ಬಸವ ಶರಣ ಕಕ್ಕಯ್ಯನವರ ಕ್ಷೇತ್ರದಲ್ಲಿ ಪ್ರತಿ ಅಮಾವಾಸ್ಯೆಂದು ದಾಸೋಹ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬೆಳಗಾವಿ: ಗೋಕಾಕನ ಶ್ರೀ ಡೋಹರ ಕಕ್ಕಯ್ಯ ಜ್ಞಾನ ಪೀಠ ವೃದ್ದಾಶ್ರಮ ಟ್ರಸ್ಟ ಮತ್ತು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿರುವ 12 ನೇ ಶತಮಾನದ ಬಸವಾದಿ ಶರಣ ಮಹಾಪ್ರಸಾದಿ ಡೋಹರ ಕಕ್ಕಯ್ಯನವರ ಕ್ಷೇತ್ರವಾದ ಸಮಸ್ತ ಕಕ್ಕೇರಿ ಗ್ರಾಮಸ್ಥರು ಹಾಗೂ ಗುರು ಹಿರಿಯರ ಸಹಕಾರದಿಂದ ಪ್ರತಿ ಅಮಾವಾಸ್ಯೆಯ ದಿನದಂದು ವಚನಾಭಿಷೇಕ ಮತ್ತು ದಾಸೋಹ ನಡೆಸಲು ತೀಮಾನಿಸಲಾಗಿದೆ.

ಎಪ್ರಿಲ್ 11 ರಂದು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಕಕ್ಕಯ್ಯನವರ ಗದ್ದುಗೆ ಸ್ಥಳದಲ್ಲಿ ಚಾಲನೆ ನೀಡಲಾಗುವದು. ಬೆಳಿಗ್ಗೆ 6 ಗಂಟೆಯಿಂದಲೇ ವಚನಾಭೀಷೇಕ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುವವು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮಹಾಪ್ರಸಾದ ನಡೆಯುವದು.. ಶಂಭುಲಿಂಗೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮಗಳನ್ನು ಕಕ್ಕೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಭೀಮಪ್ಪ ಅಂಬೋಜಿ ಉದ್ಘಾಟಿಸುವರು.

ಗದ್ದುಗೆಯ ಪೂಜಾರಿ ರಾಮಯ್ಯ ಹೊನ್ನಳ್ಳಿಮಠ, ಭೀಷ್ಠಾದೇವಿ ಗದ್ದುಗೆಯ ಪೂಜಾರಿ ಯಲ್ಲಪ್ಪ ಬಾಗೋಜಿ, ಭಜನಾ ಮಂಡಳಿಯ ಸಂಗಪ್ಪ ಮಾಟೋಳಿ, ಗ್ರಾಮದ ಸಮಾಜ ಸೇವಕ ರಾಮು ದಿಬ್ಬದಮನಿ, ತೇಗೂರು ಬಂಧುಗಳು ಸೇರಿದಂತೆ ಸಮಾಜದ ಅನೇಕ ಗಣ್ಯರು ಹಾಗೂ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳ ಭಕ್ತಾದಿಗಳು ಭಾಗವಹಿಸುವರು ಎಂದು ಶ್ರೀ ಡೋಹರ ಕಕ್ಕಯ್ಯ ಜ್ಞಾನ ಪೀಠ ವೃದ್ದಾಶ್ರಮ ಟ್ರಸ್ಟ ಮಾಯಪ್ಪ ಮಾವಕರ ಅವರು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ವಿಶೇಷ ಪೂಜೆ ಸಲ್ಲಿಸಬಯಸುವವರು ಗದ್ದುಗೆಯ ಪೂಜಾರಿ ರಾಮಯ್ಯ ಹೊನ್ನಳ್ಳಿಮಠ ಮೋ.ನಂ. 9686811795, ಮತ್ತು ಮಹಾಪ್ರಸಾದಕ್ಕೆ ತಮ್ಮ ಸೇವೆ ಅರ್ಪಿಸಬಯಸುವವರು ನಾಗಪ್ಪ ಕೊಕಡೊಳ್ಳಿ ಮೋ.ನಂ. 7259451414, ಮಾಯಪ್ಪ ಮಾವರಕರ ಮೋ.ನಂ.9449665826, ಮಂಜುನಾಥ ಮಾಹುರಕರ ಮೋ.ನಂ 9741777640 ಅಥವಾ ತ್ಯಾಗರಾಜ ಕದಂ ಮೋ.ನಂ. 9620497129 ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಡೋಹರ ಕಕ್ಕಯ್ಯನವರು ಬಸವಣ್ಣನವರ ಶರಣರ ಬಳಗದಲ್ಲಿ ದಾಸೋಹಕ್ಕೆ ಹೆಸರಾದವರಾಗಿದ್ದರು. ವೀರ ಶರಣರಾಗಿದ್ದರು. 12 ನೇ ಶತಮಾನದಲ್ಲಿ ಡೋಹರ ಕಕ್ಕಯ್ಯನವರ ದಾಸೋಹ ಸೇವೆಯನ್ನು 21 ನೇ ಶತಮಾನದಲ್ಲಿ ಮುಂದುವರೆಸಿಕೊಂಡು ಹೋಗಬೇಕೆಂಬ ಮಹಾದಾಸೆಯಿಂದ ಈ ದಾಸೋಹ ಸೇವೆ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!