ ಯಶಸ್ವೀ ಕಲೋಲ್ಲಾಸ  ಕರಾವಳಿ ಭಾಗದ ಪ್ರತಿಷ್ಠಿತ ಸಂಸ್ಥೆ ಬೆಳ್ಳಿ ಹಬ್ಬದ ಸಡಗರವನ್ನು ೧೦೮ನೇ ಕಾರ್ಯಕ್ರಮವನ್ನು ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group